ಯಾದಗಿರಿ[ಡಿ.20]: ಮರಳು ಲಾರಿಯೊಂದು ಹರಿದ ಪರಿಣಾಮ 51 ಕುರಿಗಳ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬ್ರೀಜ್ ಬಳಿ ಘಟನೆ ಇಂದು[ಶುಕ್ರವಾರ] ನಡೆದಿದೆ. 

ಕುರಿಗಳನ್ನ ಸೇತುವೆ ದಾಟಿಸುತ್ತಿದ್ದಾಗ ವೇಗವಾಗಿ ಬಂದ ಲಾರಿ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿ 51 ಕುರಿ ಮೃತಪಟ್ಟಿದ್ದು 15 ಕುರಿಗಳಿಗೆ ಗಾಯವಾಗಿದೆ. ಭೀಮಣ್ಣ ಹೊಸಮನಿ, ದ್ಯಾಮಣ್ಣ ಹೊಸಮನಿ ಎಂಬವವರಿಗೆ ಸೇರಿದ ಕುರಿಗಲಾಗಿವೆ. ಕುರಿಗಾಯಿಗಳು ಹುಣಸಗಿ ತಾಲೂಕಿನ ಕಮಲಾಪುರದಿಂದ ದೇವದುರ್ಗಕ್ಕೆ ತೆರಳುತ್ತಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನೆ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.