ಬೆಂಗಳೂರು (ನ.18):  ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠಗಳಿಗೆ ಮೂರು ದಿನ ಚಳಿಗಾಲದ ರಜೆ ಕಡಿತಗೊಳಿಸಿದೆ. 

ಹೈಕೋರ್ಟ್‌ನ ಮೂರು ನ್ಯಾಯಪೀಠಗಳಿಗೆ ಡಿ.24ರಿಂದ ಜ.1ರವರೆಗೆ ಒಟ್ಟು 9 ದಿನಗಳ ಕಾಲ ಚಳಿಗಾಲದ ರಜೆ ಘೋಷಿಸಲಾಗಿದೆ. 

ಗ್ರಾಮ ಪಂಚಾಯತಿ ಎಲೆಕ್ಷನ್‌ಗೆ ಗ್ರೀನ್ ಸಿಗ್ನಲ್: ಆಯೋಗಕ್ಕೆ ಕೋರ್ಟ್ ಮಹತ್ವದ ಸೂಚನೆ...

ಪೂರ್ವನಿಗದಿಯಂತೆ ಚಳಿಗಾಲದ ರಜೆ ಡಿ.21ರಿಂದ ಆರಂಭಗೊಂಡು ಜ.1ಕ್ಕೆ ಮುಕ್ತಾಯವಾಗಬೇಕಿತ್ತು. ಜನವರಿ 2 ಮತ್ತು 3 ಶನಿವಾರ ಹಾಗೂ ಭಾನುವಾರ ರಜೆಯಾಗಿದ್ದು, ಹೈಕೋರ್ಟ್‌ ಪೀಠಗಳು ಜ.4ರಿಂದ ಕಾರ್ಯಾರಂಭ ಮಾಡಲಿವೆ ಎಂದು ರಿಜಿಸ್ಟ್ರಾರ್‌ ಜನರಲ್‌ ರಾಜೇಂದ್ರ ಬಾದಾಮಿಕರ್‌ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆದರೆ, ಕೊರೋನಾ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಪೂರ್ಣ ಸಮಯ ಕಾರ್ಯನಿರ್ವಹಿಸದ ಕಾರಣ ರಜೆ ಕಡಿತಗೊಳಿಸಲಾಗಿದೆ.