Asianet Suvarna News Asianet Suvarna News

Mysuru : ದಟ್ಟಗಳ್ಳಿಯ ಮನೆಗಳಿಗೆ 24 ಗಂಟೆ ಕಬಿನಿ ಕುಡಿಯುವ ನೀರು ಸರಬರಾಜು

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ನಂ.46ರ ದಟ್ಟಗಳ್ಳಿ ಐ, ಎಚ್‌, ಜೆ ಬ್ಲಾಕ್‌ಗಳಲ್ಲಿರುವ ಸುಮಾರು 2600 ಮನೆಗಳಿಗೆ ದಿನದ 24 ಗಂಟೆ ಕಬಿನಿ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ದಟ್ಟಗಳ್ಳಿಯ ಜಿ, ಎಚ್‌ ಮತ್ತು ಜೆ ಬ್ಲಾಕ್‌ಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಬಿನಿ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಸೋಮವಾರ ರೋಟರಿ ಶಾಲೆಯ ಹತ್ತಿರ ವಾಲ್‌ ತಿರುಗುಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದಟ್ಟಗಳ್ಳಿಯ ಜನರ ಬೇಡಿಕೆಯಂತೆ ಕಬಿನಿ ಕುಡಿಯುವ ನೀರನ್ನು ಇಂದಿನಿಂದ ನೀಡಲಾಗುವುದು ಎಂದರು.

24 hour Kabini drinking water supply to Dattagalli houses snr
Author
First Published Mar 21, 2023, 7:11 AM IST

 ಮೈಸೂರು :  ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ನಂ.46ರ ದಟ್ಟಗಳ್ಳಿ ಐ, ಎಚ್‌, ಜೆ ಬ್ಲಾಕ್‌ಗಳಲ್ಲಿರುವ ಸುಮಾರು 2600 ಮನೆಗಳಿಗೆ ದಿನದ 24 ಗಂಟೆ ಕಬಿನಿ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ದಟ್ಟಗಳ್ಳಿಯ ಜಿ, ಎಚ್‌ ಮತ್ತು ಜೆ ಬ್ಲಾಕ್‌ಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಬಿನಿ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಸೋಮವಾರ ರೋಟರಿ ಶಾಲೆಯ ಹತ್ತಿರ ವಾಲ್‌ ತಿರುಗುಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದಟ್ಟಗಳ್ಳಿಯ ಜನರ ಬೇಡಿಕೆಯಂತೆ ಕಬಿನಿ ಕುಡಿಯುವ ನೀರನ್ನು ಇಂದಿನಿಂದ ನೀಡಲಾಗುವುದು ಎಂದರು.

ರಾಮಕೃಷ್ಣನಗರ ಐ ಬ್ಲಾಕ್‌ನಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು, ಈ ಐ ಬ್ಲಾಕ್‌ಗೆ ಮೂರು ದಿನಗಳಲ್ಲಿ ಕುಡಿಯುವ ನೀರನ್ನು ಒದಗಿಸುವಂತೆ ಶಾಸಕರು ಸೂಚಿಸಿದರು.

ಇದೇ ವೇಳೆ ದಟ್ಟಗಳ್ಳಿಯ 3ನೇ ಹಂತದಲ್ಲಿ . 2.60 ಕೋಟಿ ವೆಚ್ಚದಲ್ಲಿ 15 ಲಕ್ಷ ಲೀಟರ್‌ನ ಸಾಮರ್ಥ್ಯದ ಟ್ಯಾಂಕ್‌ ಅನ್ನು ಶಾಸಕರು ಉದ್ಘಾಟಿಸಿದರು. ಈ ಟ್ಯಾಂಕ್‌ನಿಂದ ದಟ್ಟಗಳ್ಳಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು. ಮೇಯರ್‌ ಶಿವಕುಮಾರ್‌, ಪಾಲಿಕೆ ಸದಸ್ಯೆ ಲಕ್ಷ್ಮಿ ಮಾದೇಗೌಡ, ಆಯುಕ್ತ ಜಿ. ಲಕ್ಷ್ಮಿಕಾಂತ ರೆಡ್ಡಿ, ಅಧೀಕ್ಷಕ ಎಂಜಿನಿಯರ್‌ ಮಹೇಶ್‌, ಮುಖಂಡರಾದ ರಮೇಶ್‌, ಭೂಮಿ ನಾರಾಯಣ್‌, ಶಿವಪ್ರಕಾಶ್‌, ಶಶಿಕುಮಾರ್‌, ಜಗದೀಶ್‌ ಮೊದಲಾದವರು ಇದ್ದರು.

ಬಿಸ್ಲೆರಿ ಖರೀದಿಸಲ್ಲ ಟಾಟಾ: ಬಾಟಲಿ ನೀರು ಉದ್ಯಮಕ್ಕೆ ಜಯಂತಿ ಚೌಹಾಣ್‌ ಮುಖ್ಯಸ್ಥೆ..!

ನವದೆಹಲಿ (ಮಾರ್ಚ್‌ 20, 2023): ಬಾಟಲಿ ನೀರು ಅಂದ ಮಾತ್ರಕ್ಕೆ ನಮಗೆ ಥಟ್ಟನೆ ಹೊಳೆಯೋದು ಬಿಸ್ಲೆರಿ ವಾಟರ್‌. ಅಂಗಡಿಗಳಲ್ಲೂ ಸಹ ಬಿಸ್ಲೆರಿ ವಾಟರ್‌ ಕೊಡಿ ಎಂದೇ ಬಹುತೇಕರು ಕೇಳ್ತಾರೆ. ಅಷ್ಟರಮಟ್ಟಿಗೆ ಬಿಸ್ಲೆರಿ ಫೇಮಸ್‌ ಆಗಿದೆ. ಈ ಬಿಸ್ಲೆರಿ ಕಂಪನಿಯನ್ನು ಟಾಟಾ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ  ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ಸ್ವಾಧೀನ ಪ್ರಕ್ರಿಯೆಯಿಂದ ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಬಿಸ್ಲೆರಿ ಅಂತಾರಾಷ್ಟ್ರೀಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಬಾಟಲ್ ವಾಟರ್ ಕಂಪನಿಯ ಮುಖ್ಯಸ್ಥರಾಗಿರುತ್ತಾರೆ ಎಂದು ವರದಿಯಾಗಿದೆ. 

ಜಯಂತಿ ಚೌಹಾಣ್ ಅವರು ನಮ್ಮ ವೃತ್ತಿಪರ ತಂಡದೊಂದಿಗೆ ಕಂಪನಿಯನ್ನು ನಡೆಸುತ್ತಾರೆ ಮತ್ತು ನಾವು ಈ ವ್ಯವಹಾರವನ್ನು ಮಾರಾಟ ಮಾಡಲು ಬಯಸುವುದಿಲ್ಲ ಎಂದು ಬಿಸ್ಲೆರಿ ಅಧ್ಯಕ್ಷ ರಮೇಶ್ ಚೌಹಾಣ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. 42 ವರ್ಷದ ಜಯಂತಿ ಚೌಹಾಣ್ ಅವರು ಪ್ರಸ್ತುತ ತಮ್ಮ ತಂದೆ ನಿರ್ಮಿಸಿದ ಕಂಪನಿಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಇದನ್ನು ಓದಿ: SVBಯಲ್ಲಿ ಭಾರತದ ಸ್ಟಾರ್ಟಪ್‌ಗಳ 8000 ಕೋಟಿ ಹಣ: ನೆರವು ನೀಡಲು ಭಾರತದ ಬ್ಯಾಂಕ್‌ಗಳಿಗೆ ಸಚಿವ ಆರ್‌ಸಿ ಸಲಹೆ

ಜಯಂತಿ ಚೌಹಾಣ್ ಅವರು ಏಂಜೆಲೊ ಜಾರ್ಜ್ ನೇತೃತ್ವದ ವೃತ್ತಿಪರ ನಿರ್ವಹಣಾ ತಂಡದೊಂದಿಗೆ ಕೆಲಸ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ. 82 ವರ್ಷ ವಯಸ್ಸಿನ ರಮೇಶ್‌ ಚೌಹಾಣ್ ಈ ವರ್ಷದ ಆರಂಭದಲ್ಲಿ ಟಾಟಾ ಗ್ರೂಪ್‌ಗೆ ಅಂದಾಜು 7,000 ಕೋಟಿ ರೂ.ಗೆ ಬ್ರ್ಯಾಂಡ್ ಅನ್ನು ಮಾರಾಟ ಮಾಡಿದರು ಎಂದು ಹೇಳಲಾಗಿತ್ತು. ಆದರೆ, ಭಾರತದ ಅತಿದೊಡ್ಡ ಬಾಟಲ್ ವಾಟರ್ ಬ್ರಾಂಡ್‌ನೊಂದಿಗಿನ ಒಪ್ಪಂದವನ್ನು ಟಾಟಾ ಗ್ರಾಹಕರು ರದ್ದುಗೊಳಿಸಿದ್ದಾರೆ ಎಂದು ಮಾರ್ಚ್ 18 ರಂದು ವರದಿಯಾಗಿತ್ತು. ಈ ವರದಿಗೆ ಈಗ ಸ್ಪಷ್ಟನೆ ದೊರೆತಿದ್ದು, ಜಯಂತಿ ಚವಹಾಣ್‌ ಅವರು ಕಂಪನಿಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ತಿಳಿದುಬಂದಿದೆ.

ಟಾಟಾ ಗ್ರಾಹಕರು ಎರಡು ವರ್ಷಗಳ ಹಿಂದೆ ಚೌಹಾಣ್ ಕುಟುಂಬದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದರು. ಆದರೆ ಕಳೆದ ವಾರ ಮಾತುಕತೆಗಳನ್ನು ರದ್ದುಗೊಳಿಸಿದ್ದು, ಈ ಹಿನ್ನೆಲೆ ಜಯಂತಿ ಚೌಹಾಣ್‌ ಅವರು ಕಂಪನಿಯನ್ನು ಮುನ್ನಡೆಸಲಿದ್ದಾರೆ. ಜಯಂತಿ ಅವರು ವರ್ಷಗಳಿಂದ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಬಿಸ್ಲೆರಿಯ ಪೋರ್ಟ್‌ಫೋಲಿಯೋ ಭಾಗವಾಗಿರುವ ವೇದಿಕಾ ಬ್ರ್ಯಾಂಡ್ ಇತ್ತೀಚಿನ ವರ್ಷಗಳಲ್ಲಿ ಆಕೆಯ ಗಮನವನ್ನು ಕೇಂದ್ರೀಕರಿಸಿದೆ. ಹಾಗೆ, ಬೇಸಿಗೆಯ ಆರಂಭದ ಕಾರಣ ಮತ್ತು ವಿದೇಶದಲ್ಲೂ ಬೇಡಿಕೆಯ ಹೆಚ್ಚಳದಿಂದಾಗಿ, ಪ್ಯಾಕೇಜ್‌ ಆಗಿರುವ ನೀರಿಗೆ ಹೆಚ್ಚು ಡಿಮ್ಯಾಂಡ್‌ ಇದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Price Hike : ಬೇಸಿಗೆ ಬಂತು, ಗಗನಕ್ಕೇರಿದ ನಿಂಬೆ ಬೆಲೆ, ಬಳಕೆ ಮಿತಿಯಲ್ಲಿರಲಿ!

ಈ ಮಧ್ಯೆ, ಕಂಪನಿಯ ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿ ಸ್ವಾಧೀನಪಡಿಸಿಕೊಳ್ಳುವಿಕೆಗಳು ಇರಲಿವೆ ಎಂದು ಟಾಟಾ ಗ್ರಾಹಕರ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಡಿಸೋಜಾ ಅವರು ಸ್ಪಷ್ಟನೆ ನೀಡಿದ್ದಾರೆ.  ಅಲ್ಲದೆ, ಕಂಪನಿಯು "ಬಿಸ್ಲೆರಿ ಇಂಟರ್‌ನ್ಯಾಶನಲ್‌ನೊಂದಿಗೆ ಯಾವುದೇ ನಿರ್ಣಾಯಕ ಒಪ್ಪಂದ ಅಥವಾ ಬದ್ಧತೆಯನ್ನು ಪ್ರವೇಶಿಸಿಲ್ಲ" ಎಂದು ಟಾಟಾ ಗ್ರೂಪ್‌ನ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ವಿಭಾಗವು ಮಾರ್ಚ್ 17 ರಂದು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ. "ಸಂಭವನೀಯ ವಹಿವಾಟಿಗೆ ಸಂಬಂಧಿಸಿದಂತೆ ಬಿಸ್ಲೆರಿಯೊಂದಿಗೆ ಮಾತುಕತೆಯನ್ನು ನಿಲ್ಲಿಸಿದೆ ಮತ್ತು ಕಂಪನಿಯು ಈ ವಿಷಯದಲ್ಲಿ ಯಾವುದೇ ನಿರ್ಣಾಯಕ ಒಪ್ಪಂದ ಅಥವಾ ಬದ್ಧತೆಯನ್ನು ಪ್ರವೇಶಿಸಿಲ್ಲ ಎಂದು ಖಚಿತಪಡಿಸಲು ಕಂಪನಿಯು ನವೀಕರಿಸಲು ಬಯಸುತ್ತದೆ" ಎಂದೂ ಮಾಹಿತಿ ನೀಡಿದೆ.

Follow Us:
Download App:
  • android
  • ios