ಬೆಳಗಾವಿ: ವಿಟಿಯುಗೆ ಬಂದಿದ್ದು 35 ಲಕ್ಷ ವಿದ್ಯುತ್‌ ಬಿಲ್‌, ಹೌಹಾರಿದ ಕುಲಪತಿ..!

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹೆಸ್ಕಾಂ 18 ಲಕ್ಷ ಬಿಲ್‌ ನೀಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್‌ ದರ ಏರಿಕೆ ಹಿನ್ನಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 5 ಲಕ್ಷ ಹೆಚ್ಚುವರಿ ಬಿಲ್‌ ಬಂದಿದೆ. ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ವಿಟಿಯು ಹೊಂದಿದ್ದು, ಇದರಲ್ಲಿ ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್‌ ಸೇರಿ ಜೂನ್‌ ತಿಂಗಳಲ್ಲಿ 35 ಲಕ್ಷ ಬಿಲ್‌ ಬಂದಿದೆ.

35 lakh Electricity Bill Came to Visvesvaraya Technological University Belagavi grg

ಬೆಳಗಾವಿ(ಜೂ.21):  ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಈಗ ವಿದ್ಯುತ್‌ ಬಿಲ್‌ ಶಾಕ್‌ ಕೊಟ್ಟಿದ್ದು, ಈ ತಿಂಗಳ ವಿದ್ಯುತ್‌ ಬಿಲ್‌ ನೋಡಿ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಹೌಹಾರಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹೆಸ್ಕಾಂ 18 ಲಕ್ಷ ಬಿಲ್‌ ನೀಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್‌ ದರ ಏರಿಕೆ ಹಿನ್ನಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 5 ಲಕ್ಷ ಹೆಚ್ಚುವರಿ ಬಿಲ್‌ ಬಂದಿದೆ. ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ವಿಟಿಯು ಹೊಂದಿದ್ದು, ಇದರಲ್ಲಿ ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್‌ ಸೇರಿ ಜೂನ್‌ ತಿಂಗಳಲ್ಲಿ 35 ಲಕ್ಷ ಬಿಲ್‌ ಬಂದಿದೆ.

ಕೇಂದ್ರದಿಂದ ಸರ್ವರ್‌ ಹ್ಯಾಕ್‌, ಕರ್ನಾಟಕದ ಯೋಜನೆಗಳಿಗೆ ಅಡ್ಡಿ ಯತ್ನ: ಜಾರಕಿಹೊಳಿ

ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್‌ಗೆ ಅಷ್ಟೇ 18 ಲಕ್ಷ ಬಿಲ್‌ನ್ನು ಹೆಸ್ಕಾಂ ನೀಡಿದೆ. ವಿಟಿಯು ಮುಖ್ಯ ಕ್ಯಾಂಪಸ್‌ ಸೇರಿ 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್‌ ಬಿಲ್‌ 35 ಲಕ್ಷ ಬಂದಿದೆ. ಮಾರ್ಚ್‌ ತಿಂಗಳಲ್ಲಿ 25,56,928, ಎಪ್ರಿಲ್‌ ತಿಂಗಳಲ್ಲಿ 25,29,021 ವಿದ್ಯುತ್‌ ಬಿಲ್‌ನ್ನು ವಿಟಿಯು ಪಾವತಿಸಿತ್ತು. ಮೇ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 35,05,869 ಬಿಲ್‌ ನೀಡಿದೆ. ಏಕಾಏಕಿ 10 ಲಕ್ಷ ಬಿಲ್‌ ಹೆಚ್ಚಿಗೆ ಬಂದಿರುವುದಕ್ಕೆ ವಿಟಿಯ ಆಡಳಿತ ಮಂಡಳಿ ಕಂಗಾಲಾಗಿದೆ. ಇನ್ನು 10 ಲಕ್ಷ ಹೆಚ್ಚುವರಿ ಬಿಲ್‌ ಬಂದಿರುವುದಕ್ಕೆ ಹೆಸ್ಕಾಂಗೆ ಪತ್ರ ಬರೆಯಲಾಗುವುದು. ಈ ಬಗ್ಗೆ ಗೊಂದಲ ಬಗೆಹರಿದ ಬಳಿಕವಷ್ಟೇ ಹೆಸ್ಕಾಂಗೆ ವಿದ್ಯುತ್‌ ಬಿಲ್‌ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios