Asianet Suvarna News Asianet Suvarna News

ಕೊಪ್ಪಳ: ಮತ್ತೆ 44 ಕೊರೋನಾ ಪಾಸಿಟಿವ್‌ ಕೇಸ್‌..!

ಸೋಂಕಿ​ನಿಂದ ಬಳ​ಲು​ತ್ತಿ​ದ್ದ 60 ವಷ​ರ್‍ದ ಮಹಿಳೆ ಸಾವು| ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‌ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಜನರಿಗೆ ಕೊರೋನಾ ಪಾಸಿಟಿವ್‌ ಬಂದಿರುವುದು ಮೊದಲು| ಕಾರಟಗಿ ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಶನಿವಾರ ಒಟ್ಟು ಐದು ಪಾಸಿಟಿವ್‌ ಪ್ರಕರಣಗಳು ದೃಢ|

44 New Coronavirus Positive Cases in Koppal district
Author
Bengaluru, First Published Jul 12, 2020, 7:59 AM IST

ಕೊಪ್ಪಳ(ಜು.12): ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 44 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 210ಕ್ಕೆ ಏರಿಕೆಯಾಗಿದೆ. ಶನಿವಾರ 11 ಜನರು ಗುಣಮುಖರಾಗಿದ್ದು, ಇದರಿಂದ ಇದುವರೆಗೂ ಗುಣಮುಖವಾದವರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಉಳಿದವರ ಪೈಕಿ 71 ಜನರು ಬೆಡ್‌ನಲ್ಲಿ ಇದ್ದರೆ ಉಳಿದವರು ಕೇರ್‌ ಸೆಂಟರ್‌ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಜನರಿಗೆ ಕೊರೋನಾ ಪಾಸಿಟಿವ್‌ ಬಂದಿರುವುದು ಮೊದಲು. ಇದನ್ನು ಕೊರೋನಾ ​ಸ್ಫೋಟ ಎಂದೇ ಹೇಳಲಾಗುತ್ತದೆ.

ವೈದ್ಯೆಗೆ ಸೋಂಕು

ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯೆಗೂ ಕೊರೋನಾ ದೃಢಪಟ್ಟಿದೆ. ಇತ್ತೀಚೆಗೆ ಇಲ್ಲಿ ಹೆರಿಗೆಯಾದ ಮಹಿಳೆಗೂ ಕೋವಿಡ್‌ ಇರುವುದು ದೃಢಪಟ್ಟಿರುವ ಬೆನ್ನಲ್ಲೇ ಈಗ ವೈದ್ಯ ಮಹಿಳೆಗೂ ಬಂದಿದೆ. ಹೀಗಾಗಿ, ವೈದ್ಯೆ ವಾಸ ಮಾಡುವ ಭಾಗ್ಯನಗರದ ಅಡವಿ ಆಂಜನೇಯ ಬಡಾವಣೆಯಲ್ಲಿಯೂ ಸೀಲ್‌ಡೌನ್‌ ಮಾಡಲಾಗಿದೆ. ಜನರೇ ಸ್ವಯಂ ಪ್ರೇರಿತವಾಗಿ ಮುಳ್ಳು ಹಚ್ಚಿ, ಮುಂಜಾಗ್ರತೆ ವಹಿಸಿದ್ದಾರೆ ಜನರು.

ತೀವ್ರ ವಿರೋಧ

ಕಾರಟಗಿಯ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದು, ಈಕೆಯನ್ನು ಕಾರಟಗಿಯ ಬದಲಾಗಿ ಸೋಮನಾಳ ಮತ್ತು ನವಲಿ ಬಳಿ ಇರುವ ರೈಸ್‌ಪಾರ್ಕ್ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದು ಸುತ್ತಮುತ್ತಲ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಗಂಗಾವತಿ: ಮಹಾಮಾರಿ ಕೊರೋನಾ ಸೋಂಕಿಗೆ ಬಲಿಯಾದವರಿ​ಗೆ ಸ್ಮಶಾನ ಹುಡುಕಾಟ

ಕಾರಟಗಿಯಲ್ಲಿನ ಸುಡಗಾಡು ಇದ್ದರೂ ಸುಮಾರು 15 ಕಿಲೋ ಮೀಟರ್‌ ದೂರದಲ್ಲಿ ಯಾಕೆ ತರಲಾಗುತ್ತದೆ. ಅಲ್ಲಿಯೇ ಅಂತ್ಯಸಂಸ್ಕಾರ ಮಾಡಿ ಎಂದು ಆಗ್ರಹಿಸಿದ್ದಾರೆ. ಈ ನಡುವೆ ತೆರೆಮರೆಯಲ್ಲಿ ಶಾಸಕ ಬಸವರಾಜ ದಡೆಸ್ಗೂರು ಅವರು ಸಹ ಶತಾಯ ಪ್ರಯತ್ನ ಮಾಡಿದರೂ ಪ್ರಯತ್ನ ಕೈಗೂಡಿಲ್ಲ. ಬದಲಾಗಿ ಸಮಸ್ಯೆ ಜಟಿಲವಾಗಿದೆ. ರೈಸ್‌ ಪಾರ್ಕ್ ಸರ್ಕಾರಿ ಜಾಗದಲ್ಲಿದ್ದು, ಇಲ್ಲಿ ಯಾವುದೇ ಅಡ್ಡಿಯಾಗದು ಎಂದು ಅಧಿಕಾರಿಗಳು ತೀರ್ಮಾನಿಸಿದ್ದರು. ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತಡರಾತ್ರಿವರೆಗೂ ಸಮಸ್ಯೆ ಮುಂದುವರದೆ ಇತ್ತು.

ಕಾರ​ಟಗಿ ತಾಲೂ​ಕಲ್ಲಿ ಐದು ಜನ​ರಿಗೆ ಸೋಂಕು ದೃಢ

ಬತ್ತದ ಕಣಜದಲ್ಲಿ ಕಿಲ್ಲರ್‌ ಕೊರೋನಾ ತನ್ನ ಆರ್ಭಟ ಮುಂದುವರೆಸಿದ್ದು, ಶನಿವಾರ ಒಬ್ಬ ಮಹಿಳೆ ಮೃತಪಟ್ಟಿದ್ದರೆ, ವಿವಿಧೆಡೆ ಐದು ಜನರಿಗೆ ಪಾಸಿಟಿವ್‌ ದೃಢಪಟ್ಟಿದೆ. ಇಲ್ಲಿನ ವಾರ್ಡ್‌ 1ರ ಶರಣಬಸವೇಶ್ವರ ದೇವಸ್ಥಾನದ ಪರಿಸರದಲ್ಲಿನ 60 ವರ್ಷ ಮಹಿಳೆ ಕೊರೋನಾ ವೈರಸ್‌ದಿಂದ ಶನಿವಾರ ಕೊಪ್ಪಳದ ಕೋವಿಡ್‌-19 ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಜಿಲ್ಲಾಡಳಿತ ದೃಢಪಡಿಸಿದೆ.

ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಶುಕ್ರವಾರ ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಪಡೆದಿದ್ದರು. ಅನುಮಾನಗೊಂಡ ವೈದ್ಯರು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಶುಕ್ರವಾರ ರಾತ್ರಿ 9.30ಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜುಲೈ 11ರ ಬೆಳಗ್ಗೆ 11.15ಕ್ಕೆ ಮೃತಪಟ್ಟಿದ್ದಾಗಿ ಜಿಲ್ಲಾಧಿಕಾರಿ ಎಸ್‌. ವಿಕಾಶ್‌ ಕಿಶೋರ್‌ ತಿಳಿಸಿದ್ದಾರೆ.

ಕಾರಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಈ ಮಹಿಳೆ ಸಾವಿನ ಸುದ್ದಿ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದೆ. ವಿಚಿತ್ರ ಎಂದರೆ ಶನಿವಾರ ತಾಲೂಕಿನಲ್ಲಿ ಒಟ್ಟು ಐದು ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢವಾಗಿದ್ದು ಸಹ ಆತಂಕ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.

ಪಾಸಿಟಿವ್‌ ವೈರಸ್‌ದಿಂದ ಮೃತಪಟ್ಟಮಹಿಳೆಯ ಅಂತ್ಯ ಸಂಸ್ಕಾರ ಯಾವುದೇ ರೀತಿ ಗೊಂದಲವಾಗದಂತೆ ತಾಲೂಕು ಆಡಳಿತ, ಕಾರಟಗಿ ಪುರಸಭೆ ಸೂಕ್ತ ವ್ಯವಸ್ಥೆ ಮಾಡಲು ಶನಿವಾರ ಸಂಜೆಯವರಿಗೂ ಪ್ರಯತ್ನ ಪಟ್ಟಿತು. ಪುರಸಭೆ ಮೂಲಗಳ ಪ್ರಕಾರ ನವಲಿ ಬಳಿ ರೈಸ್‌ಟೆಕ್‌ ಪಾರ್ಕ್ ಪರಿಸರದ ಸರಕಾರಿ ಪಾಳು ಜಾಗದಲ್ಲಿ ಈ ಮಹಿಳೆಯ ಅಂತ್ಯಸಂಸ್ಕಾರ ಮಾಡಲು ಸ್ಥಳ ಪರಿಶೀಲನೆ ಕಾರ್ಯ ನಡೆಯಿತು.

ಐದು ಪಾಸಿಟಿವ್‌:

ಕಾರಟಗಿ ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಶನಿವಾರ ಒಟ್ಟು ಐದು ಪಾಸಿಟಿವ್‌ ಪ್ರಕರಣಗಳು ದೃಢವಾಗಿವೆ. ಮರ್ಲಾನಹಳ್ಳಿಯಲ್ಲಿ ಶನಿವಾರ 4 ಜನರಿಗೆ ಪಾಸಿಟಿವ್‌ ಕಂಡು ಬಂದಿರುವುದರಿಂದ ಇಡೀ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಗ್ರಾಮದ 2ನೇ ವಾರ್ಡ್‌ನ ವ್ಯಕ್ತಿಯೊಬ್ಬರಿಗೆ ಕೊರೋನಾ ಕಾಣಿಸಿಕೊಂಡಿತ್ತು. ವ್ಯಕ್ತಿಯ ಜತೆ ಸಂಪರ್ಕದಲ್ಲಿದ್ದ ಇತರರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಈ ಪ್ರಕರಣದ ಪ್ರಥಮ ಸಂಪರ್ಕಿತರ ವೈರಸ್‌ ಪರೀಕ್ಷೆಯಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆರೋಗ್ಯ ಇಲಾಖೆ ಸೋಂಕಿತನನ್ನು ಶನಿವಾರ ಬೆಳಗ್ಗೆ ಚಿಕಿತ್ಸೆಗಾಗಿ ಕೊಪ್ಪಳ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿದೆ.

ದೇವಿಕ್ಯಾಂಪ್‌: 

ಕಾರಟಗಿ ಪುರಸಭೆ ವ್ಯಾಪ್ತಿಯ ವಾರ್ಡ್‌ 23ರ ದೇವಿಕ್ಯಾಂಪ್‌ನಲ್ಲಿ 29 ವರ್ಷ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ದೃಢವಾಗಿದೆ. ಮೂಲತಃ ಕ್ಯಾಂಪಿನ ನಿವಾಸಿಯಾಗಿರುವ ಇವರು ಚೆನ್ನೈಗೆ ತೆರಳಿದ್ದರು. ಅಲ್ಲಿಂದ ಹೈದರಾಬಾದ್‌ ಮೂಲಕ ಕಾರಟಗಿ ಪಟ್ಟಣಕ್ಕೆ ಜುಲೈ 4ರಂದು ಆಗಮಿಸಿದ್ದರು. ತಮ್ಮ ಆರೋಗ್ಯದಲ್ಲಿ ಏರುಪೇರಾಗಿದ್ದ ಅನುಮಾನದಿಂದ ಇಲ್ಲಿನ ಸಮುದಾಯ ಆರೋಗ್ಯ ಆಸ್ಪತ್ರೆಗೆ ತೆರಳ ಸ್ವ್ಯಾಬ್‌ ಟೆಸ್ಟ್‌ಗೊಳಪಟ್ಟಿದ್ದರು. ಇವರಿಗೆ ಸೋಂಕು ತಗಲಿದ್ದು ಶುಕ್ರವಾರ ರಾತ್ರಿಯೇ ದೃಢಪಟ್ಟಿದ್ದರಿಂದ ಇವರನ್ನು ಮಧ್ಯರಾತ್ರಿಯೇ ಕೊಪ್ಪಳದ ಕೋವಿಡ್‌-19 ಆಸ್ಪತ್ರೆಗೆ ಕರೆದ್ಯೊಯಲಾಗಿದೆ.

ಮರ್ಲಾನಹಳ್ಳಿ ಗ್ರಾ.ಪಂ. ಮತ್ತು ಕಾರಟಗಿ ಪುರಸಭೆ ಸಿಬ್ಬಂದಿ ರೋಗ ಹರಡದಂತೆ ಸೋಂಕಿತರ ನಿವಾಸದ ಸುತ್ತ ಸ್ಯಾನಿಟೈಸೇಸನ್‌ ಮಾಡುವ ಜತೆಗೆ ರಾಸಾಯನಿಕ ಸಿಂಪಡಿಸಿದೆ. ಸೋಂಕಿತರ ಮನೆ ಸುತ್ತಲಿನ 50 ಮೀ. ಪ್ರದೇಶದಲ್ಲಿ ಕಂಟೈನ್ಮೆಂಟ್‌ ಜೋನ್‌, 200 ಮೀ. ವ್ಯಾಪ್ತಿ ಪ್ರದೇಶವನ್ನು ಬಪೊರ್‌ ಜೋನ್‌ ಮಾಡಲಾಗಿದ್ದು, ಎರಡು ಕಡೆ ಪೊಲೀಸ್‌ ಸಿಬ್ಬಂದಿ ನಿಗಾವಹಿಸಿವೆ. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಥಮ, ದ್ವಿತೀಯ ಸಂಪರ್ಕಗಳ ಮಾಹಿತಿ ಕಲೆ ಹಾಕಿ ಜನಜಾಗೃತಿಗೊಳಿಸಿದರು.
 

Follow Us:
Download App:
  • android
  • ios