ಮದ್ದೂರು (ಮಾ.31): ತಾಲೂಕಿನ ಅಣ್ಣೆದೊಡ್ಡಿ ಮಾರಮ್ಮ ದೇವಸ್ಥಾನದ ಬಳಿ 20 ರಿಂದ 25 ಅಡಿ ಉದ್ದದ ನಾಗರ ಹಾವೊಂದು  ಕಾಣಿಸಿಕೊಂಡಿತ್ತು. 

ಮಂಗಳವಾರ ಮದ್ದೂರಿನ ಮಾರಮ್ಮ ದೇಗುಲದ ಬಳಿ ಈ ಹಾವು ಕಂಡ ಜನರಲ್ಲಿ ಅಚ್ಚರಿಯೊಂದಿಗೆ ಆತಂಕವೂ ಮೂಡಿದೆ. ಈ ಹಾವನ್ನು ನೋಡಲು ಗ್ರಾಮದ ಜನರು ಗುಂಪಾಗಿ ಆಗಮಿಸಿದರು. 

ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..! ...

ಕಳೆದ ಮೂರು ನಾಲ್ಕು ವರ್ಷಗಳಿಂದ ಮಾರಮ್ಮ ದೇವರ ಹಬ್ಬ ಆಚರಣೆ ಮಾಡದೇ ಇರುವುದರುಂದ ಹಾವು ಕಾಣಿಸಿಕೊಂಡಿದೆ. ತಂಬಿಟ್ಟಿನ ಆರತಿಯೊಂದಿಗೆ ದೇವರಿಗೆ  ವಿಶೇಷ ಪೂಜೆ  ಮಾಡುವುದು ಸಂಪ್ರದಾಯ ಎಂದು ಇಲ್ಲಿನ ಜನರು ಹೇಳಿದರು. 

ಹಬ್ಬ ಆಚರಣೆ ಬಗ್ಗೆ ನಿರ್ಧರಿಸುವ ಸಂಬಂಧ ಮಾ.31 ರಂದು ಕೀಳಘಟ್ಟ ಗ್ರಾಮದಲ್ಲಿ ಸಭೆ ಕರೆಯಲಾಗಿದೆ ಎಂದು ಇಲ್ಲಿನ ಮುಖಂಡರು ತಿಳಿಸಿದರು.