ಚಾಮರಾಜನಗರ: ಕಳೆದ ವರ್ಷದಲ್ಲಿ ಬರೋಬ್ಬರಿ 58 ಆಕ್ಸಿಡೆಂಟ್ ಡೆತ್..!
ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವಿಲ್ಲದಿರುವುದು ಸಹ ದಂಡ ಕಟ್ಟುವುದು ಹೆಚ್ಚಾಗಿದೆ. ಅತೀವೇಗ, ತ್ರಿಬಲ್ ರೈಡ್, ಡ್ರೈವಿಂಗ್ ಲೈಸನ್ಸ್ ಇಲ್ಲ, ಮೊಬೈಲ್ ಚಾಲನೆ ಹಾಗೂ ವಾಹನಗಳಿಗೆ ವಿಮೆ ಹಣ ಕಟ್ಟದಿರುವ ಕೇಸುಗಳು ಸೇರಿವೆ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ(ಜ.06): ೨೦೨೩ ರ ಅವಧಿಯಲ್ಲಿ ತಾಲೂಕಲ್ಲಿ ೨೧೫ ರಸ್ತೆ ಅಪಘಾತದ ಪ್ರಕರಣದಲ್ಲಿ ೫೮ ಮಂದಿ ಸಾವನ್ನಪ್ಪಿದ್ದು, ೨೦೦ ಕ್ಕೂ ಹೆಚ್ಚು ಮಂದಿ ವಿವಿಧ ರೀತಿಯಲ್ಲಿ ಗಾಯಾಳುಗಳಾಗಿದ್ದಾರೆ. ತಾಲೂಕಿನ ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತಗಳು ನಡೆದಿದ್ದು ಅಪಘಾತದಲ್ಲಿ ಅಂಥ ಭೀಕರ ಅಪಘಾತಗಳು ನಡೆದಿಲ್ಲ. ಕೇವಲ ೨ ಅಥವಾ ೩ ಮಂದಿ ಒಂದೆರಡು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಲೂಕಿನ ಸರಹದ್ದಿನಲ್ಲಿ ಈ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿವೆ. ಬೇಗೂರು ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ವಿ.ಸಿ ಹಾಗೂ ಗುಂಡ್ಲುಪೇಟೆ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಪರಶಿವಮೂರ್ತಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಚಾಮರಾಜನಗರ: ಕಾಂಕ್ರೀಟಿಕರಣವಾಗ್ತಿದ್ಯಾ ಮಾದಪ್ಪನ ನೆಲೆ, ಅಕ್ರಮವಾಗಿ ತಲೆ ಎತ್ತುತ್ತಿವೆ ಲಾಡ್ಜ್‌ಗಳು..!
೧೦ ಲಕ್ಷಕ್ಕೂ ಹೆಚ್ಚು ದಂಡ
ತಾಲೂಕಿನ ಗುಂಡ್ಲುಪೇಟೆ,ಬೇಗೂರು, ತೆರಕಣಾಂಬಿ ಠಾಣೆಯಲ್ಲಿ ೨೦೨೩ ನೇ ಸಾಲಿನಲ್ಲಿ ೧೬೮೧ ಪ್ರಕರಣಗಳಲ್ಲಿ ೧೦.೮೮ ಲಕ್ಷಕ್ಕೂ ಹೆಚ್ಚು ದಂಡ ವಸೂಲಿಯಾಗಿದೆ.ಚಾಲಕ/ಮಾಲೀಕ ಕುಡಿದು ಚಾಲನೆ ಮಾಡುವ ವೇಳೆ ಹೆಚ್ಚಿನ ಕೇಸು ಹೆಚ್ಚಾಗಿವೆ. ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವಿಲ್ಲದಿರುವುದು ಸಹ ದಂಡ ಕಟ್ಟುವುದು ಹೆಚ್ಚಾಗಿದೆ. ಅತೀವೇಗ, ತ್ರಿಬಲ್ ರೈಡ್, ಡ್ರೈವಿಂಗ್ ಲೈಸನ್ಸ್ ಇಲ್ಲ, ಮೊಬೈಲ್ ಚಾಲನೆ ಹಾಗೂ ವಾಹನಗಳಿಗೆ ವಿಮೆ ಹಣ ಕಟ್ಟದಿರುವ ಕೇಸುಗಳು ಸೇರಿವೆ.
ಸವಾರರಿಗೆ ಕನ್ನಡಪ್ರಭ ಕೆಲ ಟಿಪ್ಸ್
1 ದೀಪವು ನಿನ್ನದೆ,ಗಾಳಿಯು ನಿನ್ನದೇ ಆರದಿರಲು ಬೆಳಕು…ಎನ್ನುವ ಬದಲಾಗಿ ಕಾರು(ವಾಹನ)ನಿನ್ನದೆ, ಇಂಧನ(ಪೆಟ್ರೋಲ್) ನಿನ್ನದೆ, ಬದುಕು ನಿನ್ನದೆ ಎಂದು ಮೊದಲು ವಾಹನಗಳ ಏರಿ ಓಡಿಸಬೇಕು.
2 ವಾಹನ ಕೈಗೆ ಸಿಕ್ಕಿತು ಎನ್ನುವ ಭರದಲ್ಲಿ ವೇಗದ ಇತಿಮಿತಿಯ ಜೊತೆಗೆ ¨ವೇಗದ ಪರಿಜ್ಞಾನ ಅರಿಯಬೇಕಿದೆ ಹಾಗೂ ನಮ್ಮ ಮನೆಯ ಮಂದಿ ಕಾಯುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವಿಲ್ಲದೆ ಇದ್ದರೆ ಅಪಘಾತಕ್ಕೆ ಕಾರಣವಾಗಲಿದೆ.
3 ಸಮಯಪ್ರಜ್ಞೆ, ನಿಯಮ ಪಾಲನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಆಗಾಗ್ಗೆ ಪೊಲೀಸರು ನಡೆಸುತ್ತಿದ್ದರೂ ಅಪಘಾತಗಳು ನಡೆಯುತ್ತಲೇ ಇವೆ.ಜನರಿಗೆ ಪೊಲೀಸರು ಮತ್ತಷ್ಟು ಜಾಗೃತಿ ಮೂಡಿಸಬೇಕು.
ʼಗುಂಡ್ಲುಪೇಟೆ, ಬೇಗೂರು ಠಾಣಾ ವ್ಯಾಪ್ತಿಯ ಮೈಸೂರು-ಊಟಿ ಹಾಗು ಗುಂಡ್ಲುಪೇಟೆ-ಕೇರಳ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗುವ ತನಕ ಅಪಘಾತಗಳ ಸಂಖ್ಯೆ ಇಳಿಮುಖವಾಗುವುದಿಲ್ಲ.ನಂಜನಗೂಡಿಂದ ಗುಂಡ್ಲುಪೇಟೆ ಮಾರ್ಗ ಮೇಲುಕಾಮನಹಳ್ಳಿ ಹಾಗೂ ಮದ್ದೂರು ತನಕ ನಾಲ್ಕು ಪಥ ರಸ್ತೆಯಾದರೆ ಜನರ ಸಾವು, ನೋವುಗಳು ತಪ್ಪಲಿದೆ ಎಂದು ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಪರಶಿವಮೂರ್ತಿ ಹೇಳಿದ್ದಾರೆ.
ಚಾಮರಾಜನಗರ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
ʼ೨೦೨೩ ರ ಹೊಸ ವರ್ಷದಲ್ಲಾದರೂ ಅಪಘಾತಗಳು ಕಡಿಮೆಯಾಗಲಿ.ವಾಹನ ಮಾಲೀಕರು ಹಾಗು ಚಾಲಕರು ಮೊದಲು ಕುಡಿದು ಚಾಲನೆ ಮಾಡುವುದನ್ನು ಬಿಟ್ಟರೆ ಹೆಚ್ಚಿನ ಅಪಘಾತ ತಡೆಯಬಹುದು.ರಸ್ತೆ ಸುರಕ್ಷತಾ ಸಪ್ತಾಹದ ಸಮಯದಲ್ಲಿ ರಸ್ತೆ ಅಪಘಾತಗಳು, ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ನಾಲ್ಕು ಪಥದ ರಸ್ತೆ ಆದರೆ ಅಪಘಾತ ಕಡಿಮೆಯಾಗಲಿದೆ ಎಂದು ಬೇಗೂರು ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ವಿ.ಸಿ ತಿಳಿಸಿದ್ದಾರೆ.
ʼಪೊಲೀಸರು ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ದಂಡ ಹಾಕುತ್ತಾರೆ.ಪೊಲೀಸರು ದಂಡ ಹಾಕುವ ಜೊತೆಗೆ ಹೆದ್ದಾರಿಯಲ್ಲಿನ ಸಿಎಲ್ ೭ ಹೆಸರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಬೇಕು.ಬೇಗೂರಿಂದ ಹಿರೀಕಾಟಿ ಗಡಿ ತನಕ ಕ್ರಷರ್ ನ ಸಂಪರ್ಕ ರಸ್ತೆ ಹಾಗು ಟಿಪ್ಪರ್ ಹೊದಿಕೆ ಇಲ್ಲದೆ ಬರುವ ದೂಳು ನಿಲ್ಲಿಸಬೇಕು ಈ ಕೆಲಸ ಮಾಡಿದೆ ಅಪಘಾತ ಸ್ವಲ್ಪ ಕಡಿಮೆಯಾಗಲಿದೆ ಎಂದು ಗುಂಡ್ಲುಪೇಟೆ ಬೈಕ್ ಸವಾರ ರಾಜು ತಿಳಿಸಿದ್ದಾರೆ.