Asianet Suvarna News Asianet Suvarna News

ಬೆಂಗಳೂರು: 60 ವರ್ಷದಲ್ಲಿ 5 ಸಾವಿರ ಎಕರೆ ಕಾಡು ಮಾಯ..!

*  ಅರಣ್ಯ ಪ್ರದೇಶ ವಿವಿಧ ಉದ್ದೇಶಗಳಿಗೆ ಬಳಕೆ
*  17 ಸಾವಿರ ಎಕರೆಯಲ್ಲಿ ಉಳಿದಿರೋದು 12 ಸಾವಿರ ಎಕರೆ ಅರಣ್ಯ ಮಾತ್ರ
*  1960ರಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿಯಿತ್ತು 
 

5 Thousand Acres of Forest Destroy in 60 Years in Bengaluru grg
Author
Bengaluru, First Published Oct 17, 2021, 7:29 AM IST
  • Facebook
  • Twitter
  • Whatsapp

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಅ.17): ಬೆಂಗಳೂರು(Bengaluru)  ಉತ್ತರ ಭಾಗದ ಅಮೂಲ್ಯ ಜೈವಿಕ ತಾಣ ಎನಿಸಿದ ಜಾಕರಬಂಡೆ ಅರಣ್ಯವನ್ನು(Jarkabandi Reserve Forest) ಉದ್ಯಾನದ ಹೆಸರಿನಲ್ಲಿ ಕಬಳಿಸುವ ಪ್ರಯತ್ನ ನಡೆದಿದೆ. ಆದರೆ, ಇಂತಹ ಪ್ರಯತ್ನ ಬೆಂಗಳೂರಿನಲ್ಲಿ ನಡೆದಿರುವುದು ಇದೇ ಮೊದಲನೇಯದ್ದೇನೂ ಅಲ್ಲ. ಕಳೆದ 60 ವರ್ಷಗಳಲ್ಲಿ ಇಂತಹ ಕಬಳಿಕೆಯಿಂದಾಗಿಯೇ ಬೆಂಗಳೂರು ಸುಮಾರು ಐದು ಸಾವಿರಕ್ಕೂ ಹೆಚ್ಚು ಅರಣ್ಯ(Forest) ಪ್ರದೇಶವನ್ನು ಕಳೆದುಕೊಂಡಿದೆ.

1960ರಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿಯಿತ್ತು. ಇದೀಗ ಕಾಲೇಜುಗಳು, ವಿಶ್ವವಿದ್ಯಾಲಯಗಳು(Universities) ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 5 ಸಾವಿರ ಎಕರೆ ಅರಣ್ಯ ಕಳೆದುಹೋಗಿದೆ. ಪ್ರಸ್ತುತ 12 ಸಾವಿರ ಎಕರೆ ಮಾತ್ರ ಉಳಿದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಇದೀಗ ಜಾರಕ ಬಂಡೆ (ಜೆ.ಬಿ.ಕಾವಲ್‌) ಮೀಸಲು ಅರಣ್ಯದಲ್ಲಿ ಸುಮಾರು 180 ಎಕರೆ ಜಮೀನನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವ ಅರಣ್ಯ ಮತ್ತು ಮತ್ತು ತೋಟಗಾರಿಕೆ ಇಲಾಖೆ ಯೋಜನೆ ರೂಪಿಸುತ್ತಿದೆ. ಇದರಿಂದ ಪರಿಸರ ವಾದಿಗಳಿಗೆ ನಗರಕ್ಕೆ ಹೊಂದಿಕೊಂಡಿರುವ ಅರಣ್ಯ ಭೂಮಿಯನ್ನು ಕಳೆದುಕೊಳ್ಳು ಭೀತಿ ಎದುರಾಗಿದೆ.

ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಆಗಿದ್ದ ಒತ್ತುವರಿ ತೆರವು ಮಾಡಲಾಗಿದೆ. ಬನ್ನೇರುಘಟ್ಟ, ತುರಹಳ್ಳಿ ಅರಣ್ಯ ಒತ್ತುವರಿಯನ್ನು ವಶಕ್ಕೆ ಪಡೆದು ತಡೆಗೋಡೆ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್‌ ಮೋಹನ್‌ ತಿಳಿಸಿದ್ದಾರೆ.

ಬೆಂಗಳೂರು: ಜಾರಕ ಬಂಡೆ ಮೇಲೆ ಗುತ್ತಿಗೆದಾರರ ಕಣ್ಣು..!

ನಗರ ವ್ಯಾಪ್ತಿಯಲ್ಲಿ ಕಳೆದ 60 ವರ್ಷಗಳ ಹಿಂದೆ 17 ಸಾವಿರ ಎಕರೆಯ ಅರಣ್ಯ ಭೂಮಿಯನ್ನು ಗುರುತಿಸಲಾಗಿತ್ತು. ಇದೀಗ ಅರಣ್ಯೇತರ ಚಟುವಟಿಕೆಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಕೇವಲ 12 ಸಾವಿರ ಎಕರೆ ಮಾತ್ರ ಉಳಿದಿದೆ. ಇದೇ ರೀತಿ ನೆಪಗಳನ್ನು ಮುಂದಿಟ್ಟುಕೊಂಡು ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿದರೆ ನಗರದಲ್ಲಿ ಉಳಿದಿರುವ ಕೆಲವೇ ಅರಣ್ಯ ಪ್ರದೇಶಗಳು ನಾಶವಾಗಲಿವೆ.

ಕಳೆದು ಹೋದ ಅರಣ್ಯ

ಈ ಹಿಂದೆ ಯಶವಂತಪುರ ವಿಭಾಗದ ವ್ಯಾಪ್ತಿಗೆ ಸೇರಿದ ಮೆಲ್ಲೆಗಾಲ್‌ ವ್ಯಾಲಿ ಅರಣ್ಯ ವ್ಯಾಪ್ತಿಗೆ ಸೇರಿದ 2 ಸಾವಿರ ಎಕರೆ ಮತ್ತು ಮಲ್ಲತ್ತಹಳ್ಳಿಯಲ್ಲಿ 285 ಎಕರೆ ಅರಣ್ಯ ಭೂಮಿಯಯಲ್ಲಿ ಬಡಾವಣೆಗಳ ನಿರ್ಮಾಣ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ 100 ಎಕರೆ ಅರಣ್ಯ ಭೂಮಿ, ಜಕ್ಕೂರು ವೈಮಾನಿಕ ತರಬೇತಿ ಶಾಲೆಗಾಗಿ 375 ಎಕರೆ ಅರಣ್ಯ ಭೂಮಿ. ಕೊಡಿಗೇಹಳ್ಳಿಯ ತಿಂಡ್ಲು ಮತ್ತು ಅಳ್ಳಾಲಸಂದ್ರದ ಅರಣ್ಯದಲ್ಲಿ 650 ಎಕರೆ ಅರಣ್ಯ ಪ್ರದೇಶದಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾಲಯ, ಕೆಂಚೇನಹಳ್ಳಿಯಲ್ಲಿ 344 ಎಕರೆ ಪ್ರದೇಶದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಜೆ.ಬಿ.ಕಾವಲ್‌ನ ಮೀಸಲು ಅರಣ್ಯದಲ್ಲಿ 180 ಎಕರೆ ಜಮೀನನ್ನು ಅರಣ್ಯೇತರ ಚಟುವಟಿಕೆ ಬಳಕೆ ಮಾಡಲು ಮುಂದಾಗಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪರಿಸರ ಹೋರಾಟಗಾರರಾದ ಚೈತನ್ಯ ವಿವರಿಸಿದ್ದಾರೆ.

ನಗರದಲ್ಲಿರುವ 5 ಸಾವಿರ ಎಕರೆ ಅರಣ್ಯ ಭೂಮಿಯನ್ನು ಕಳೆದುಕೊಳ್ಳಲಾಗಿದೆ. ಕಳೆದ 10 ವರ್ಷದಲ್ಲಿ 58 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಾಗಲಿದೆ. ಇದೇ ರೀತಿಯಲ್ಲಿ ಮುಂದುವರೆದಲ್ಲಿ ಬೆಂಗಳೂರು ನಗರದಲ್ಲಿ ಪರಿಸರ ಮಾಲಿನ್ಯಕ್ಕೆ ನಾಂದಿ ಹಾಡಿದಂತಾಗಲಿದೆ. ಇನ್ನೂ ಅರಣ್ಯ ಭೂಮಿಯನ್ನು ಇತರೆ ಕಾರ್ಯಗಳ ಬಳಕೆಗೆ ಸರ್ಕಾರ ಮಂದಾದಲ್ಲಿ ಬೃಹತ್‌ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಪರಿಸರ ಹೋರಾಟಗಾರರು ಚೈತನ್ಯಾ ತಿಳಿಸಿದ್ದಾರೆ. 
 

Follow Us:
Download App:
  • android
  • ios