ತುಮಕೂರು (ಅ.17):  ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಕ್ಟೋಬರ್‌ 9 ರಿಂದ 16ರವರೆಗೆ ಒಟ್ಟು 25 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ, ಭಾರತೀಯ ಜನತಾ ಪಕ್ಷದಿಂದ ಸಿ.ಎಂ.ರಾಜೇಶ್‌ ಗೌಡ, ಜೆಡಿ(ಎಸ್‌) ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಓಬಳೇಶಪ್ಪ ಬಿ.ಟಿ., ಭಾರತ ಕಮ್ಯುನಿಸ್ಟ್‌ ಪಕ್ಷದಿಂದ ಗಿರೀಶ್‌, ಪಕ್ಷೇತರದಿಂದ ಜಯಣ್ಣ ವೈ.ಉರುಫ್‌ ಜಯಣ್ಣ, ಎಂ.ಎಲ್‌.ಎ.ಆರ್‌.ಕಂಬಣ್ಣ, ಸಾದಿಕ್‌ ಪಾಷ, ಗುರುಸಿದ್ದಪ್ಪ ಎಂ., ಎಲ್‌.ಕೆ.ದೇವರಾಜು, ತಿಮ್ಮರಾಜ್‌ಗೌಡ, ನಿಸಾರ್‌ ಅಹಮದ್‌, ಜಿ.ಎಸ್‌.ನಾಗರಾಜ ಸಲ್ಲಿಸಿದ್ದಾರೆ. 

200 ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ : ಇದೇ ನನ್ನ ರಾಜಕೀಯ ಎಂದ ಡಿಕೆಶಿ ...

ಅಂಬ್ರೋಸ್‌ ಡಿ. ಮೆಲ್ಲೋ ಹಾಗೂ ರಂಗಪ್ಪ, ರಿಪಬ್ಲಿಕನ್‌ ಸೇನೆಯಿಂದ ಪ್ರೇಮಕ್ಕ, ರೈತ ಭಾರತ ಪಕ್ಷದಿಂದ ತಿಮ್ಮಕ್ಕ ಅವರು ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾಧಿಕಾರಿಗಳಾದ ಡಾ: ನಂದಿನಿದೇವಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.