ಹಾಸನ [ಅ.07]: ನಗರದ ಹೊಳೆನರಸೀಪುರ ರಸ್ತೆಯಲ್ಲಿ ಇರುವ ಮದ್ಯದ ಮಳಿಗೆಯಲ್ಲಿ ಮಾರಾಟವಾಗದೆ, ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ಸಿಬ್ಬಂದಿ ಶನಿವಾರ ನಾಶಪಡಿಸಿದರು.

ಹಳೆಯದಾದ 41 ರಟ್ಟಿನ ಪೆಟ್ಟಿಗೆ ಮತ್ತು 88 ಬಾಟಲ್‌ಗಳಲ್ಲಿ ಇದ್ದ ಒಟ್ಟು 357.840 ಲೀಟ​ರ್‍ ಮದ್ಯದ ದಾಸ್ತಾನುಗಳನ್ನು ಅಬಕಾರಿ ಉಪ ಅಧೀಕ್ಷಕ ಜಿ.ವಿ.ವಿಜಯಕುಮಾರ್‌ ಉಸ್ತುವಾರಿಯಲ್ಲಿ ನಾಶಪಡಿಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಬಕಾರಿ ನಿರೀಕ್ಷಕ ರಾಜಶೇಖರ್‌ ಆರ್‌. ಕರಡಕಲ್‌, ಮದ್ಯ ಮಳಿಗೆ ವ್ಯವಸ್ಥಾಪಕ ಎನ್‌.ಡಿ. ಜಗದೀಶ್‌ ಇತರರು ಇದ್ದರು.