ಚಿಕ್ಕಮಗಳೂರಿನಲ್ಲಿ ಪೊಲೀಸ್‌ ಕುಟುಂಬದ ನಾಲ್ವರು ಸೇರಿದಂತೆ ಒಂದೇ ದಿನ 9 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚಿಕ್ಕಮಗಳೂರು(ಜು.06): ಆರಂಭದಲ್ಲಿ ಕೊರೋನಾ ಕೇಸ್‌ಗಳಿಲ್ಲದೇ ನಿರಾಂತಕವಾಗಿದ್ದ ಕಾಫಿನಾಡು ಚಿಕ್ಕಮಗಳೂರಿನ ಮೇಲೆ ಮದ್ದಿಲ್ಲದ ಮಹಾಮಾರಿ ತನ್ನ ಕೆಂಗಣ್ಣನ್ನು ಬೀರಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ನಗರದ ಪಾಲಿಗೆ ಸಂಡೇ ಬ್ಯಾಡ್‌ ಡೇ ಆಗಿ ಪರಿಣಮಿಸಿದೆ. ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 9 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 8 ಪ್ರಕರಣಗಳು ಚಿಕ್ಕಮಗಳೂರು ನಗರಕ್ಕೆ ಸೇರಿದ್ದಾಗಿವೆ. ಈ 8 ಪ್ರಕರಣಗಳ ಪೈಕಿ ನಗರದ ಪೊಲೀಸ್‌ ಕುಟುಂಬವೊಂದರಲ್ಲೇ 4 ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ.

ಇಲ್ಲಿನ ಶಂಕರಪುರ, ಗೌರಿಕಾಲುವೆ, ಬಾರ್‌ಲೈನ್‌ ರೋಡ್‌ ಹಾಗೂ ತಾಲೂಕಿನ ಕೆ.ಆರ್‌.ಪೇಟೆಯ ಹಲಸುಮನೆ ಗ್ರಾಮದಲ್ಲಿ ಭಾನುವಾರ ಈ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಪಾಸಿಟಿವ್‌ ಪ್ರಕರಣ ಬಂದಿರುವ ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಗುರುತಿಸಿದ್ದು, ಈ ಎಲ್ಲ ಆತಂಕಗಳ ನಡುವೆಯೇ ಭಾನುವಾರ ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!

ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಲ್ಲಿ 44 ಸಕ್ರಿಯ ಕೊರೋನಾ ಪ್ರಕರಣಗಳಿವೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಕೊರೋನಾ ವಾರಿಯರ್ಸ್‌ಗಳು ಈ ಹೆಮ್ಮಾರಿಗೆ ತುತ್ತಾಗಿದ್ದನ್ನು ಕೇಳುತ್ತಿದ್ದ ಕಾಫಿನಾಡಿನ ಮಂದಿಗೆ ಇದೀಗ ನಗರ ಪೊಲೀಸ್ ಕುಟುಂಬಕ್ಕೆ ಸೋಂಕು ಅಪ್ಪಳಿಸಿರುವುದು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.