ವಿವಿಧ ರಾಜ್ಯಗಳಿಂದ ಆಗಮಿಸಿದ 592 ಮಂದಿ ಕ್ವಾರಂಟೈನ್
ಮೇ 3 ರಿಂದ 11ರ ಒಳಗೆ ವಿವಿಧ ರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ 592 ಜನ ಬಂದಿಳಿದಿದ್ದು, ಕ್ವಾರಂಟೈನ್ ಮಾಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ಶಿವಮೊಗ್ಗ(ಮೇ.15): ಜಿಲ್ಲೆಗೆ ಕೇರಳ, ಬಿಹಾರ, ಆಂಧ್ರ ಹಾಗೂ ಮಹಾರಾಷ್ಟ್ರ ಸೇರಿ ಒಟ್ಟು 12 ರಾಜ್ಯಗಳಿಂದ ಮೇ 3 ರಿಂದ 11ರ ಒಳಗೆ ಅನುಮತಿ ಪಡೆದು ಬಂದಂತಹ 592 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕೇರಳದಿಂದ ಶಿವಮೊಗ್ಗಕ್ಕೆ 1, ಭದ್ರಾವತಿಗೆ 1, ಸಾಗರ 1 ಹಾಗೂ ಶಿಕಾರಿಪುರಕ್ಕೆ 3 ಜನ ಬಂದಿದ್ದಾರೆ. ಗೋವಾದಿಂದ ಜಿಲ್ಲೆಗೆ 141 ಬಂದಿದ್ದಾರೆ. ಅದರಲ್ಲಿ ಶಿವಮೊಗ್ಗಕ್ಕೆ 64 ಮಂದಿ, ಭದ್ರಾವತಿಗೆ 4 ಜನ, ಹೊಸನಗರ 10, ಸಾಗರ 4, ಸೊರಬ 46, ಶಿಕಾರಿಪುರದಿಂದ 13 ಜನ ಬಂದಿದ್ದಾರೆ.
ತೆಲಂಗಾಣದಿಂದ ಶಿವಮೊಗ್ಗಕ್ಕೆ 2, ಭದ್ರಾವತಿ 7, ಹೊಸನಗರ 2, ಸಾಗರ 5, ಶಿಕಾರಿಪುರ ಮತ್ತು ತೀರ್ಥಹಳ್ಳಿ ತಲಾ 1 ಸೇರಿ ಒಟ್ಟು 18 ಜನ ಶಿವಮೊಗ್ಗ ಜಿಲ್ಲೆಗೆ ಬಂದಿದ್ದಾರೆ. ತಮಿಳುನಾಡಿನಿಂದ ಜಿಲ್ಲೆಗೆ ಬಹುದೊಡ್ಡ ಸಂಖ್ಯೆಯಲ್ಲಿ ಬಂದವರಾಗಿದ್ದು, ಅದರಲ್ಲಿ ಒಟ್ಟು 257 ಜನ ಜಿಲ್ಲೆಗೆ ಬಂದಿದ್ದಾರೆ. ಶಿವಮೊಗ್ಗ 78, ಭದ್ರಾವತಿ 110, ಹೊಸನಗರ 1, ಸಾಗರ 10, 29 ಸೊರಬ, 25 ಶಿಕಾರಿಪುರ, 4 ಜನ ತೀರ್ಥಹಳ್ಳಿಗೆ ಬಂದಿದ್ದಾರೆ.
2100ರ ವೇಳೆಗೆ 1.2 ಶತಕೋಟಿ ಜನರನ್ನು ಕಾಡುತ್ತದಂತೆ #HeatStress
ಆಂಧ್ರದಿಂದ ಜಿಲ್ಲೆಗೆ ಬಂದವರ ಸಂಖ್ಯೆ 45, ಅದರಲ್ಲಿ ಶಿವಮೊಗ್ಗ 10, 11 ಭದ್ರಾವತಿ, 3 ಹೊಸನಗರ, 5 ಸಾಗರ, ಸೊರಬ 9, 4 ಶಿಕಾರಿಪುರ, 3 ತೀರ್ಥಹಳ್ಳಿಗೆ ಬಂದಿದ್ದಾರೆ. ಮಧ್ಯಪ್ರದೇಶದಿಂದ ಜಿಲ್ಲೆಗೆ ಬಂದವರ ಸಂಖ್ಯೆ 26 ಅದರಲ್ಲಿ 25 ಜನ ಶಿವಮೊಗ್ಗ ನಗರಕ್ಕೆ ಬಂದಿದ್ದಾರೆ. ಇನ್ನೊಬ್ಬರು ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ.
ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ 69 ಅದರಲ್ಲಿ ಬಹುಪಾಲು ಅಂದರೆ 31 ಜನ ಶಿವಮೊಗ್ಗ ನಗರಕ್ಕೆ, ಭದ್ರಾವತಿ 20, ಸಾಗರ 7, ಸೊರಬ 5, ಶಿಕಾರಿಪುರ 4, 2 ತೀರ್ಥಹಳ್ಳಿಗೆ ಬಂದವಂತವರಾಗಿದ್ದಾರೆ. ಗುಜರಾತ್ ರಾಜ್ಯದಿಂದ ಬಂದವರ ಸಂಖ್ಯೆ 17 ಆಗಿದ್ದು, ಅದರಲ್ಲಿ ಶಿವಮೊಗ್ಗ ನಗರಕ್ಕೆ 14 ಜನರಾಗಿದ್ದಾರೆ, ಸಾಗರಕ್ಕೆ 2, ಸೊರಬಕ್ಕೆ 1 ಬಂದಿದ್ದಾರೆ. ಓಡಿಶಾದಿಂದ ಜಿಲ್ಲೆಗೆ ಬಂದವರ ಸಂಖ್ಯೆ 1 ಆಗಿದ್ದು, ಅವರು ಸಾಗರ ತಲುಪಿದ್ದಾರೆ. ಬಿಹಾರದಿಂದ ಮೂವರೂ ಜನ ಶಿವಮೊಗ್ಗಕ್ಕೆ ಬಂದಿದ್ದಾರೆ. ರಾಜಸ್ಥಾನ್‌ನಿಂದ ಬಂದವರ ಸಂಖ್ಯೆ 9 ಇದ್ದು, ಇವರೆಲ್ಲರೂ ಶಿವಮೊಗ್ಗ ನಗರಕ್ಕೆ ಬಂದಿದ್ದಾರೆ. ಇವರನ್ನೆಲ್ಲಾ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.