ಟಿಬಿ ಡ್ಯಾಂನಿಂದ 35,155 ಕ್ಯುಸೆಕ್‌ ನೀರು ಬಿಡುಗಡೆ: ಹಂಪಿ ಪುರಂದರ ದಾಸರ ಮಂಟಪ ಮುಳುಗಡೆ

* ಡ್ಯಾಂನಿಂದ 35,155 ಕ್ಯುಸೆಕ್ಸ್‌ ನೀರು ಹೊರಕ್ಕೆ
* ತುಂಬಿ ಹರಿಯುತ್ತಿರುವ ತುಂಗಭದ್ರಾ
* ಕಳೆದ ಜುಲೈ ತಿಂಗಳಿಂದಲೂ ಸಂಪೂರ್ಣ ಭರ್ತಿಯಾಗಿರುವ ಜಲಾಶಯ
 

35155 Cusecs of Water Released from Tungabhadra Dam grg

ಹೊಸಪೇಟೆ(ಅ.11):  ಕರ್ನಾಟಕ(Karnataka),ತೆಲಂಗಾಣ(Telangana) ಹಾಗೂ ಆಂಧ್ರ(Andhra Pradesh) ರಾಜ್ಯಗಳ ಲಕ್ಷಾಂತರ ರೈತರ(Farmers) ಜೀವನಾಡಿ ತುಂಗಭದ್ರಾ ಜಲಾಶಯದಿಂದ ಭಾನುವಾರ 12 ಕ್ರಸ್ಟ್‌ ಗೇಟ್‌ಗಳ ಮೂಲಕ 35,155 ಕ್ಯುಸೆಕ್‌ನಷ್ಟು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಯಿತು.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ(Tungabhadra Dam) ಬೀಳುತ್ತಿರುವ ಆಧಿಕ ಮಳೆಯ(Rain) ಪರಿಣಾಮ ಜಲಾಶಯದಲ್ಲಿ ಹರಿದು ಬರುತ್ತಿರುವ ಒಳಹರಿವು(Inflow) ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಹಿನ್ನೆಲೆ ಜಲಾಶಯದ 33 ಗೇಟ್‌ಗಳಲ್ಲಿ 12 ಗೇಟ್‌ಗಳನ್ನು 1.5 ಅಡಿ ಎತ್ತರದಲ್ಲಿ ಎತ್ತರಿಸಿ, ನದಿಗೆ(River) ನೀರು ಹರಿಸಲಾಯಿತು.

ಕಳೆದ ಜುಲೈ ತಿಂಗಳಿಂದಲೂ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನೀರಿನ ಸಮಾತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತುಂಗಭದ್ರಾ ಮಂಡಳಿ(Tungabhadra Board) ಆಗಾಗ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿದೆ. ಇದರ ಪರಿಣಾಮ ಹಂಪಿಯ(Hampi) ತುಂಗಭದ್ರಾ ನದಿ ಅಪಾಯ ಮಟ್ಟಮೀರಿ ಹರಿಯುತ್ತಿದೆ.

ಹಸಿರು ಬಣ್ಣಕ್ಕೆ ತಿರು​ಗಿದ ತುಂಗಭದ್ರಾ ಜಲಾಶಯದ ನೀರು..!

ಜಲಾಶಯದ ಇಂದಿನ ನೀರಿನ ಮಟ್ಟ:

ಗರಿಷ್ಠ 1633 ಅಡಿ, ಇಂದಿನ 1633 ಅಡಿ. ಸಂಗ್ರಹ ಸಾಮರ್ಥ್ಯ 100.855 ಟಿಎಂಸಿ, ಒಳಹರಿವು 52716 ಕ್ಯುಸೆಕ್‌. ಹೊರಹರಿವು(Outflow): 45,200 ಕ್ಯುಸೆಕ್‌ನಷ್ಟಿದೆ.

ಹಂಪಿ ಪುರಂದರ ದಾಸರ ಮಂಟಪ ಮುಳುಗಡೆ

ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟಿರುವುದರಿಂದ ಐತಿಹಾಸಿಕ ಹಂಪಿಯ ನದಿಪಾತ್ರದ ಪುರಂದರ ಮಂಟಪ ಸಂಪೂರ್ಣ ಮುಳಗಡೆಯಾಗಿದೆ. ಮಂಟಪದ ಗೋಪುರದ ತುದಿಯಲ್ಲಿರುವ ಕೇಸರಿ ಧ್ವಜ ಮಾತ್ರ ಗೋಚರಿಸುತ್ತಿದೆ. ಚಕ್ರತೀರ್ಥ ಕೋದಂಡರಾಮಸ್ವಾಮಿ ದೇವಾಲಯದ ಹತ್ತಿರಕ್ಕೂ ನೀರು ಹರಿದು ಬಂದಿದೆ. ವಿರೂಪಾಕ್ಷೇಶ್ವರ ದೇವಾಲಯದ ಹತ್ತಿರದ ಸ್ನಾನಘಟ್ಟ, ವೈದಿಕ ಮಂಟಪ ಜಲಾವೃತವಾಗಿವೆ.

ಕೋಟಿಲಿಂಗ, ಲಕ್ಷ್ಮೀನರಸಿಂಹ, ಕೋಟಿಲಿಂಗಗಳು ನೀರಿನಲ್ಲಿ ಮರೆಯಾಗಿವೆ. ನದಿ ತುಂಬಿ ಹರಿಯುತ್ತಿರುವುದರಿಂದ ಬೋಟ್‌ ಸಂಚಾರವೂ ಸ್ಥಗಿತಗೊಂಡಿದೆ. ನವರಾತ್ರಿ(Navratri) ಹಿನ್ನೆಲೆ ಆಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು(Devotees) ಹಂಪಿಗೆ ಆಗಮಿಸುತ್ತಿರುವುದರಿಂದ ನದಿ ಪಾತ್ರದಲ್ಲಿ ಪೊಲೀಸ್‌(Police) ಹಾಗೂ ಗೃಹರಕ್ಷಕ(Home Guard) ಸಿಬ್ಬಂದಿ ನಿಗಾ ವಹಿಸಿದ್ದಾರೆ. ನದಿಯ ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.

Latest Videos
Follow Us:
Download App:
  • android
  • ios