Asianet Suvarna News Asianet Suvarna News

ಕೊಪ್ಪಳದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 22 ಪಾಸಿಟಿವ್‌ ಕೇಸ್‌

ಕೊರೋನಾ ಸೋಂಕಿನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆ| ಕೊಪ್ಪಳ ಜಿಲ್ಲೆಯಲ್ಲಿ ಗುರುವಾರ 22 ಕೊರೋನಾ ಪ್ರಕ​ರ​ಣ​​ಗ​ಳು ದೃಢ|

22 New Coronavirus Cases in Koppal District
Author
Bengaluru, First Published Jun 26, 2020, 10:17 AM IST

ಕೊಪ್ಪಳ(ಜೂ.26): ಜಿಲ್ಲೆಯಲ್ಲಿ ಗುರುವಾರ 22 ಕೊರೋನಾ ಪ್ರಕ​ರ​ಣ​​ಗ​ಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕು ಸ್ಫೋಟಗೊಳ್ಳಲಾರಂಭಿಸಿದೆ. ಕುಷ್ಟಗಿ ತಾಲ್ಲೂಕಿನ ನಂದಾಪುರದ 32 ವರ್ಷದ ವ್ಯಕ್ತಿಗೆ ಹಾಗೂ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿಯೇ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ. ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ 3 ವರ್ಷದ ಬಾಲಕಿಗೆ ಸೋಂಕು ದೃಢ ಪಟ್ಟಿದ್ದು, ಈಕೆಗೆ ಯಾವುದೇ ಪ್ರಯಾಣ ಹಿನ್ನೆಲೆ ಇಲ್ಲ. ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ಗಂಗಾವತಿ ತಾಲೂಕಿನ ಶ್ರೀರಾಮನಗರದ 19 ವರ್ಷದ ಯುವತಿ ಮತ್ತು 18 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಇವರು ಜೂನ್‌ 16ರಂದು ಆಂಧ್ರಪ್ರದೇಶದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಶ್ರೀರಾಮನಗರದ 45 ವರ್ಷದ ವ್ಯಕ್ತಿ ದೃಢಪಟ್ಟಿದ್ದು, ಇವರು ಜೂನ್‌ 16ರಂದು ಆಂಧ್ರದ ವಿಜಯವಾಡದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಶ್ರೀರಾಮನಗರದ 6 ವರ್ಷದ ಬಾಲಕ ಮತ್ತು 37 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಜೂನ್‌ 18ರಂದು ಆಂಧ್ರದ ಪೂರ್ವ ಗೋದಾವರಿಯಿಂದ ಗ್ರಾಮಕ್ಕೆ ಮರಳಿದ್ದಾರೆ. ಇವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೂ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ಗೆಳೆಯರೊಂದಿಗೆ ಮಸ್ತ್‌ ಪಾರ್ಟಿ ಮಾಡಿದ್ದ ಕೊರೋನಾ ಸೋಂಕಿತ: ಹೆಚ್ಚಿದ ಆತಂಕ

ಗಂಗಾವತಿ ತಾಲೂಕಿನ ಕಾರಟಗಿಯ 23 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಜೂನ್‌ 19ರಂದು ದೆಹಲಿಯಿಂದ ಪಟ್ಟಣಕ್ಕೆ ಆಗಮಿಸಿದ್ದಾರೆ. ತಾಲೂಕಿನ ಅಡವಿಬಾವಿಯ 42 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಜೂನ್‌ 26ರಂದು ಒರಿಸ್ಸಾದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಗಂಗಾವತಿಯ 18 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದ್ದು, ಇವರು ಯಾವುದೇ ಪ್ರಯಾಣ ಹಿನ್ನೆಲೆಯನ್ನು ಹೊಂದಿಲ್ಲ. ತಾಲೂಕಿನ ಮರಳಿ ಗ್ರಾಮದ 56 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಸೋಂಕಿತರ ಸಂಪರ್ಕದಲ್ಲಿದ್ದವರಾಗಿದ್ದಾರೆ.

ಯಲಬುರ್ಗಾದ ತಳಕಲ್‌ನ 34 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಕೆಪಿಎಲ್‌-41ರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಚಿಕ್ಕೇನಕೊಪ್ಪದ 25 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಜೂನ್‌ 5ರಂದು ಯಾದಗಿರಿಯಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಗೊರ್ಲೆಕೊಪ್ಪದ 12 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದ್ದು, ಇವರು ಇಳಕಲ್‌ನಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಯಡ್ಡೋಣಿಯ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಯಾವುದೇ ಪ್ರಯಾಣ ಹಿನ್ನೆಲೆಯನ್ನು ಹೊಂದಿಲ್ಲ. ಸೋಂಕಿನ ಲ​ಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ 31 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಒರಿಸ್ಸಾದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಗಬ್ಬೂರಿನ 25 ವರ್ಷದ ಮಹಿಳೆ ಹಾಗೂ 2 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು, ಇವರು ಬಳ್ಳಾರಿಯಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಹುಲಿಗಿಯ 55 ವರ್ಷ ಹಾಗೂ 30 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಪಿ-8057 ರ ಸಂಪರ್ಕಿತರಾಗಿದ್ದಾರೆ. ಹೊಸಲಿಂಗಾಪುರದ 31 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಪಿ-8056 ನ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಣ​ಮು​ಖ​ರಾಗ ಇಬ್ಬರ ಬಿಡು​ಗ​ಡೆ

ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್‌ ಕೊಪ್ಪಳದಲ್ಲಿ ಕೋವಿಡ್‌-19  -17, ಪಿ-7106 ಮತ್ತು ಕೆಪಿಎಲ್‌-15, ಪಿ-7104 ಇವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ನಂತರ ಅನುಸರಣ ಸ್ವ್ಯಾಬ್‌ ಋುಣಾತ್ಮಕ ವರದಿ ಬಂದಿದೆ. ಕೊರೋನಾ ಸೋಂಕಿನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ಇವರನ್ನು ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಗುರುವಾರ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್‌.ಬಿ.ದಾನರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios