ಚಿಕ್ಕಮಗಳೂರು(ಜೂ.29): ಜಿಲ್ಲೆಯಲ್ಲಿ ವ್ಯಾಪಿಸಿರುವ ಕೊರೋನಾ ಜಿಲ್ಲಾ ಕೇಂದ್ರದ ವಿವಿಧ ಬಡಾವಣೆಗಳಲ್ಲೂ ಹಬ್ಬಿದೆ. ಕಾಫಿನಾಡಿನಲ್ಲಿ ಮತ್ತೆ ಕೊರೋನಾ ನಿಧಾನವಾಗಿ ಹಬ್ಬಲಾರಂಭಿಸಿದೆ. ಭಾನುವಾರ ಪತ್ತೆಯಾಗಿರುವ 3 ಹೊಸ ಪ್ರಕರಣಗಳ ಪೈಕಿ ಇಬ್ಬರು ವ್ಯಕ್ತಿಗಳು ನಗರದವರಾಗಿದ್ದರೆ, ಇನ್ನೊಬ್ಬರು ಮೂಗ್ತಿಹಳ್ಳಿಯವರು. ಇವರೆಲ್ಲರೂ ಬೆಂಗಳೂರಿನ ಸಂಪರ್ಕ ಹೊಂದಿದವರು.

ಈ ಹಿಂದೆ ನಗರದ ಮೂರುಮನೆಹಳ್ಳಿ ರಸ್ತೆಯಲ್ಲಿ ಓರ್ವರಿಗೆ ಕೊರೋನಾ ಸೋಂಕು ತಗಲಿದ್ದು, ನಂತರದಲ್ಲಿ ಹೌಸಿಂಗ್‌ ಬೋರ್ಡ್‌, ಶನಿವಾರ ಕಲ್ಯಾಣ ನಗರದಲ್ಲಿ, ಭಾನುವಾರ ರಾಮನಹಳ್ಳಿ ಮತ್ತು ದೋಣಿಕಣದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಚಿಕ್ಕಮಗಳೂರಿನಿಂದ ಪ್ರತಿದಿನ ಬೆಂಗಳೂರಿಗೆ ಹೋಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ, ಇಲ್ಲಿನ ದೋಣಿಕಣದ ನಿವಾಸಿಯಲ್ಲೂ ಪಾಸಿಟಿವ್‌ ಪ್ರಕರಣ ಪತ್ತೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊರೋನಾದಿಂದ ಪಾರಾಗಲು ಪೊಲೀಸರ ಹೊಸ ಐಡಿಯಾ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

ಈ ಮೂರು ಮಂದಿಗಳ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚುವ ಕೆಲಸ ಆಗಬೇಕಾಗಿದೆ. ಜಿಲ್ಲೆಯಲ್ಲಿ ಸದ್ಯ ಕೊರೋನಾ ಸೋಂಕಿತ ಸಕ್ರಿಯ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿದೆ. ಸೋಂಕಿತ ವ್ಯಕ್ತಿಗಳು ವಾಸವಾಗಿರುವ ಮನೆಗಳ ಬಡಾವಣೆಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.