ಪೋಷಕರು ಆದಷ್ಟು ಪಟಾಕಿಯಿಂದ ಮಕ್ಕಳನ್ನು ದೂರವಿಡಬೇಕು. ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವುದೇ ಒಳ್ಳೆಯದು: ಭುಜಂಗ ಶೆಟ್ಟಿ
ವಿದ್ಯಾಶ್ರೀ
ಬೆಂಗಳೂರು(ಅ.27): ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಕೇಸ್‌ಗಳು ದಾಖಲಾಗಿವೆ. 50ಕ್ಕೂ ಹೆಚ್ಚು ಪಟಾಕಿ ಸಿಡಿತದ ಕೇಸ್‌ಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ಇದರಲ್ಲಿ 6 ಜನರಿಗೆ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ಈ 6 ಜನರು ಸಂಪೂರ್ಣ ದೃಷ್ಠಿ ಕಳೆದುಕೊಂಡಿದ್ದಾರೆ. ಇವರಿಗೆ ನೇತ್ರದಾನಿಗಳ ಕಣ್ಣನ್ನು ಹಾಕಲು ಸಾಧ್ಯವಿಲ್ಲ ಅಂತ ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಭುಜಂಗಶೆಟ್ಟಿ ತಿಳಿಸಿದ್ದಾರೆ.
ಇಂದು(ಗುರುವಾರ) ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯೂ ದೀಪಾವಳಿಯಲ್ಲಿ ಅತೀ ಹೆಚ್ಚು ಜನರಿಗೆ ಪಟಾಕಿ ಸಿಡಿತದಿಂದ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ವರೆಗೆ 50ಕ್ಕೂ ಹೆಚ್ಚು ಪಟಾಕಿ ಸಿಡಿತದ ಕೇಸ್‌ಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ಇದರಲ್ಲಿ 6 ಜನರಿಗೆ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ಈ 6 ಜನ ಸಂಪೂರ್ಣ ದೃಷ್ಠಿ ಕಳೆದುಕೊಂಡಿದ್ದಾರೆ. ಇವರಿಗೆ ನೇತ್ರದಾನಿಗಳ ಕಣ್ಣು ಕೊಟ್ರು ಹಾಕಲು ಸಾಧ್ಯವಿಲ್ಲ. ಇನ್ನು 50 ಜನರ ಪೈಕಿ 38 ಜನರು ಪುರುಷರು, 12 ಜನ ಮಹಿಳೆಯರ ಕಣ್ಣಿಗೆ ಹಾನಿಯುಂಟಾಗಿದೆ. ಇದರಲ್ಲಿ 26 ಜನರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 26 ಜನರು ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
Cracker Injury: ಪಟಾಕಿ ಅವಾಂತರದಿಂದ ಸಿಲಿಕಾನ್ ಸಿಟಿಯ ಇಬ್ಬರ ಕಣ್ಣಿಗೆ ಗಾಯ
ಪಟಾಕಿ ಸಿಡಿಸದೇ ಹಾನಿಗೊಳಗಾದವರ ಸಂಖ್ಯೆ 24
ಈ 24 ಜನರು ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಹಚ್ಚಿದ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಇನ್ನು ಇದೇ ವೇಳೆ ಪಟಾಕಿಯಿಂದ ಕೇವಲ ಕಣ್ಣಿಗೆ ಮಾತ್ರವಲ್ಲ, ಮನುಷ್ಯರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ ಪರಿಸರ ಮಾಲಿನ್ಯಕ್ಕೂ ಈ ಪಟಾಕಿ ಕಾರಣವಾಗುತ್ತಿದೆ. ಪೋಷಕರು ಆದಷ್ಟು ಪಟಾಕಿ ಯಿಂದ ಮಕ್ಕಳನ್ನು ದೂರಯಿಡಬೇಕು...ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವುದೇ ಒಳ್ಳೆಯದು ಎಂದು ತಿಳಿಸಿದ್ದಾರೆ.
