Asianet Suvarna News Asianet Suvarna News

ಸಿದ್ಧಗಂಗಾ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ: ಫೆಬ್ರವರಿ ತಿಂಗಳಲ್ಲಿ ಸರ್ಕಾರದಿಂದ ದಾಸೋಹ ಕಾರ್ಯಕ್ರಮ-ಸಿಎಂ ಬೊಮ್ಮಾಯಿ

ಫೆಬ್ರವರಿ ತಿಂಗಳಲ್ಲಿ ಸರ್ಕಾರ ವತಿಯಿಂದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ದಾಸೋಹ ಕಾರ್ಯಕ್ರಮ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

4th Year Commemoration of Siddhganga Shri Dasoha program by Govt in the month of February says cm rav
Author
First Published Jan 21, 2023, 1:37 PM IST

ತುಮಕೂರು (ಜ.21) : ಫೆಬ್ರವರಿ ತಿಂಗಳಲ್ಲಿ ಸರ್ಕಾರ ವತಿಯಿಂದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ದಾಸೋಹ ಕಾರ್ಯಕ್ರಮ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ನಡೆದಾಡಿದ ದೇವರು, ತ್ರಿವಿಧ ದಾಸೋಹಿ ಎಂದು ಭಕ್ತರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ತುಮಕೂರಿನ ಸಿದ್ಧಗಂಗಾ ಮಠದ ಡಾ ಶಿವಕುಮಾರ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ. ಸಿದ್ಧಗಂಗಾ ಮಠದಲ್ಲಿ ಬೆಳಗ್ಗೆಯಿಂದಲೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮ ನಡೆಯುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai), ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yadiyurapp), ಕೇಂದ್ರದ ನಾಯಕರು, ರಾಜ್ಯದ ನಾಯಕರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. 

ಸಿದ್ದಗಂಗಾ ಮಠಕ್ಕೆ‌ ಮೆಡಿಕಲ್‌ ಕಾಲೇಜು ಮಂಜೂರು : ಈ ಶೈಕ್ಷಣಿಕ ವರ್ಷದಿಂದಲ್ಲೇ ವೈದ್ಯಕೀಯ ತರಗತಿಗಳು ಪ್ರಾರಂಭ

ಇಂದು ಬೆಳಗ್ಗೆ ತುಮಕೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ಧಗಂಗಾ ಶ್ರೀಗಳು ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದರು. ಅವರ ಸಂಸ್ಮರಣೆಯಲ್ಲಿ ಪುಣ್ಯಸ್ಮರಣೆ ದಿನವನ್ನು ಕಳೆದ ವರ್ಷ ಸರ್ಕಾರ ದಾಸೋಹ ದಿನ ಎಂದು ಘೋಷಿಸಿದೆ. ಈ ವರ್ಷ ಮುಂದಿನ ತಿಂಗಳು ಸರ್ಕಾರ ದಾಸೋಹ ದಿನ ಆಚರಿಸಲಿದೆ ಎಂದರು.

ದಾಸೋಹ ದಿನ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು

ಶ್ರೀಗಳ ಗದ್ದುಗೆಗೆ ನಮಸ್ಕಾರ ಮಾಡಿರುವುದು ಮನಸ್ಸಿಗೆ ಸಂತೋಷವಾಗಿದೆ. ಅವರ ಆಶೀರ್ವಾದ ಈ ನಾಡಿನ ಜನತೆಯ ಮೇಲೆ ಇರುತ್ತದೆ. ಇವತ್ತು ಶ್ರೀಗಳ ದಾಸೋಹ ದಿನ ಬಹಳ ವಿಶಿಷ್ಟವಾಗಿ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು. ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಾಡುತ್ತಿರುವ ಮಠಮಾನ್ಯಗಳಲ್ಲಿ ಈ ದಿನವನ್ನು ಆಚರಣೆ ಮಾಡಬೇಕೆಂದು ತೀರ್ಮಾನಿಸಲಾಗುವುದು. 

ಸಾರ್ವಜನಿಕ ರಜೆ ಇಲ್ಲ:

ಯಾವುದೇ ಆಚರಣೆಗಳಿಗೂ ಇನ್ನು ಮುಂದೆ ಸಾರ್ವಜನಿಕ ರಜೆ ಇರುವುದಿಲ್ಲ. ಆದರೆ ಅವರ ಹೆಸರಿನಲ್ಲಿ ಪುಣ್ಯಸ್ಮರಣೆ ಮಾಡುವುದು. ಆಚರಣೆ ಮಾಡಿ ಗೌರವ ಸಲ್ಲಿಸಲಾಗುವುದು. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿರುವ ಮಾತಿನಲ್ಲಿ ನಂಬಿಕೆಯಿದೆ ಎಂದರು.

ಶಿವಕುಮಾರ ಸ್ವಾಮೀಜಿ ಜಯಂತಿ: ಪಕ್ಷಾತೀತವಾಗಿ ಗೌರವ ನಮನ ಸಲ್ಲಿಸಿದ ರಾಜಕೀಯ ನಾಯಕರು

ಶಿವಕುಮಾರ ಸ್ವಾಮಿಗಳ ಹುಟ್ಟೂರಲ್ಲಿ ನಿರ್ಮಾಣವಾಗುತ್ತಿರುವ ಪುತ್ಥಳಿ ನಿರ್ಮಾಣ ಕಾರ್ಯ ಸ್ಥಗಿತವಾಗಿರುವುದರ ಬಗ್ಗೆ ತಾವು ಮೊನ್ನೆ ಹೋಗಿ ಪರಿಶೀಲಿಸಿದ್ದು, ಶೀಘ್ರವೇ ಕೆಲಸ ಪುನಾರಂಭವಾಗಲಿದೆ ಎಂದು ಸಿಎಂ ಹೇಳಿದರು.

 

Follow Us:
Download App:
  • android
  • ios