3 ತಿಂಗಳ ಹೆಣ್ಣುಮಗುವನ್ನ ನಡುರಸ್ತೆಯಲ್ಲೇ ಬಿಟ್ಟು ಹೋದ ನಿರ್ದಯಿ ತಾಯಿ!

ಮೂರು ತಿಂಗಳ ಹೆಣ್ಣುಮಗುವನ್ನ ನಿರ್ದಯಿ ತಾಯಿಯೊಬ್ಬಳು ನಡುಬೀದಿಯಲ್ಲಿ ಬಿಟ್ಟು ಹೋದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೆಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ. 4.5 ಕೆಜಿ ತೂಕವಿರುವ ಮಗು. ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟು ಹೋಗಿರುವ ಶಂಕೆ ಇದೆ

A baby girl rescue by  asha worker in nonavinakere at tumakuru district rav

ತುಮಕೂರು (ಜು.8): ಮೂರು ತಿಂಗಳ ಹೆಣ್ಣುಮಗುವನ್ನ ನಿರ್ದಯಿ ತಾಯಿಯೊಬ್ಬಳು ನಡುಬೀದಿಯಲ್ಲಿ ಬಿಟ್ಟು ಹೋದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೆಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

4.5 ಕೆಜಿ ತೂಕವಿರುವ ಮಗು. ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟು ಹೋಗಿರುವ ಶಂಕೆ ಇದೆ. ಅದೃಷ್ಟವಶಾತ್ ಯಾವುದೇ ಪ್ರಾಣಿಗಳ ದಾಳಿಗೆ ಒಳಗಾಗಿಲ್ಲ. ಮಗುವನ್ನು ಯಾರು, ಯಾವಾಗ ಬಿಟ್ಟು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಶಾ ಕಾರ್ಯಕರ್ತೆ ಕಲಾವತಿ ಎಂಬುವವರು ಮುಂಜಾನೆ ವಾಕಿಂಗ್ ಮಾಡುತ್ತಿದ್ದಾಗ ಮಗು ಅಳುತ್ತಿರುವ ಸದ್ದು ಕೇಳಿಸಿದೆ. ಮಗುವಿನ ಅಳುವಿನ ಸದ್ದು ಬಂದ ಕಡೆ ಹೋಗಿ ನೋಡಿದಾಗ ನೆಲದಲ್ಲಿ ಅನಾಥವಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ನೊಣವಿಕೆರೆ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದ ಕಾರ್ಯಕರ್ತೆ. ಸ್ಥಳಕ್ಕೆ ಬಂದ ಪೊಲೀಸರು. ಆಂಬುಲೆನ್ಸ್‌ ಮೂಲಕ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ರಸ್ತೆ ಅಪಘಾತಕ್ಕೆ 13 ಜನ ದುರ್ಮರಣ ಪ್ರಕರಣ: ಎಮ್ಮೆಹಟ್ಟಿ ಗ್ರಾಮಕ್ಕೆ ಗೀತಾ ಶಿವರಾಜ್ ಕುಮಾರ್ ಭೇಟಿ

ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಸದ್ಯ ಆರೋಗ್ಯವಾಗಿದೆ. ನೋಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗುವಿನ ಪೋಷಕರ ಪತ್ತೆಗೆ ಮುಂದಾಗಿರುವ ಪೊಲೀಸರು.
 

Latest Videos
Follow Us:
Download App:
  • android
  • ios