ಉಡುಪಿ: ಪ್ರವಾಹ ಪರಿಹಾರಕ್ಕೆ 40 ಕೋಟಿ ರು. ಬಿಡುಗಡೆ

ಉಡುಪಿ ಜಿಲ್ಲೆಯಲ್ಲಿ ಕಳೆದ 38 ವರ್ಷಗಳಲ್ಲೇ ಅತೀ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲೆಯ ಪ್ರವಾಹ ಪರಿಹಾರಕ್ಕೆ 40 ಕೊಟಿ ರು. ಬಿಡುಗಡೆಗೆ ಸೂಚಿಸಲಾಗಿದೆ.

40 Crore Fund Released For Udupi District  snr

ಉಡುಪಿ (ಸೆ.28): ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಪರಿಹಾರಕ್ಕೆ 40 ಕೋಟಿ ರು. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರು ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ.

ಶನಿವಾರ ಜಿಲ್ಲೆಯ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ವಿ.ಸುನಿಲ್‌ ಕುಮಾರ್‌, ಸುಕುಮಾರ್‌ ಶೆಟ್ಟಿಹಾಗೂ ಕೆ.ರಘುಪತಿ ಭಟ್‌ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಪ್ರಾಕೃತಿಕ ವಿಕೋಪದಡಿ ಉಡುಪಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ! .

ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಮೊದಲ ಹಂತದಲ್ಲಿ 40 ಕೋಟಿ ರು. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಭಟ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಳೆದ 38 ವರ್ಷಗಳಲ್ಲಿ ಮೊದಲ ಭಾರಿ ಅತಿ ಭೀಕರ ಪ್ರವಾಹ ಪರಿಸ್ಥಿತಿ ಸಂಭವಿಸಿತ್ತು. ಇದರಿಂದ ನೂರಾರು ಮನೆಗಳು ಕುಸಿದಿದ್ದು, ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿತ್ತು. ಮನೆಗಳನ್ನು ಕಳೆದುಕೊಂಡು ಜನರು ಸಂಕಷ್ಟ ಎದುರಿಸಿದ್ದರು.

Latest Videos
Follow Us:
Download App:
  • android
  • ios