* ಕೊರೋನಾ ಗೆದ್ದ ಜಾಹ್ನವಿ ಗಜಾನನ ಭಟ್ಟ * ಹೋಂ ಐಸೋಲೇಶನ್‌ನಲ್ಲಿಯೇ ಇದ್ದು ಗುಣಮುಖರಾದ ಹಿರಿಯ ಜೀವ* ವೈರಸ್‌ಗೆ ಅಂಜದೆ ಯುವಕರಿಗೆ ಮಾದರಿಯಾದ ವೃದ್ಧೆ

ಶಿರಸಿ(ಜೂ.27): 96 ವರ್ಷದ ಅಜ್ಜಿಯೊಬ್ಬರಿಗೆ ಕೋವಿಡ್‌ ಸೋಂಕು ತಗುಲಿ ಅದನ್ನು ಗೆದ್ದು ನಿತ್ಯದ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಗಟ್ಟಿಯಾಗಿದ್ದಾರೆ. 

ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದ ಕುಳವೆ ಭಟ್ರಮನೆಯ ಹಿರಿಯಾಕೆ ಜಾಹ್ನವಿ ಗಜಾನನ ಭಟ್ಟ ಹೋಂ ಐಸೋಲೇಶನ್‌ನಲ್ಲಿಯೇ ಇದ್ದು ಗುಣಮುಖರಾಗಿದ್ದಾರೆ. 

ಯಾದಗಿರಿ: 20 ದಿನ ಹೋರಾಡಿ ಕೋವಿಡ್‌ ಗೆದ್ದ 80ರ ಅಜ್ಜಿ..!

ಮೇ 31ರಂದು ಕೋವಿಡ್‌ ಸೋಂಕು ತಗುಲಿದಾಗ ಮನೆಯವರು ಆತಂಕಗೊಂಡರು ಅಜ್ಜಿ ಹೆದರಿಲ್ಲ. ಮನೆಯಲ್ಲಿ ಚಿಕಿತ್ಸೆ ನೀಡಿದ್ದರಿಂದ ಹತ್ತು ದಿನಗಳ ಹಿಂದೇ ಸೋಂಕು ಕಡಿಮೆಯಾಗಿದೆ. ಇದೀಗ ಸಂಪೂರ್ಣ ಗುಣಮುಖರಾಗಿದ್ದು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.