ಬೆಂಗಳೂರು, (ಜು.10): ರಾಜ್ಯದಲ್ಲಿ ಕೋವಿಡ್ ಕಂಟಕ ಮುಂದುವರಿದಿದೆ. ಇಂದು (ಶನಿವಾರ)  ರಾಜ್ಯದಲ್ಲಿ 2798 ಜನರಿಗೆ ಕೋವಿಡ್ 19 ಸೋಕು ದೃಢವಾಗಿದ್ದು ಬೆಂಗಳೂರಿನ ಲೆಕ್ಕ 1533.

ಇಂದಿನ ಹೊಸ 2798 ಸೋಂಕು ಪ್ರಕರಣಗಳಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36, 216ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 70 ಮಂದಿ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 613 ಕ್ಕೇರಿದೆ. 

ಒಂದು ವಾರ ಕಾಲ ಕಂಪ್ಲೀಟ್ ಲಾಕ್‌ಡೌನ್; ಸರ್ಕಾರದ ಅಧಿಕೃತ ಆದೇಶ

ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಶನಿವಾರ 880 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 504 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಶನಿವಾರದ ಲೆಕ್ಕ
ಬೆಂಗಳೂರು ನಗರ 1533, ದಕ್ಷಿಣ ಕನ್ನಡ 186, ಉಡುಪಿ 90, ಮೈಸೂರು 83 , ತುಮಕೂರು 78, ಧಾರವಾಡ 77, ಯಾದಗಿರಿ74, ದಾವಣಗೆರೆ 72 , ಕಲಬುರಗಿ 65 , ಬಳ್ಳಾರಿ 65, ಬೀದರ್, 63, ವಿಜಯಪುರ 48, ಉತ್ತರ ಕನ್ನಡ 40, ಗದಗ 40, ಬಾಗಲಕೋಟೆ 37, ಹಾಸನ 34, ರಾಮನಗರ 30, ಶಿವಮೊಗ್ಗ 26, ಮಂಡ್ಯ 23, ಕೊಪ್ಪಳ 23, ಚಿಕ್ಕಬಳ್ಳಾಪುರ 20, ಚಾಮರಾಜನಗರ 17, ಹಾವೇರಿ 16, ರಾಯಚೂರು 14, ಕೋಲಾರ 12, ಕೊಡಗು12,  ಚಿತ್ರದುರ್ಗ 9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ 3, ಚಿಕ್ಕಮಗಳೂರು  3 ಪಾಸಿಟಿವ್ ಕೇಸುಗಳು ಬಂದಿವೆ.