ನಾಗಬೇನಾಳ ಗ್ರಾಮದ ಮಂಜುನಾಥ್ ಮಾದರ ಕುರಿಕಾಯಲು ನಾಗಬೇನಾಳ ಸಮೀಪದ ಚಕ್ ಪೋಸ್ಟ್‌ ಹತ್ತಿರದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಕುರಿಕಾಯುತ್ತಿದ್ದ. ಈ ಸಮಯದಲ್ಲಿ ಕುರಿ ಮರಿಯೊಂದು ಜಾರಿ ಕಾಲುವೆಗೆ ಬಿದ್ದಿದೆ. ಆ ಮರಿಯನ್ನು ರಕ್ಷಣೆ ಮಾಡಲು ಮಂಜುನಾಥ ಕಾಲುವೆ ಜಿಗಿದಿದ್ದು, ಕುರಿ ಮರಿಯನ್ನು ರಕ್ಷಣೆ ಮಾಡಿ ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ. 

ನಾಲತವಾಡ(ಜು.24): ಕುರಿ ಮರಿ ರಕ್ಷಣೆ ಮಾಡಲು ಹೋಗಿ ಗುರಿಗಾಯಿಯೊಬ್ಬ ನೀರು ಪಾಲಾಗಿರುವ ಘಟನೆ ನಾಲತವಾಡ ಸಮೀಪದ ನಾಗಬೇನಾಳ ಬಳಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಗಬೇನಾಳ ಗ್ರಾಮದ ಮಂಜುನಾಥ್ ಮಾದರ(28) ಸೋಮವಾರ ಕುರಿಕಾಯಲು ನಾಗಬೇನಾಳ ಸಮೀಪದ ಚಕ್ ಪೋಸ್ಟ್‌ ಹತ್ತಿರದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಕುರಿಕಾಯುತ್ತಿದ್ದ. ಈ ಸಮಯದಲ್ಲಿ ಕುರಿ ಮರಿಯೊಂದು ಜಾರಿ ಕಾಲುವೆಗೆ ಬಿದ್ದಿದೆ. ಆ ಮರಿಯನ್ನು ರಕ್ಷಣೆ ಮಾಡಲು ಮಂಜುನಾಥ ಕಾಲುವೆ ಜಿಗಿದಿದ್ದು, ಕುರಿ ಮರಿಯನ್ನು ರಕ್ಷಣೆ ಮಾಡಿ ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ.

Breaking: ವಿಜಯಪುರದಲ್ಲಿ ಭೂಕಂಪ: ಭಯಾನಕ ಸದ್ದಿಗೆ ಬೆಚ್ಚಿ ಬಿದ್ದ ಜನತೆ..!

ಪೊಲೀಸ್‌ ಅಧಿಕಾರಿಗಳ ಭೇಟಿ: 

ಘಟನಾ ಸ್ಥಳಕ್ಕೆ ಬಾಗೇವಾಡಿಯ ಡಿಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಿವ ತಿಪ್ಪಾರೆಡ್ಡಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.