Asianet Suvarna News Asianet Suvarna News

8 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ

ಕೊರೋನಾ ಸೋಂಕಿನಿಂದ ಗುಣಮುಖರಾದ 8 ಮಂದಿಯನ್ನು ಜಿಲ್ಲಾ ಎಸ್‌ಎನ್‌ಆರ್‌ ಆಸ್ವತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಬಿಡುಗಡೆಯಾದವರಿಗೆ ಹಣ್ಣುಗಳನ್ನು ನೀಡಿ ಬಿಡುಗಡೆ ಮಾಡಿ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ ಇರುವಂತೆ ತಿಳಿಸಿದರು.

8 covid19 patients discharged from hospital after they test negative
Author
Bangalore, First Published Jun 11, 2020, 2:31 PM IST

ಕೋಲಾರ(ಜೂ.11): ಕೊರೋನಾ ಸೋಂಕಿನಿಂದ ಗುಣಮುಖರಾದ 8 ಮಂದಿಯನ್ನು ಜಿಲ್ಲಾ ಎಸ್‌ಎನ್‌ಆರ್‌ ಆಸ್ವತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಬಿಡುಗಡೆಯಾದವರಿಗೆ ಹಣ್ಣುಗಳನ್ನು ನೀಡಿ ಬಿಡುಗಡೆ ಮಾಡಿ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ ಇರುವಂತೆ ತಿಳಿಸಿದರು.

ತಾಲೂಕಿನ ಪಿ-2418, ಪಿ-3007, ಪಿ-3927, ಮಾಲೂರು ತಾಲೂಕಿನ ಪಿ-3661, ಕೆಜಿಎಫ್‌ ತಾಲೂಕಿನ ಪಿ-2851, ಬಂಗಾರಪೇಟೆ ತಾಲೂಕಿನ ಪಿ-3186, ಮುಳಬಾಗಿಲು ತಾಲೂಕಿನ ಪಿ-2849, ಪಿ-2850 ಸಂಖ್ಯೆಗಳ ವ್ಯಕ್ತಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದರು. ಇವರನ್ನು ತಾಲೂಕುವಾರು ಪ್ರತ್ಯೇಕ ಅಂಬ್ಯೂಲೆನ್ಸ್‌ ಮೂಲಕ ಅವರ ಮನೆಗಳಿಗೆ ಕಳುಹಿಸಿ ಕೊಡಲಾಯಿತು.

ನೆಲಮಂಗಲ: ವರದಕ್ಷಿಣೆ ಕಿರುಕುಳ ತಾಳಲಾರದೆ ಎರಡು ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು

ಡಿಸಿ ಸಿ. ಸತ್ಯಭಾಮ ಈ ವೇಳೆ ಮಾತನಾಡಿ, ಕೊರೋನಾ ಸೋಂಕಿನಿಂದ ಗೆದ್ದ ವ್ಯಕ್ತಿಗಳನ್ನು ಸಮಾಜವು ಗೌರವದಿಂದ ನಡೆಸಿಕೊಳ್ಳಬೇಕು. ಜನರು ಇತರರಿಗೆ ಧೈರ್ಯ ತುಂಬಿ ಕೊರೋನಾ ಲಕ್ಷಣಗಳು ಕಂಡುಬಂದ ವ್ಯಕ್ತಿಗಳು ಸ್ವಯಂ ಪೇರಿತರಾಗಿ ಕೋವಿಡ್‌-19 ತಪಾಸಣೆಯನ್ನು ಮಾಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಡಾ. ರಾಧಿಕಾ, ಡಾ. ಚಾರಿಣಿ, ಡಾ. ರಮ್ಯ ಮುಂತಾದವರು ಸೇರಿ ಒಂದು ತಂಡವಾಗಿ ಕೆಲಸ ಮಾಡಿ ಜಿಲ್ಲೆಯಲ್ಲಿ ಕೊರೋನಾ ಸೊಂಕನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

ಇದೇ ಸಂದರ್ಭದಲ್ಲಿ ಅಪರ ಡಿಸಿ ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ವಿಜಯ್‌ ಕುಮಾರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಚಾರಿಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾರಾಯಣಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Follow Us:
Download App:
  • android
  • ios