Asianet Suvarna News Asianet Suvarna News

ಅಶ್ವತ್ಥನಾರಾಯಣ ಇಲಾಖೆಗಳ ಕಡತ ಬಾಕಿ ಶೂನ್ಯ, 3760 ಕಡತ ವಿಲೇವಾರಿ

* ಡಾ.ಅಶ್ವತ್ಥನಾರಾಯಣ ನಿರ್ವಹಿಸಿದ್ದ ಇಲಾಖೆಗಳ ಕಡತ ಬಾಕಿ ಶೂನ್ಯ 
* ಎಲ್ಲ 3,760 ಕಡತ ವಿಲೇವಾರಿ 
* ಪಾರದರರ್ಶಕ ಮತ್ತು ತ್ವರಿತ ವಿಲೇವಾರಿ

3760 files clear under the Dr CN Ashwath Narayan administration mah
Author
Bengaluru, First Published Jul 29, 2021, 11:54 PM IST | Last Updated Jul 29, 2021, 11:57 PM IST

ಬೆಂಗಳೂರು (ಜು. 29) ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿಎನ್‌ ಅಶ್ವತ್ಥನಾರಾಯಣ ಅವರು 700 ದಿನಗಳ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿ‌ ದಾಖಲೆ ಸ್ಥಾಪಿಸಿದ್ದಾರೆ. 

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು 26ರಂದು ರಾಜೀನಾಮೆ ನೀಡುವವರೆಗೆ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಗಳಲ್ಲಿದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿ, ಬಾಕಿ ಕಡತಗಳ ಪ್ರಮಾಣವನ್ನು ಶೂನ್ಯಕ್ಕೆ ತಂದಿದ್ದಾರೆ. 

ಇ-ಆಫೀಸ್‌ (ಕಾಗದ ರಹಿತ ಕಡತ) ವ್ಯವಸ್ಥೆಯ ಮೂಲಕವೂ ಸಾವಿರಾರು ಕಡತಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ. ಇ- ಕಚೇರಿ ಮೂಲಕವೇ ವಿಶ್ವವಿದ್ಯಾಲಯಗಳ ಕಡತಗಳ ವಿಲೇವಾರಿ ಕೂಡ ಆರಂಭವಾಗಿದೆ. 

ಒಟ್ಟು 3,760 ಕಡತ ವಿಲೇವಾರಿ : ಅಶ್ವತ್ಥನಾರಾಯಣ ಅವರು ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ನಿರ್ಗಮಿಸುವ ದಿನದವರೆಗೂ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಬಂದ ಕಡತಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ. 

ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು 1,746 ಮ್ಯಾನುಯಲ್ ಕಡತಗಳು ಬಂದಿದ್ದು, ಅಷ್ಟನ್ನೂ ಅಶ್ವತ್ಥನಾರಾಯಣ ಅವರು ವಿಲೇವಾರಿ ಮಾಡಿದ್ದಾರೆ. ಜತೆಗೆ, 1,441 ಇ-ಕಡತಗಳು ಬಂದಿದ್ದು, ಅವೂ ವಿಲೇವಾರಿ ಆಗಿವೆ. 

ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ-ಬಿಟಿ ಇಲಾಖೆಯಲ್ಲಿ 62 ಮ್ಯಾನುಯಲ್ ಕಡತಗಳು, 86 ಇ-ಕಡತಗಳು ಮಾಜಿ ಡಿಸಿಎಂ ಅವರಿಂದ ವಿಲೇವಾರಿ ಆಗಿವೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 84 ಮ್ಯಾನುಯಲ್ ಕಡತಗಳು, 96 ಇ-ಕಡತಗಳು ಬಂದಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಂದಿದ್ದ 245 ಮ್ಯಾನುಯಲ್ ಕಡತಗಳನ್ನೂ ಡಾ.ಅಶ್ವತ್ಥನಾರಾಯಣ ಅವರು ಕ್ಲಿಯರ್‌ ಮಾಡಿದ್ದಾರೆ. 

ಒಟ್ಟಾರೆಯಾಗಿ ಅವರು 2,137 ಮ್ಯಾನುಯಲ್ ಕಡತಗಳು, 1,633 ಇ-ಕಡತಗಳನ್ನು ಬಾಕಿ ಇಟ್ಟುಕೊಳ್ಳದೇ ವಿಲೇವಾರಿ ಮಾಡಿದ್ದಾರೆ. ಕೆಲವೊಮ್ಮೆ ರಾತ್ರಿ ಹತ್ತು ಗಂಟೆಯವರೆಗೂ ಕಚೇರಿಯಲ್ಲೇ ಕೂತು ಕಡತಗಳನ್ನು ವಿಲೇವಾರಿ ಮಾಡಿದ್ದರು. 

ನೂತನ ಶಿಕ್ಷಣ ನೀತಿಯ ಒಳ-ಹೊರಗು

ಯಾವುದೇ ಕೆಲಸವನ್ನು ಬಾಕಿ ಇಟ್ಟುಕೊಳ್ಳುವುದು ನನ್ನ ಜಾಯಮಾನವಲ್ಲ. ಬಂದ ಕಡತವನ್ನೂ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸಾಧ್ಯವಾದಷ್ಟು ತ್ವರಿತವಾಗಿ ಕ್ಲಿಯರ್‌ ಮಾಡಿದ್ದೇನೆ. ಪ್ರವಾಸ ಇದ್ದಾಗ ಒಂದು ಅಥವಾ ಎರಡು ದಿನ ತಡವಾಗಿರುವುದು ಬಿಟ್ಟರೆ ಬಾಕಿ ಇಟ್ಟುಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಇ-ಆಫೀಸ್‌ ವ್ಯವಸ್ಥೆಯಿಂದ ಅನೇಕ ಫೈಲುಗಳು ವೇಗವಾಗಿ ವಿಲೇವಾರಿ ಆಗಿವೆ. ಇದರಿಂದ ನಾನು ನಿರ್ವಹಣೆ ಮಾಡುತ್ತಿದ್ದ ಎಲ್ಲ ಇಲಾಖೆಗಳಲ್ಲಿ ಕ್ಷಮತೆ ಹೆಚ್ಚಾಗಿದೆ. ಕಡತ ವಿಲೇವಾರಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವ ಸಂಬಂಧ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಸಕ್ತಿ ತೋರಿದ್ದು ಇದು ಒಳ್ಳೆ ಬೆಳವಣಿಗೆ. ಇದರಿಂದ ಪಾರದರ್ಶಕತೆ ಬರುತ್ತೆ ಎಂಬುದು ನನ್ನ ನಂಬಿಕೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ವೈದ್ಯ ಶಿಕ್ಷಣದಲ್ಲಿ ಒಬಿಸಿ ಮೀಸಲು ಕ್ರಾಂತಿಕಾರಕ; 

ವೈದ್ಯಕೀಯ ಶಿಕ್ಷಣದಲ್ಲಿ ಹಿಂದುಳಿದ ವರ್ಗ (ಒಬಿಸಿ) ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕಲ್ಪಿಸಲು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೇ ದಿಟ್ಟಹೆಜ್ಜೆ ಎಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಮಾಜಿ ಸಚಿವರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥಣಾರಾಯಣ ಹೇಳಿದ್ದಾರೆ. 

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿರುವ ಈ ನಿರ್ಧಾರ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ ಹಾಗೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಎಲ್ಲ ಹಂತದ ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. 

ಒಬಿಸಿ ಕೋಟಾದಲ್ಲಿ ಶೇ. 27 ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲು ಕಲ್ಪಿಸುವುದು ಸುಲಭದ ಮಾತಲ್ಲ. ಅದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ಮೋದಿ ಅವರಲ್ಲಿ ಅಂತಹ ಬಲವಾದ ಇಚ್ಛಾಶಕ್ತಿ ಇರುವ ಕಾರಣಕ್ಕೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಇಂಥ ಅತ್ಯುತ್ತಮ ನಿರ್ಧಾರ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ. 

ಕೇಂದ್ರ ಸರಕಾರದ ಈ ನಿರ್ಧಾರದಿಂದ ಪ್ರತಿವರ್ಷವೂ 1,500 ಒಬಿಸಿ ಅಭ್ಯರ್ಥಿಗಳಿಗೆ ಎಂಬಿಬಿಎಸ್ ನಲ್ಲಿ, 2,500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರದಲ್ಲಿ ಹಾಗೂ 550 ಆರ್ಥಿಕವಾಗಿ ಹಿಂದುಳಿದ  ವಿದ್ಯಾರ್ಥಿಗಳಿಗೆ ಎಂಬಿಬಿಎಸ್, 1000 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ʼಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

 


 

Latest Videos
Follow Us:
Download App:
  • android
  • ios