ಚಿಕ್ಕಬಳ್ಳಾಪುರ : ವಿದ್ಯುತ್ ಕಳ್ಳತನ ಕೇಸ್ - 1 ಕೋಟಿ ರು. ದಂಡ ವಸೂಲಿ
- ಒಂದೆಡೆ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಳ
- ಜೊತೆಗೆ ದರ ಏರಿಕೆಯಿಂದ ವಿದ್ಯುತ್ ಗ್ರಾಹಕರ ಪಾಲಿಗೆ ದುಬಾರಿ
- ಜಿಲ್ಲೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ
ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಆ.05): ಒಂದೆಡೆ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗುತ್ತಿರುವುದರ ಜೊತೆಗೆ ದರ ಏರಿಕೆಯಿಂದ ವಿದ್ಯುತ್ ಗ್ರಾಹಕರ ಪಾಲಿಗೆ ದುಬಾರಿ ಆಗುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.
ಹೌದು ಕಳೆದ ಎರಡೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 499 ವಿದ್ಯುತ್ ಕಳ್ಳತನ ಪ್ರಕರಣಗಳು ಜಿಲ್ಲೆ ಬೆಸ್ಕಾಂ ಜಾಗೃತ ದಳದ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ವಿದ್ಯುತ್ ಕಳ್ಳತನ ಪ್ರಕರಣಗಳಿಂದ ಒಟ್ಟು 1.01,14,872 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ.
ಕೃಷಿ ಪಂಪ್‌ಸೆಟ್‌ಗೂ ಬರಲಿದೆ ಪ್ರಿಪೇಯ್ಡ್ ಮೀಟರ್
2019- 230 ಪ್ರಕರಣ : ಜಿಲ್ಲೆಯಲ್ಲಿ ಕಳೆದ 2019ರಲ್ಲಿ ಬೆಸ್ಕಾಂ ಜಾಗೃತ ದಳದ ಪೊಲೀಸರ ಠಾಣೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾದಂತೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 69 ಪ್ರಕರಣ ದಾಖಲಾಗಿ 11,30,468 ದಂಡ ವಸೂಲಿಯಾದರೆ ಚಿಂತಾಮಣಿಯಲ್ಲಿ 40 ಪ್ರಕರಣ, 19,48,885 ರು.ದಂಡ, ಬಾಗೆಪಲ್ಲಿಯಲ್ಲಿ 37 ಪ್ರಕರಣ ದಾಖಲಾಗಿ ಒಟ್ಟು 14, 84, 678 ರು. ದಂಡ, ಗುಡಿಬಂಡೆಯಲ್ಲಿ 1 ಪ್ರಕರಣ ದಾಖಲಾಗಿ 16,505 ದಂಡ ಗೌರಿಬಿದನೂರಿನಲ್ಲಿ 51 ಪ್ರಕರಣಗಳಂದ 13 ಲಕ್ಷ ದಂಡ, ಶಿಡ್ಲಘಟ್ಟದಲ್ಲಿ 32 ಪ್ರಕರಣಗಳಿಂದ 6.5 ಲಕ್ಷ ದಂಡ ವಸೂಲಿಯಾಗಿದೆ.
2020ರಲ್ಲಿ 164 ಪ್ರಕರಣ : ಕಳೆದ 2020ರಲ್ಲಿ ಜಿಲ್ಲೆಯ ಬಾಗೇಪಲ್ಲಿಯಲ್ಲಿ 37 ಪ್ರಕರಣ 9,43,463 ರು. ದಂಡ ವಸೂಲಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಬಹುತೇಕ ವಿದ್ಯುತ್ ಕಳ್ಳತನ ಪ್ರಕರಣಗಳು ಮನೆ ನಿರ್ಮಾಣದ ವೇಳೆ ಸಂಪ್‌ಗೆ ವಿದ್ಯುತ್ ಬಳಕೆಗಾಗಿ ನೇರವಾಗಿ ವಿದ್ಯುತ್ ಬಳಕೆ ಮಾಡಿದರೆ ವಾಣಿಜ್ಯ ಬಳಕೆಗಾಗಿ ಕುಡಿಯುವ ನೀರು ಸರಬರಾಜು ಮಾಡುವ ಮೊಟಾರ್‌ಗಳಿಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿರುವುದು ಕಂಡು ಬಂದಿದೆ. .
ಇನ್ನು ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.