ಬೆಂಗಳೂರು (ಜು.08) : ‘ಅಮೆರಿಕಾದ ನನ್ನ ಸಹೋದರ ಸಹೋದರಿಯರೆ... ’ ಇದು 1893ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಕುರಿತಂತೆ ಮಾಡಿದ ಭಾಷಣದ ಮೊದಲ ಸಾಲು.

ಅಮೆರಿಕಾದ ನನ್ನ ಸಹೋದರ, ಸಹೋದರಿ ಯರೇ ಎಂದು ಹೇಳುವ ಮೂಲಕ ‘ವಸುದೈವ ಕುಟುಂಬಕಂ’ ತತ್ವವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ ಈ ಭಾಷಣಕ್ಕೆ 126  ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅವರ ತತ್ವ ಸಿದ್ಧಾಂತಗಳನ್ನು ಸಾರಲು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾ ನ ಕಲಾ ಸಂಘ ಮುಂದಾಗಿದೆ. ಎಪ್ಪತ್ತೆರಡನೇ ಸ್ವಾತಂತ್ಯ ದಿನಾಚರಣೆ ಅಂಗವಾಗಿ ಬರುವ ಆಗಸ್ಟ್ 9 ರಿಂದ ಹತ್ತು ದಿನಗಳ ಕಾಲ ಲಾಲ್ ಬಾಗ್ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ, ಅವರ ಸಂದೇಶಗಳನ್ನು ಸಾರಲು ತೋಟಗಾರಿಕೆ ಇಲಾಖೆ ನಿರ್ಧರಿದೆ.

ವಿವೇಕಾನಂದರ ಸಂದೇಶಗಳು ಹಿಂದೂ ಧರ್ಮ ಮತ್ತು ಯುವ ಸಮೂಹದ ಶ್ರೇ ಯೋಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿವೆ. ಈ ಅಂಶಗಳನ್ನು ಫಲಪುಷ್ಪಗಳ ಮೂಲಕ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಅಗತ್ಯವಿದೆ. ಹಾಗಾಗಿ ವಿವೇಕಾನಂದರ ಇಡೀ ಜೀವನವನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಮಕೃಷ್ಣ ಮಿಷನ್‌ನಿಂದ ಮಾಹಿತಿ: ವಿವೇ ಕಾನಂದರ ಜೀವನ ಕುರಿತಂತೆ ಸಂಪೂರ್ಣ ಇತಿಹಾಸವನ್ನು ಪ್ರದರ್ಶನದಲ್ಲಿ ಅಳವಡಿಸ ಲಾಗುವುದು. ಅವರ ಜೀವನ ಕುರಿತ ಹೆಚ್ಚಿನ ಮಾಹಿತಿಯನ್ನು ರಾಮಕೃಷ್ಣ ಮಿಷನ್‌ನಿಂದ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

ವಿವೇಕಾ ನಂದ ಬಾಲ್ಯದ ಜೀವನ, ಶಿಕ್ಷಣ ಮತ್ತು ಧಾರ್ಮಿಕ ಸೇವೆ ಕುರಿತಂತೆ ಮಾಹಿತಿ ಪಡೆದು ಮಿಷನ್‌ನ ಸಲಹೆಯಂತೆ ಪ್ರದರ್ಶನ ಆಯೋ ಜಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ.ಎಂ.ವಿ. ವೆಂಕಟೇಶ್ ವಿವರಿಸಿದ್ದಾರೆ. ಕನ್ಯಾಕುಮಾರಿಯ ಸ್ಮಾರಕ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಶಿಲಾಬಂಡೆಯ ಮೇಲೆ ಸ್ವಾಮಿ ವಿವೇಕಾನಂದರ ಪ್ರತಿಮೆ ಅತ್ಯಂತ ಪ್ರಸಿದ್ಧಿಯಾಗಿದ್ದು, ಪ್ರವಾಸಿ ತಾಣವಾಗಿದೆ, ಧ್ಯಾನ ಕೇಂದ್ರವಾಗಿ ಸಹ ಹೊರ  ಹೊಮ್ಮಿದೆ. ಈ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ಜ್ಞಾನೋದಯ ಹೊಂದಿ ದರು ಎಂದು ಹೇಳಲಾಗುತ್ತಿದೆ.