ಮೈಸೂರು, [ಫೆ.21]: ಮಹಾಶಿವರಾತ್ರಿ ಪ್ರಯುಕ್ತ ಇಂದು ನಾಡಿನಾದ್ಯಂತ ಶಿವನ ಸ್ಮರಣೆ ಮೊಳಗಿದೆ.. ಶಿವನ  ದೇಗುಲಗಳಲ್ಲಿ ಪೂಜೆ ಪುನಸ್ಕಾರ ಜೋರಾಗಿದೆ. ಆದ್ರೆ, ಮೈಸೂರು ಜಿಲ್ಲೆಯ ಮಲ್ಬಾರ್ ಶೆಡ್ ನೀರವ ಮೌನ ಆವರಿಸಿದೆ.

ಹೌದು...ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಮಲ್ಬಾರ್ ಶೆಡ್ ಗ್ರಾಮದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.  ಕಿರಣ್, ರೋಹಿತ್, ಯಶ್ವಂತ್ ಹಾಗೂ ಕೆಂಡಗಣ್ಣ ಮೃತ ವಿದ್ಯಾರ್ಥಿಗಳು.

ಅಮೂಲ್ಯ ಬಳಿಕ ಮತ್ತೊಬ್ಬಳ ಪಾಕ್ ಪ್ರೀತಿ, ರಶ್ಮಿಕಾಗೆ ಟ್ರೋಲ್ ಫಜೀತಿ; ಫೆ.21ರ ಟಾಪ್ 10 ಸುದ್ದಿ!

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಇಂದು [ಶುಕ್ರವಾರ] ಶಾಲೆಗೆ ರಜೆ ಇದ್ದ ಕಾರಣ ಇವರು ಮಲ್ಬಾರ್ ಶೆಡ್ ಗ್ರಾಮದ ಪಡುವಕೋಟೆ ಕೆರೆಗೆ ಈಜಾಡಲು ತೆರಳಿದ್ದಾರೆ. 

ಆದ್ರೆ, ಈಜಲು ಆಗದೇ ಕೆರೆಯಲ್ಲಿ ಸಾವನ್ನಪ್ಪಿದ್ದು, ಮೃತರೆಲ್ಲ ಗಂಗೇಗೌಡರ ಕಾಲೋನಿ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಹೆಚ್.ಡಿ.ಕೋಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.