ಉಡುಪಿಯಲ್ಲಿ ಗಮನ ಸೆಳೆದ ಪುಟ್ಟ ಪೊಲೀಸಮ್ಮ!
ಉದುಪಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪುಟಾಣಿ ಪೊಲೀಸಮ್ಮ ಎಲ್ಲರ ಗಮನ ಸೆಳೆದಳು. ಯಾರೀಕೆ..?
ಉಡುಪಿ(ಆ.16): ನಗರದ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಪುಟಾಣಿ ಪೊಲೀಸಮ್ಮ ಒಬ್ಬಳು ಜನಪ್ರತಿನಿಧಿ, ಅಧಿಕಾರಿಗಳು ಮತ್ತು ನೆರೆದವರೆಲ್ಲರ ಗಮನ ಸೆಳೆದಳು.
"
ಆಕೆ ಹೆಸರು ಮಯೂರಿ, 3 ವರ್ಷದ ಪುಟಾಣಿ, ಉಡುಪಿಯ ಪೊಸ್ಟ್ ಮೆನ್ ರಾಘವೇಂದ್ರ ಪ್ರಭು ಮತ್ತು ಶ್ರೀದೇವಿ ದಂಪತಿಯ ಮಗಳು. ಶನಿವಾರ ನಡೆದ ಸ್ವಾತಂತ್ರಯೋತ್ಸವದ ಸಂದರ್ಭದಲ್ಲಿ ಖಾಕಿ ಸಮವಸ್ತ್ರ ಧರಿಸಿ ತಂದೆಯೊಂದಿಗೆ ಮೈದಾನಕ್ಕೆ ಬಂದಿದ್ದಳು.
ಈಕೆ ಸಿನೆಮಾಗಳಲಿ ಸೈನಿಕರನ್ನು, ಪೊಲೀಸರನ್ನು ನೋಡಿ ಖಾಕಿ ಬಗ್ಗೆ ವಿಪರೀತ ಕ್ರೇಜ್ ಬೆಳೆಸಿಕೊಂಡಿದ್ದಳು. ಯಾವಾಗಲೂ ಖಾಕಿ ಸಮವಸ್ತ್ರ ತೊಡಿಸುವಂತೆ ಮನೆಯಲ್ಲಿ ಹಠ ಹಿಡಿಯುತ್ತಿದ್ದಳು. ಅದಕ್ಕಾಗಿ ತಂದೆ ಪೊಲೀಸರಂತೆ ಖಾಕಿ ಸಮವಸ್ತ್ರವೊಂದನ್ನು ಕೊಡಿಸಿದ್ದು ಆಕೆ ಅದನ್ನು ತೊಟ್ಟು ಸಂಭ್ರಮಿಸಿದ್ದಾಳೆ.
ಸಮವಸ್ತ್ರವನ್ನು ತೊಟ್ಟು ಶನಿವಾರ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಅಜ್ಜರಕಾಡು ಕ್ರೀಡಾಂಗಣಕ್ಕೆ ಆಗಮಿಸಿದ್ದು, ಆಕೆಯನ್ನು ಪೊಲೀಸ್ ಸಿಬ್ಂದಿಗಳು ಪ್ರೀತಿಯಿಂದಲೇ ಸ್ವಾಗತಿಸಿದರು.
ತನ್ನಂತೆ ಸಮವಸ್ತ್ರ ಧರಿಸಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗಳೊಂದಿಗೆ ಆತ್ಮೀಯವಾಗಿ ಬೆರೆತಳು. ಸೆಲ್ಯೂಟ್ ಹೊಡೆದು, ಸೆಲ್ಫಿಗಳಿಗೆ ಫೋಸ್ ಕೊಟ್ಟಳು. ಜಿಲ್ಲಾಧಿಕಾರಿ ಜಿ.ಜಗದೀಶ್ ಆಕೆಯನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡರು. ಈ ವೇಳೆ ಆಕಯ ಸಂಭ್ರಮ ಮುಗಿಲು ಮುಟ್ಟಿತ್ತು.