Asianet Suvarna News Asianet Suvarna News

Koppal News: ರಸ್ತೆ, ಮೇಲ್ಸೇತುವೆಗೆ ₹55 ಕೋಟಿ ಅನುದಾನ: ಸಿ.ಸಿ.ಪಾಟೀಲ್

ಕ್ಷೇತ್ರದ ಶಾಸಕ, ಸಚಿವ ಹಾಲಪ್ಪ ಆಚಾರ ಅವರು ಈ ಭಾಗದ ರಸ್ತೆ, ಮೇಲ್ಸೇತುವೆಗಾಗಿ .55 ಕೋಟಿ ಅನುದಾನವನ್ನು ನನ್ನ ಇಲಾಖೆಯಿಂದ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

55 crore grant for road, flyover CC Patil informed at rav
Author
First Published Jan 19, 2023, 10:28 AM IST

ಯಲಬುರ್ಗಾ (ಜ.19) : ಕ್ಷೇತ್ರದ ಶಾಸಕ, ಸಚಿವ ಹಾಲಪ್ಪ ಆಚಾರ ಅವರು ಈ ಭಾಗದ ರಸ್ತೆ, ಮೇಲ್ಸೇತುವೆಗಾಗಿ .55 ಕೋಟಿ ಅನುದಾನವನ್ನು ನನ್ನ ಇಲಾಖೆಯಿಂದ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ತಾಲೂಕಿನ ಕರಮುಡಿ ಗ್ರಾಮದಲ್ಲಿ ಕರಮುಡಿ, ಬಂಡಿಹಾಳ, ತೊಂಡಿಹಾಳ ಗ್ರಾಮಗಳ ಹಳ್ಳಗಳಿಗೆ ಬ್ರಿಡ್ಜ್‌ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತಾಲೂಕಿನ ಸಂಕನೂರು, ಕರಮುಡಿ, ಬಂಡಿಹಾಳ, ತೊಂಡಿಹಾಳ ಗ್ರಾಮಗಳ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ನಾನಾ ರಸ್ತೆಗಳ ಅಭಿವೃದ್ಧಿಗಾಗಿ ಈ ಕ್ಷೇತ್ರಕ್ಕೆ ಒಟ್ಟು .55 ಕೋಟಿ ಅನುದಾನ ನೀಡಿದ್ದೇನೆ ಎಂದರು.

ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಿ: ಸಚಿವ ಸಿ.ಸಿ.ಪಾಟೀಲ್

ಈ ಕ್ಷೇತ್ರದ ಜನತೆ ಇಂತಹ ಸರಳ, ಸಜ್ಜನ ವ್ಯಕ್ತಿತ್ವವುಳ್ಳ ಶಾಸಕ, ಸಚಿವ ಹಾಲಪ್ಪ(Halappa achar) ಆಚಾರ ಅವರನ್ನು ಪಡೆದುಕೊಂಡಿರುವುದು ಪುಣ್ಯವಂತರು. ನಾನು ಹಾಲಪ್ಪ ಅವರನ್ನು ನನ್ನ ಮನೆಗೆ ಉಪಾಹಾರಕ್ಕೆ ಕರೆದಾಗ, ಮೊದಲು ನನ್ನ ಕ್ಷೇತ್ರದ ಹಳ್ಳಗಳಿಗೆ ಮೇಲ್ಸೇತುವೆಗಳಿಲ್ಲ, ನೆರೆಹಾವಳಿಯಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲು ಸಹಿ ಹಾಕಿದರೆ ಮಾತ್ರ ಉಪಾಹಾರ ಮಾಡುತ್ತೇನೆಂದು ಹಠ ಹಿಡಿದು ಅನುದಾನ ಮಂಜೂರು ಮಾಡಿಸಿಕೊಂಡ ಕಳಿಕಳಿಯ ಸಚಿವರು ಎಂದು ಶ್ಲಾಘಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah)ನವರು ರಾಜ್ಯದಲ್ಲಿಯ ಅನ್ನಭಾಗ್ಯ ಯೋಜನೆ ಕಾಂಗ್ರೆಸ್‌ ಸರ್ಕಾರದ ಸಾಧನೆಯೆಂದು ಹೇಳುತ್ತಿರುವುದು ಸರಿಯಲ್ಲ. ಇದು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ತಿರುಗೇಟು ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಮಾತನಾಡಿ, ಮಳೆಗಾಲದಲ್ಲಿ ಈ ಭಾಗದ ಜನರು ಸಾಕಷ್ಟುಸಂಕಷ್ಟಅನುಭವಿಸುತ್ತಿರುವುದನ್ನು ಅರಿತು ಸೇತುವೆ ನಿರ್ಮಾಣಕ್ಕೆ ಸಹೋದ್ಯೋಗಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲರು ಅನುದಾನ ನೀಡಿದ್ದಾರೆ. ಅವರ ಸಹಕಾರವನ್ನು ಎಂದೂ ಮರೆಯಲಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಅದ್ಯಕ್ಷೆ ರೇಣುಕಾ ಹವಳಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್‌ ಶ್ರೀಶೈಲ ತಳವಾರ, ಬಸವಲಿಂಗಪ್ಪ ಭೂತೆ, ಬಸವರಾಜ ಗೌರಾ, ಸಿ.ಎಚ್‌. ಪಾಟೀಲ, ವೀರಣ್ಣ ಹುಬ್ಬಳ್ಳಿ, ಬಸವನಗೌಡ ತೊಂಡಿಹಾಳ, ಪಪಂ ಅದ್ಯಕ್ಷ ಅಮರೇಶ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಎಂ. ವಿಶ್ವನಾಥ, ಸಂಗಪ್ಪ ಬಂಡಿ, ಶರಣಪ್ಪ ಈಳಿಗೇರ, ಮಂಜುನಾಥ ಕುಕನೂರು, ಶರಣಗೌಡ ಪಾಟೀಲ, ಶಕುಂತಲಾದೇವಿ ಮಾಲಿಪಾಟೀಲ, ಭೀಮಣ್ಣ ಹವಳಿ, ಗ್ರಾಪಂ ಸರ್ವ ಸದಸ್ಯರು ಇದ್ದರು.

ಕಳಸಾ-ಬಂಡೂರಿ ಜೋಡಣೆ: ಶೀಘ್ರ ಕಾಮಗಾರಿಗೆ ಚಾಲನೆ : ಸಿ.ಸಿ.ಪಾಟೀಲ್

ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಬದ್ಧವಿದೆ. ಆದರೆ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಕಾನೂನು ನಿಯಮಗಳಡಿ ಶೀಘ್ರದಲ್ಲಿಯೇ ಮೀಸಲಾತಿ ಸಿಹಿ ಸುದ್ದಿ ಸಿಗಲಿದೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳುವ ದ್ವಂದ್ವ ಹೇಳಿಕೆಗಳಿಗೆ ಸಮುದಾಯದವರು ಕಿವಿಗೊಡಬೇಡಿ. ನಾನು ಸೇರಿದಂತೆ ಮುರುಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ ಅವರು ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.

ಸಿ.ಸಿ. ಪಾಟೀಲ, ಲೋಕಪಯೋಗಿ ಇಲಾಖೆ ಸಚಿವ

Follow Us:
Download App:
  • android
  • ios