ಗ್ರೀನ್ ಝೋನ್‌ನಲ್ಲಿದ್ದ ಸಿಎಂ ತವರು ಜಿಲ್ಲೆಗೆ ವಕ್ಕರಿಸಿದ ಕೊರೋನಾ...!
ವೈರಸ್ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್ ಝೋನ್) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಇದೀಗ ಕೊರೋನಾ ವಕ್ಕರಿಸಿದೆ.
ಶಿವಮೊಗ್ಗ, (ಮೇ.10): ಕರ್ನಾಟಕಕ್ಕೆ ಕೊರೋನಾ ಮಹಾಮಾರಿ ದಾಂಗುಂಡಿ ಇಟ್ಟಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗದ ಶಿವಮೊಗ್ಗದಲ್ಲಿ ಇಂದು (ಭಾನುವಾರ) 8 ಪ್ರಕರಣಗಳು ಪತ್ತೆಯಾಗಿವೆ.
ವೈರಸ್ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್ ಝೋನ್) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಶಿಕಾರಿಪುರದಲ್ಲಿ 7 ಹಾಗೂ ತೀರ್ಥಹಳ್ಳಿಯಲ್ಲಿ ಒಂದು ಪ್ರಕರಣಗಳು ಬೆಳಕಿವೆ ಬಂದಿವೆ.
21 ತಬ್ಲಿಘಿಗಳು ಸೇರಿ 136 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗ ಜಿಲ್ಲೆಯ ಹೊಳಲ್ಕೆರೆ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಈ ಪೈಕಿ 8 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಇವರೆಲ್ಲಾ ಸಿಎಂ ಬಿಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದವರೇ ಆಗಿದ್ದಾರೆ.
ಸದ್ಯ 8 ಮಂದಿ ಕೊರೋನಾ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.