ನವೆಂಬರ್‌ನಿಂದ ನಮ್ಮ ಮೆಟ್ರೋ ಪ್ರಯಾಣ ದರ ಶೇ.20 ಹೆಚ್ಚಳ?
ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಆಹ್ವಾನಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅವಧಿಯನ್ನು ಅ. 28ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ವಿಸ್ತರಿಸಿದೆ.
ಬೆಂಗಳೂರು (ಅ.21): ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಆಹ್ವಾನಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅವಧಿಯನ್ನು ಅ. 28ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ವಿಸ್ತರಿಸಿದೆ. ಎಷ್ಟು ದರ ಏರಿಕೆ ಮಾಡಬೇಕೆಂದು ಈ ಕುರಿತು ರಚಿಸಿರುವ ಸಮಿತಿಗೆ ಸಾರ್ವಜನಿಕರು ಅಭಿಪ್ರಾಯ, ಸಲಹೆ ನೀಡಬಹುದಾಗಿದೆ. ಹಾಲಿ ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರ ₹10 ನಿಂದ ಗರಿಷ್ಠ ದರ ₹60 ವರೆಗಿದೆ.
ಈಗ ಶೇ.15 ರಿಂದ ಶೇ.20 ರಷ್ಟು ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆಯಿದೆ. ಬಹುತೇಕ ಮುಂದಿನ ತಿಂಗಳಿಂದ ಹೊಸ ದರ ಜಾರಿ ಮಾಡುವ ಸಿದ್ಧತೆಯನ್ನು ಬಿಎಂಆರ್‌ಸಿಎಲ್ ಮಾಡಿಕೊಂಡಿದೆ. ದರ ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಈ ಮೊದಲು ಅ.21ರವರೆಗೆ ಜನತೆಯಿಂದ ಅಭಿಪ್ರಾಯ ಕೇಳಿತ್ತು. ಈ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ವಿರೋಧಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್ ಟಿಕೆಟ್ ಆಫರ್ ಒಪ್ಪುತ್ತಿಲ್ಲ ಯೋಗೇಶ್ವರ್
ದರ ಹೆಚ್ಚಳ: ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ffc@bmrc.co.in ಗೆ ಕಳುಹಿಸಬಹುದು. ಇಲ್ಲವೇ ಅಂಚೆ ಮೂಲಕ ಬಿಎಂಆರ್‌ಸಿಎಲ್ ಶುಲ್ಕ ನಿಗದಿ ಸಮಿತಿ ಅಧ್ಯಕ್ಷರಿಗೆ ಕಳುಹಿಸಬಹುದು. ಇಲ್ಲವೇ ವಾಟ್ಸಾಪ್ ಸಂಖ್ಯೆ 94482 91173 ಸಲಹೆ ಕಳುಹಿಸಬಹುದು ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ಕಾಮಗಾರಿ ಜಾಗದ 15 ಅಡಿ ಆಳಕ್ಕೆ ಬಿದ್ದಿದ್ದ ನಾಯಿ ರಕ್ಷಣೆ: ಟ್ಯಾನರಿ ರೋಡ್ ಫ್ರೇಜರ್ ಟೌನ್ ಮೆಟ್ರೋ ಭೂಗತ ನಿಲ್ದಾಣದ ಕಾಮಗಾರಿ ಸ್ಥಳದಲ್ಲಿ ಮೂರು ದಿನಗಳ ಹಿಂದೆ 15 ಅಡಿ ಆಳದಲ್ಲಿ ಬಿದ್ದಿದ್ದ ನಾಯಿಯನ್ನು ಬುಧವಾರ ಅಗ್ನಿಶಾಮಕ ದಳ, ಹಸಿರು ಸೇನಾ ಪಡೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬೇಸ್‌ಮೆಂಟ್ ಕಾಮಗಾರಿ ನಡೆಯುತ್ತಿದ್ದ ಆಳಕ್ಕೆ ಅಚಾನಕ್ಕಾಗಿ ಬಿದ್ದಿದ್ದ ನಾಯಿ ಅಲ್ಲಿ ಅಳವಡಿಸಿಕೊಳ್ಳಲಾಗಿದ್ದ ಕಬ್ಬಿಣದ ಬೀಮ್ ಮೇಲೆ ನಿಂತಿತ್ತು.
ಕಾಂಗ್ರೆಸ್ಸಿಗೆ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಬಿಸಿ: ಹಿಂದು/ಮುಸ್ಲಿಂ ಪೈಕಿ ಯಾರಿಗೆ ಮಣೆ
ಹೆಚ್ಚು ಚಲಿಸಲಾಗದೆ, ಮೇಲೆಯೂ ಬರಲಾಗದೆ ಮೂರು ದಿನಗಳಿಂದ ಆಗಾಗ ಗೋಳಾಡುತ್ತಿತ್ತು. ಇದನ್ನು ಗಮನಿಸಿದ್ದರೂ ಎಲ್ ಆ್ಯಂಡ್ ಟಿ ಕಂಪನಿ ಸಿಬ್ಬಂದಿಯಿಂದ ನಾಯಿ ರಕ್ಷಣೆ ತೀರಾ ಕಷ್ಟವಾಗಿತ್ತು. ಹೀಗಾಗಿ ಈ ವಿಷಯವನ್ನು ಅಗ್ನಿಶಾಮದ ದಳಕ್ಕೆ ತಿಳಿಸಿದ್ದಾರೆ. ಬುಧವಾರ ಸ್ಥಳಕ್ಕೆ ಬಂದ ಸಿಬ್ಬಂದಿ ಕೆಳಗಿಳಿದು ನಾಯಿಯನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ.