ಚಿಕ್ಕಮಗಳೂರು: ಗನ್ ಒರೆಸಿಡುವಾಗ ಮಿಸ್ ಫೈರ್, ಸ್ಥಳದಲ್ಲೇ ವ್ಯಕ್ತಿ ಮೃತ್ಯು, ಸಾವಿನ ಸುತ್ತ ಅನುಮಾನ..!

ಮಿಸ್ ಫೈರ್ ನಲ್ಲಿ ಸಾಕಷ್ಟು ಅನುಮಾನಗಳಿದ್ದು ಇದಕ್ಕೂ ನಿಜಕ್ಕೂ ಮಿಸ್ ಫೈರ್ ಆಗಿದ್ದಾ? ಅಥವಾ ಆತ್ಮಹತ್ಯೆಯ ಇಲ್ಲ ಯಾರಾದರೂ ಕೊಲೆ ಮಾಡಿದ್ದಾರಾ? ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡ ಮಲ್ಲಂದೂರು ಪೊಲೀಸರು 

45 years old man dies due to gun fire in chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.27): ಬಂದೂಕು ಒರೆಸಿಡುವಾಗ ಮಿಸ್ ಫೈರ್ ಆಗಿ 45 ವರ್ಷದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಭದ್ರಾಭಯಾರಣ್ಯ ವಲಯ ತಪ್ಪಲಿನ ಕೊಳಗಾಮೆ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಮೃತರನ್ನ ಆನಂದ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರ್ಘಟನೆ ಸಂಭವಿಸಿದ್ದು ಇದು ಆತ್ಮಹತ್ಯೆಯೋ ಅಥವಾ ನಿಜಕ್ಕೂ ಮಿಸ್ ಫೈರ್ ಆಗಿ ಸಾವನ್ನಪ್ಪಿರುವುದೋ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಸಾವಿನ ಸುತ್ತ ಅನುಮಾನ : 

ಮಲೆನಾಡಲ್ಲಿ ಕಾಡು ಪ್ರಾಣಿಗಳು ಹಾಗೂ ಕಳ್ಳ ಕಾಕರಿಂದ ಬೆಳೆ ಹಾಗೂ ಜೀವ ಉಳಿಸಿಕೊಳ್ಳಲು ಸರ್ಕಾರವೇ ಟ್ರೈನಿಂಗ್ ಹಾಗೂ ಅನುಮತಿ ನೀಡಿ ಬಂದೂಕು ಇಟ್ಟಿಕೊಳ್ಳಲು ಅನುಮತಿ ಕೊಡುತ್ತದೆ. ಜಿಲ್ಲೆಯ ಮಲೆನಾಡು ಭಾಗದ ಸಾವಿರಾರು ಮನೆಗಳಲ್ಲಿ ಬಂದುಗಳಿವೆ. ಕೊಳಗಾಮೆ ಗ್ರಾಮದ ಆನಂದ್ ಅವರ ಮನೆಯಲ್ಲಿ ಬಂದೂಕು ಇದ್ದು, ಶೆಡ್ಡಿನಿಂದ ಮನೆ ಒಳಗಡೆ ತೆಗೆದುಕೊಂಡು ಹೋಗಲು ಒರೆಸುವಾಗ ಮಿಸ್ ಫೈರಾಗಿ ಸಾವನಪ್ಪಿದ್ದಾರೆ ಎಂದು ದೂರು ನೀಡಿದ್ದಾರೆ. ಆದರೆ, ಸಾಮಾನ್ಯವಾಗಿ ಬಂದೂಕು ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಯಾರೂ ಕೂಡ ಬುಲೆಟ್ ಲೋಡ್ ಮಾಡಿ ಇಟ್ಟಿರುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಬಂದೂಕು ಮನೆಯಲ್ಲಿ ಇದ್ದಾಗಲೂ ಲೋಡ್ ಮಾಡಿ ಇಟ್ಟಿದ್ದರಾ ಎಂಬ ಅನುಮಾನ ಮೂಡಿದೆ. ಸಾಲದಕ್ಕೆ ಮೃತ ಆನಂದ್ ಅವರ ಬಲಗಣ್ಣಿನಿಂದ ಹೊಕ್ಕ ಗುಂಡು ಹಿಂದೆ ತಲೆ ಸೀಳಿ ಹೊರಬಂದಿದೆ. ಈ ಮಿಸ್ ಫೈರ್ ನಲ್ಲಿ ಸಾಕಷ್ಟು ಅನುಮಾನಗಳಿದ್ದು ಇದಕ್ಕೂ ನಿಜಕ್ಕೂ ಮಿಸ್ ಫೈರ್ ಆಗಿದ್ದಾ? ಅಥವಾ ಆತ್ಮಹತ್ಯೆಯ ಇಲ್ಲ ಯಾರಾದರೂ ಕೊಲೆ ಮಾಡಿದ್ದಾರಾ? ಎಂಬ ಎಲ್ಲಾ ಆಯಾಮಗಳಲ್ಲೂ ಮಲ್ಲಂದೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಜೀವನದಲ್ಲಿ ನೆಮ್ಮದಿಯಾಗಿರಲು ಸರಳವಾಗಿ ಬದುಕಬೇಕು: ಸಿ.ಟಿ.ರವಿ

ಪೊಲೀಸರಿಂದ ತೀವ್ರ ತನಿಖೆ : 

ಶವ ಪರೀಕ್ಷೆಗಾಗಿ ಹಾಸನದ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನ ಕೊಂಡೊಯ್ದಿದ್ದು ಹೇಗೆ ಸಾವನ್ನಪ್ಪಿದ್ದಾರೆ ಎಂದು ವರದಿಗಾಗಿ ಕಾಯುತ್ತಿದ್ದಾರೆ. ಸೋಮವಾರ ಇಳಿ ಸಂಜೆ ಮನೆಯಲ್ಲಿ ಯಾರು ಇರಲಿಲ್ಲ. ಪತ್ನಿ ಹಾಗೂ ಮಕ್ಕಳು ಚಿಕ್ಕಮಗಳೂರು ನಗರಕ್ಕೆ ಬಂದಿದ್ದರು. ಈ ವೇಳೆ ಪತ್ನಿಗೆ ಫೋನ್ ಮಾಡಿದ್ದ ಮೃತ ಆನಂದ್ ಅವರನ್ನು ಕರೆದುಕೊಂಡು ಬರಲು ನಾನೂ ಬರುವುದಿಲ್ಲ ನೀವು ಅಣ್ಣನ ಜೊತೆ ಬನ್ನಿ ಎಂದು ಫೋನ್ ಮಾಡಿ ಹೇಳಿದ್ದರು. ಆದರೆ, ಪತ್ನಿ ಹಾಗೂ ಮಕ್ಕಳು ಮನೆಗೆ ಬಂದು ನೋಡುವಷ್ಟರಲ್ಲಿ ಆನಂದ್ ಶೆಡ್ ನಲ್ಲಿ ಸಾವನ್ನಪ್ಪಿದ್ದರು. ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾವಿನ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ. 

Latest Videos
Follow Us:
Download App:
  • android
  • ios