ಹುನಗುಂದ: ಕೊರೋನಾ ಶಂಕಿತನ ಶವಸಂಸ್ಕಾರ: 29 ಜನ ಕ್ವಾರಂಟೈನ್
ಶವ ಸಂಸ್ಕಾರಕ್ಕೆ ತೆರಳಿದ್ದ ಹುನಗುಂದ ತಾಲೂಕಿನ ಮುಗನೂರ, ಮರಡಿ ಬೂದಿಹಾಳ ಗ್ರಾಮದ 29 ಜನರನ್ನು ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್| ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೊಬ್ಬ ಮೃತಪಟ್ಟಿದ್ದ| ಆತನಿಗೆ ಕೊರೋನಾ ಸೋಂಕಿದೆ ಎಂದು ಶಂಕೆ| ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಇವರನ್ನು ಮಂಗಳವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ|
ಅಮೀನಗಡ(ಜೂ.25): ಕೊರೋನಾ ಶಂಕಿತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ 29 ಜನರನ್ನು ಮುಂಜಾಗ್ರತ ಕ್ರಮವಾಗಿ ಕ್ವಾರಂಟೈನ್ ಮಾಡಿರುವ ಘಟನೆ ಬುಧವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಡೆದಿದೆ.
ಇವರಲ್ಲಿ ಇಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದ ವಿದ್ಯಾರ್ಥಿಯೂ ಸೇರಿದ್ದಾನೆ. ಶವ ಸಂಸ್ಕಾರಕ್ಕೆ ತೆರಳಿದ್ದ ಹುನಗುಂದ ತಾಲೂಕಿನ ಮುಗನೂರ, ಮರಡಿ ಬೂದಿಹಾಳ ಗ್ರಾಮದ 29 ಜನರನ್ನು ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ.
ಬಾಗಲಕೋಟೆ: ಮಹಾಮಾರಿ ಕೊರೋನಾಗೆ ರೈಲ್ವೆ ನೌಕರ ಬಲಿ?
ಇಲ್ಲಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೊಬ್ಬ ಮೃತಪಟ್ಟಿದ್ದನು. ಆತನಿಗೆ ಕೊರೋನಾ ಸೋಂಕಿದೆ ಎಂದು ಶಂಕಿಸಲಾಗಿದ್ದು, ಇವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಇವರನ್ನು ಮಂಗಳವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.