ಗಂಗಾವತಿ: ಅಂಜನಾದ್ರಿ ದೇಗುಲದ ಹುಂಡಿ ಎಣಿಕೆ: 56 ದಿನದಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?
56 ದಿನಗಳ ಅವಧಿಯಲ್ಲಿ ಒಟ್ಟು ರೂ.36,96,983 ರೂ. ಹಣ ಸಂಗ್ರಹವಾಗಿದೆ. 6 ವಿದೇಶಿ ನೋಟು, 1 ವಿದೇಶಿ ನಾಣ್ಯಗಳು ಮಲೇಶಿಯಾ, 1 ದುಬೈ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ರಾಮಮೂರ್ತಿ ನವಲಿ
ಗಂಗಾವತಿ(ಆ.27): ತಾಲೂಕಿನ ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಆಂಜನೇಯಸ್ವಾಮಿ ದೇಗುಲದಲ್ಲಿ ಕಾಣಿಕೆ ಹಣ ಎಣಿಸಲಾಗಿದ್ದು, 56 ದಿನಗಳಲ್ಲಿ ರೂ. 36,96,983 ರೂ. ಹಣ ಸಂಗ್ರಹವಾಗಿದೆ.
ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಮೇರೆಗೆ ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಗಂಗಾವತಿ ಇವರ ನೇತೃತ್ವದಲ್ಲಿ ಆಂಜನೆಯ ದೇವಸ್ಥಾನ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (02-07-2024 ರಿಂದ 27-08-2024 ರವರೆಗೆ ಒಟ್ಟು 56 ದಿನಗಳ ಅವಧಿಯಲ್ಲಿ) ಒಟ್ಟು ರೂ.36,96,983 ರೂ. ಹಣ ಸಂಗ್ರಹವಾಗಿದೆ. 6 ವಿದೇಶಿ ನೋಟು, 1 ವಿದೇಶಿ ನಾಣ್ಯಗಳು ಮಲೇಶಿಯಾ, 1 ದುಬೈ ನಾಣ್ಯ)ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.58 ಕೋಟಿ ರು.ಸಂಗ್ರಹ
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಮೆಹಬೂಬ್ ಅಲಿ ಶಿರಸ್ತೇದಾರ ನರ್ಮದಾ, ಕೃಷ್ಣವೇಣಿ, ಸುಹಾಸ್, ಕಂದಾಯ ನಿರೀಕ್ಷಕ ಮಹೇಶ್ ದಲಾಲ, ಹಾಲೇಶ ಗುಂಡಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿ ಶ್ರೀಕಂಠ, ಗುರುರಾಜ, ಇಂದಿರಾ, ಅನ್ನಪೂರ್ಣ , ಶೇಖರಪ್ಪ , ಮಹಮ್ಮದ್ ರಫೀಕ್ ,ಕವಿತಾ ಎಸ್, ಸೌಭಾಗ್ಯ, ಕವಿತಾ , ಗಾಯತ್ರಿ, ಶ್ರೀರಾಮ ಜೋಶಿ , ಸುಧಾ, ದ್ವಿ.ದ.ಸ, ಪ್ರವೀಣ್ ಜೋನ್ಸ್ ,ಮಂಜುನಾಥ ದುಮ್ಮಾಡಿ ,ಅಸ್ಲಾಂ ಪಟೇಲ್, ವೀರಯ್ಯ, ರಾಘವೇಂದ್ರ, ಸುನಿತಾ ,ನಾಗಬಿಂದು ,ಚೈತ್ರಾ, ಪ್ರಿಯಾಂಕ ,ಗಾಯತ್ರಿ ,ಶೈನಾಜ್, ವೆಂಕಟೇಶ ಇದ್ದರು.