Asianet Suvarna News Asianet Suvarna News

ಬಾಗಲಕೋಟೆ: 27 ಲಕ್ಷ ರೈತರಿಗೆ 25.29 ಕೋಟಿ ಬರ ಪರಿಹಾರ, ಡಿಸಿ ಜಾನಕಿ ಕೆ.ಎಂ

ಬರದಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 193805 ಹೆಕ್ಟೇರ್‌ ಕ್ಷೇತ್ರದ ಬೆಳೆ ಹಾನಿಯಿಂದ ₹1,99,776 ಲಕ್ಷ ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಿ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ನಿಯಮಾವಳಿಗಳನ್ವಯ ₹26469 ಲಕ್ಷಗಳ ಇನ್ಪುಟ್ ಸಬ್ಸಿಡಿ, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ

25.29 Crore Drought Compensation for 27 lakh Farmers Says Bagalkot DC Janaki KM grg
Author
First Published Feb 8, 2024, 10:00 PM IST

ಬಾಗಲಕೋಟೆ(ಫೆ.08): ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಛಾಯೆಯಿಂದ ರೈತರ ಬೆಳೆ ಹಾನಿಗೊಳಗಾಗಿದ್ದು, ಹಾನಿಗೊಳಗಾದ 1.27 ಲಕ್ಷ ರೈತರಿಗೆ 1 ರಿಂದ 4 ಹಂತದಲ್ಲಿ ಒಟ್ಟು ₹25.29 ಕೋಟಿಗಳ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಬರದಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 193805 ಹೆಕ್ಟೇರ್‌ ಕ್ಷೇತ್ರದ ಬೆಳೆ ಹಾನಿಯಿಂದ ₹1,99,776 ಲಕ್ಷ ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಿ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ನಿಯಮಾವಳಿಗಳನ್ವಯ ₹26469 ಲಕ್ಷಗಳ ಇನ್ಪುಟ್ ಸಬ್ಸಿಡಿ, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಜನತೆ ಕ್ಷಮೆ ಕೇಳಲಿ: ಮಾಜಿ ಡಿಸಿಎಂ ಕಾರಜೋಳ

ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಪ್ರೂಟ್ಸ್‌ ತಂತ್ರಾಂಶ ಹಾಗೂ ಬೆಳೆ ಸಮೀಕ್ಷೆ ವರದಿ ಆಧಾರದ ಮೇಲೆ ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿರುತ್ತದೆ. ಪ್ರಸ್ತುತ ಸರ್ಕಾರದಿಂದ 1 ರಿಂದ 4ನೇ ಹಂತದವರೆಗೆ ಜಿಲ್ಲೆಯ ಒಟ್ಟು 163184 ರೈತರಿಗೆ ತಲಾ ₹2 ಸಾವಿರಗಳಂತೆ ಒಟ್ಟು ₹32.35 ಕೋಟಿ ಪರಿಹಾರ ಹಣ ಪಾವತಿಸಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಪ್ರಸ್ತುತ 1 ರಿಂದ 4 ನೇ ಹಂತದವರೆಗೆ ಜಿಲ್ಲೆಯ ಒಟ್ಟು 127532 ರೈತರಿಗೆ ತಲಾ ₹2 ಸಾವಿರಗಳಂತೆ ಒಟ್ಟು ₹25.29 ಕೋಟಿಗಳ ಪರಿಹಾರ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿರುತ್ತದೆ ಎಂದರು.

ಬಾಕಿ ಉಳಿದ ರೈತರಿಗೂ ಕೂಡ ಈಗಾಗಲೇ ಡಿಬಿಟಿ ಮೂಲಕ ಪರಿಹಾರ ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು, ಸದರಿ ಪ್ರಕ್ರಿಯೆ ಪ್ರಗತಿಲ್ಲಿರುತ್ತದೆ. ಜಿಲ್ಲೆಯಲ್ಲಿ ಅಕೌಂಟ್ ರೀಚ್ಡ್ ಮಾಕ್ಸಿಮಮ್ ಕ್ರೆಡಿಟ್ ಲಿಮಿಟ್, ಅಕೌಂಟ್ ಬ್ಲಾಕ್ಡ್, ಇನ್ವಾಲಿಡ್ ಅಕೌಂಟ್, ಆಧಾರ್‌ ನಾಟ್ ಮ್ಯಾಪ್ಡ್, ಅಕೌಂಟ್ ಕ್ಲೋಸ್ಡ್, ಅಕೌಂಟ್ ಹೋಲ್ಡರ್ ಎಕ್ಸಪೈರ್, ಇನ್ ಆಕ್ಟೀವ್ ಆಧಾರ್‌, ಎನ್ಪಿಸಿಐ ಸೀಡಿಂಗ್ ಇಸು, ಎನಿ ಅದರ್ ರಿಜನ್ ಹೀಗೆ ವಿವಿಧ ಕಾರಣಗಳಿಂದ ಒಟ್ಟ 530 ರೈತರಿಗೆ ಬರ ಪರಿಹಾರ ಜಮೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ, ಮತ ಬೇಕಿದೆ: ಸಚಿವ ತಿಮ್ಮಾಪುರ

1 ರಿಂದ 4ನೇ ಹಂತದಲ್ಲಿ 530 ರೈತರಿಗೆ ವಿವಿಧ ಕಾರಣಗಳಿಂದ ಹಣ ಜಮೆಯಾಗದೇ ಇರುವುದರಿಂದ ಸದರಿ ರೈತರ ಮಾಹಿತಿಯನ್ನು ತಹಸೀಲ್ದಾರ್‌ ಪರಿಶೀಲಿಸಿ, ಆಯಾ ರೈತರಿಗೆ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಹಾಗೂ ಈಗಾಗಲೇ ಇರುವ ಬ್ಯಾಂಕ್ ಖಾತೆಯನ್ನು ಸರಿಪಡಿಸುಕೊಳ್ಳುವಂತೆ ಸಲಹೆ ನೀಡಲು ಕ್ರಮವಹಿಸುವಂತೆ ತಹಸೀಲ್ದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಲೂಕಾವಾರು ಬರ ಪರಿಹಾರ ಜಮೆ ವಿವರ: ತಾಲೂಕು ರೈತರ ಸಂಖ್ಯೆ ಹಣ

ಜಮಖಂಡಿ 23824 ₹4.75 ಕೋಟಿ
ಬೀಳಗಿ 5184 ₹1.03 ಕೋಟಿ
ಮುಧೋಳ 24993 ₹4.99 ಕೋಟಿ
ಬಾದಾಮಿ 17047 ₹3.31 ಕೋಟಿ
ಬಾಗಲಕೋಟೆ 14117 ₹2.80 ಕೋಟಿ
ಹುನಗುಂದ 11484 ₹2.27 ಕೋಟಿ
ಗುಳೇದಗುಡ್ಡ 5044 ₹97.62 ಲಕ್ಷ
ಇಳಕಲ್ಲ 10288 ₹2.03 ಕೋಟಿ
ರಬಕವಿ ಬನಹಟ್ಟಿ 15551 ₹3.10 ಕೋಟಿ
ಒಟ್ಟು ₹25.29 ಕೋಟಿ

Follow Us:
Download App:
  • android
  • ios