Asianet Suvarna News Asianet Suvarna News

ಮಂಡ್ಯ: ಭಾರೀ ಮಳೆಗೆ ಕೆಆರ್‌ಎಸ್ ಡ್ಯಾಂನಲ್ಲಿ ಒಂದೇ ದಿನ 3 ಅಡಿ ನೀರು ಏರಿಕೆ

ಅಣೆಕಟ್ಟೆಗೆ ಗುರುವಾರ 3856 ಕ್ಯುಸೆಕ್‌ ಒಳಹರಿವಿದ್ದರೆ, ಶುಕ್ರವಾರ ಬೆಳಗಿನ ವೇಳೆಗೆ 13,437 ಕ್ಯುಸೆಕ್‌ಗೆ ಏರಿಕೆಯಾಗಿತ್ತು. 90.30 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಿಂದ 478 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಹಾಲಿ 16.118 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

3 Feet Water Rise in KRS Dam in a day due to Heavy Rain grg
Author
First Published Jun 29, 2024, 4:16 AM IST

ಶ್ರೀರಂಗಪಟ್ಟಣ(ಜೂ.29):  ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ಜಲಾಶಯದ ನೀರಿನ ಮಟ್ಟ ಒಂದೇ ದಿನಕ್ಕೆ 3 ಅಡಿಯಷ್ಟು ಏರಿಕೆಯಾಗಿದೆ.

ಅಣೆಕಟ್ಟೆಗೆ ಗುರುವಾರ 3856 ಕ್ಯುಸೆಕ್‌ ಒಳಹರಿವಿದ್ದರೆ, ಶುಕ್ರವಾರ ಬೆಳಗಿನ ವೇಳೆಗೆ 13,437 ಕ್ಯುಸೆಕ್‌ಗೆ ಏರಿಕೆಯಾಗಿತ್ತು. 90.30 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಿಂದ 478 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಹಾಲಿ 16.118 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ ಹಲವೆಡೆ ಬಿರುಗಾಳಿ‌ ಸಹಿತ ಭಾರೀ ಮಳೆ..!

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಶನಿವಾರದ ವೇಳೆಗೆ ನೀರಿನ ಮಟ್ಟ 93 ಅಡಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 90.30 ಅಡಿ
ಒಳ ಹರಿವು – 13437 ಕ್ಯುಸೆಕ್
ಹೊರ ಹರಿವು – 478 ಕ್ಯುಸೆಕ್
ನೀರಿನ ಸಂಗ್ರಹ – 16.118 ಟಿಎಂಸಿ

Latest Videos
Follow Us:
Download App:
  • android
  • ios