ಭದ್ರಾವತಿ(ಜು.30): ಕಾಡು ಮೊಲಗಳನ್ನು ಕೊಂದು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ತಾಲೂಕಿನ ಬಂಡಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್‌ ಅಲಿಯಾಸ್‌ ಭೀಮಾನಾಯ್ಕ, ಪ್ರವೀಣ್‌, ಪ್ರಕಾಶ ಮತ್ತು ಹಾಲಾನಾಯ್ಕ ಎಂಬುವರನ್ನು ಬಂಧಿಸಲಾಗಿದೆ. ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ 4 ಮೊಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಾಸನದ ಒಸ್ಸೂರು ಕಾಫಿ ಎಸ್ಟೇಟ್ ಅಕ್ರಮ ಜಿಂಕೆ ಬಂಧನಕ್ಕೆ ಮುಕ್ತಿ

ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಿಗುಡ್ಡ ಗ್ರಾಮದಲ್ಲಿ ರಾತ್ರಿ ವೇಳೆ ಮೊಲಗಳ ಬೇಟೆಯಲ್ಲಿ ತೊಡಗಿದ್ದಾಗ ಚನ್ನಗಿರಿ ವಲಯ ಅರಣ್ಯಾಧಿಕಾರಿ ಆನಂದ ಬಿ. ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಎಚ್‌. ರಾಮು, ಅರಣ್ಯ ರಕ್ಷಕ ಪಿ.ಡಿ. ಚೇತನ್‌ ಮತ್ತು ಬಂಡಿಗುಡ್ಡ ಅರಣ್ಯ ವ್ಯಾಪ್ತಿ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ