ಬೆಂಗ್ಳೂರಲ್ಲಿ ಕೊರೋನಾರ್ಭಟ: ಒಂದೇ ದಿನ ಬರೋಬ್ಬರಿ 57 ಸಾವು..!

ಬೆಂಗಳೂರು ನಗರದಲ್ಲಿ ಶುಕ್ರವಾ 9,917 ಹೊಸ ಕೇಸ್‌|79 ಸಾವಿರ ದಾಟಿದ ಸಕ್ರಿಯ ಕೇಸ್‌| ಎಂಟು ವಲಯಗಳ ಪೈಕಿ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 13,053 ಸೋಂಕು ಪ್ರಕರಣ ಪತ್ತೆ| 9 ವರ್ಷದೊಳಗಿನ 287 ಮಕ್ಕಳಿಗೆ ಸೋಂಕು| 

57 Covid19 Patients Dies on April 17th in Bengaluru grg

ಬೆಂಗಳೂರು(ಏ.17): ರಾಜಧಾನಿಯಲ್ಲಿ ಕೊರೋನಾರ್ಭಟ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 9,917 ಪ್ರಕರಣ ಹಾಗೂ 57 ಸಾವಿನ ಪ್ರಕರಣ ವರದಿಯಾಗಿವೆ.

ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 5,22,438ಕ್ಕೆ ಏರಿಕೆಯಾಗಿದೆ. ಅಂತೆಯೇ 2,071 ಮಂದಿ ಗುಣಮುಖರಾಗಿದ್ದು, ಈವರೆಗಿನ ಗುಣಮುಖರ ಒಟ್ಟು ಸಂಖ್ಯೆ 4,37,801ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 79,616 ತಲುಪಿದ್ದು, ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 181 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

5000 ದಾಟಿದ ಸಾವಿನ ಸಂಖ್ಯೆ:

ಶುಕ್ರವಾರ ನಗರದಲ್ಲಿ 57 ಕೊರೋನಾ ಸೋಂಕಿತರ ಸಾವಿನ ಪ್ರಕರಣ ವರದಿಯಾಗಿದ್ದು, ಈ ಮೂಲಕ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 5,020ಕ್ಕೆ ಏರಿಕೆಯಾಗಿದೆ.

ಕೊರೋನಾ ಅಟ್ಟಹಾಸ: ಬೆಂಗ್ಳೂರಲ್ಲಿ ತಲೆ ಎತ್ತಲಿವೆ 10 ಹೊಸ ‘ಕೋವಿಡ್‌ ಸ್ಮಶಾನ’..!

9 ವರ್ಷದೊಳಗಿನ 287 ಮಕ್ಕಳಿಗೆ ಸೋಂಕು

ಇನ್ನು ನಗರದಲ್ಲಿ ವರದಿಯಾಗಿರುವ 9,917 ಪ್ರಕರಣಗಳ ಪೈಕಿ 9 ವರ್ಷದೊಳಗಿನ 287 ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಉಳಿದಂತೆ 10-19 ವರ್ಷದೊಳಗಿನ 683 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಕೇಸ್‌

ಕಳೆದ ಹತ್ತು ದಿನಗಳಲ್ಲಿ ಪಾಲಿಕೆಯ ಎಂಟು ವಲಯಗಳ ಪೈಕಿ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 13,053 ಸೋಂಕು ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಪಶ್ಚಿಮ ವಲಯದಲ್ಲಿ 10,416, ಪೂರ್ವದಲ್ಲಿ 10,184, ಮಹದೇವಪುರದಲ್ಲಿ 8,897, ಬೊಮ್ಮನಹಳ್ಳಿ 8,189, ರಾಜರಾಜೇಶ್ವರಿನಗರ 6,259, ಯಲಹಂಕ 5,364 ಹಾಗೂ ದಾಸರಹಳ್ಳಿ ವಲಯದಲ್ಲಿ 2,509 ಸೋಂಕು ಪ್ರಕರಣ ಪತ್ತೆಯಾಗಿವೆ.
 

Latest Videos
Follow Us:
Download App:
  • android
  • ios