ಯಾದಗಿರಿ(ಡಿ.23): ಜಾವಳ ಕಾರ್ಯಕ್ರಮದ ಆಹಾರ ಸೇವಿಸಿ 25 ಮಂದಿ ಅಸ್ವಸ್ಥರಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದಲ್ಲಿ ಘಟನೆ ಭಾನುವಾರ ನಡೆದಿದೆ. ಬೆಂಚಿಗಡ್ಡಿಯ ಗವಿಯಪ್ಪ ಎಂಬುವರ ಪುತ್ರನ ಜಾವಳ ಕಾರ್ಯಕ್ರಮಲ್ಲಿ ಈ ಅವಘಡ ಸಂಭವಿಸಿದೆ. 

ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಬೆಂಚಿಗಡ್ಡಿಯ ಗವಿಯಪ್ಪ ಅವರ ಪುತ್ರನ ಜಾವಳ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಕ್ಕೆ ಹೋಳಿಗೆ, ಅನ್ನ ಸಾಂಬರ್ ವ್ಯವಸ್ಥೆ ಮಾಡಲಾಗಿತ್ತು. 

ಹೆಚ್ಚಿನ ಜಿ ಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೋಳಿಗೆ, ಅನ್ನ ಸಾಂಬರ್ ತಿಂದ ಕೂಡಲೇ ಕೆಲವರು ಅಸ್ವಸ್ಥರಾಗಿದ್ದರು, ತಕ್ಷಣ ಅವರನ್ನು ಹತ್ತಿರದ ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.