ಕರ್ನಾಟಕದಲ್ಲಿ ಕೊರೋನಾ ಆರ್ಭಟ/ ಒಂದೇ ದಿನ ಬರೋಬ್ಬರಿ 9,386 ಪ್ರಕರಣ/ ರಾಜಧಾನಿ ಬೆಂಗಳೂರಿನಲ್ಲಿ 3,357 ಪ್ರಕರಣ/ ಎಲ್ಲದರ ನಡುವೆ ಅನ್ ಲಾಕ್ ನಾಲ್ಕಕ್ಕೆ ಸಿದ್ಧತೆ
ಬೆಂಗಳೂರು(ಆ. 27) ಕರ್ನಾಟಕದಲ್ಲಿ ಕೊರೋನಾ ಮಾತ್ರ ದಾಖಲೆಯ ಮೇಲೆ ದಾಖಲೆ ಮಾಡುತ್ತಲೇ ಇದೆ. ಗುರುವಾರ ರಾಜ್ಯದಲ್ಲಿ ಬರೋಬ್ಬರಿ 9,386 ಪ್ರಕರಣ ಪತ್ತೆಯಾಗಿದ್ದು ಒಟ್ಟು ಸಂಖ್ಯೆ ಮೂರು ಲಕ್ಷದ ಒಂಭತ್ತು ಸಾವಿರಕ್ಕೆ ಏರಿದೆ.
141 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಮೃತಪಟ್ಟವರ ಸಂಖ್ಯೆ 5,232ಕ್ಕೆ ಏರಿಕೆಯಾಗಿದೆ. ಗುರುವಾರ ಇಂದು 7,866 ಮಂದಿ ಡಿಸ್ಚಾರ್ಜ್ ಆಗಿದ್ದು 2,19,554 ಮಂದಿ ಚೇತರಿಸಿಕೊಂಡಿದ್ದಾರೆ. 84,987 ಸಕ್ರಿಯ ಪ್ರಕರಣಗಳಿವೆ. 747 ರೋಗಿಗಳು ಐಸಿಯುನಲ್ಲಿ ಇದ್ದಾರೆ.
ಕೊರೋನಾಕ್ಕೆ ಯುವಕರೆ ಟಾರ್ಗೆಟ್ ಯಾಕೆ?
ಬೆಂಗಳೂರಿನಲ್ಲಿ 3,357 ಪ್ರಕರಣ ಪತ್ತೆಯಾಗಿದ್ದು 59 ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ಇನ್ನೊಂದು ಹಂತದ ಅಲ್ ಲಾಕ್ ಗೆ ಮುಂದಾಗಿದೆ, ಆದರೆ ಕೊರೋನಾ ಪ್ರಕರಣ ಮಾತ್ರ ಹಿಡಿತಕ್ಕೆ ಸಿಗುತ್ತಿಲ್ಲ
ಮೆಟ್ರೋ, ಸ್ವಿಮಿಂಗ್ ಪೂಲ್ , ಸಿನಿಮಾ ಮಂದಿರ ಮತ್ತು ಶಾಲೆ ಆರಂಭಕ್ಕೂ ಸರ್ಕಾರಗಳು ಹೆಜ್ಜೆ ಇಡುತ್ತಿವೆ. ಆದರೆ ಪ್ರತಿನಿತ್ಯ ದಾಖಲಾಗುತ್ತಿರುವ ಕೇಸುಗಳು ಮಾತ್ರ ಕೊರೋನಾದ ಘೋರ ಕತೆ ಹೇಳುತ್ತಿವೆ.
