ಹರಿಹರದಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್‌

ರಾಜನಹಳ್ಳಿಯ ಸೋಂಕಿತ ಮಹಿಳೆಯ ಪ್ರಥಮ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಿದಾಗ 9 ಜನರಲ್ಲಿ ಪಾಸಿಟಿವ್‌ ದೃಢ ಪಟ್ಟಿತು. ಇದರ ಹಿನ್ನಲೆಯಲ್ಲಿಯೇ ನಗರದ ಅಗಸರ ಓಣಿಯನ್ನು ಕಂಟೋನ್ಮೆಂಟ್‌ ಜೋನ್‌ನಾಗಿ ಘೋಷಿಸಿ, ಸೊಂಕಿತ ಮಹಿಳೆಯ ಮನೆಯ ಸುತ್ತಾ ಕ್ರೀಮಿನಾಶಕ ಸಿಂಪಡಿಸಿ, ಇಲ್ಲಿನ ನಿವಾಸಿಗಳ ಆರೋಗ್ಯದ ಬಗ್ಗೆ ಸರ್ವೆ ಮಾಡುವ ಕಾರ್ಯ ನಡೆಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

2 more new COVID 19 Case Confirmed in Harihara on June 24

ಹರಿಹರ(ಜೂ.25): ನಗರದ ಪರಿಶಿಷ್ಟಕಾಲೋನಿಯಲ್ಲಿ ಹೊಸದಾಗಿ ಎರಡು ಪಾಸಿಟಿವ್‌ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆ ತಾಲೂಕಿನ ಅಧಿಕಾರಿಗಳಿಗೆ ಚಿಂತೆಗೀಡುಮಾಡಿದೆ. 

ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿದ್ದರೂ ತಾಲೂಕಿನ ಜನತೆ ಸರ್ಕಾರದ ಆದೇಶ ಮತ್ತು ಮುಂಜಾಗ್ರತ ಕ್ರಮಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ರಾಜನಹಳ್ಳಿಯ ಗರ್ಭಿಣಿ ಮತ್ತು ನಗರದ ಏಕೆ ಕಾಲೋನಿಯಲ್ಲಿ ಸೋಂಕು ದೃಢ ಪಡುತ್ತಿದ್ದಂತೆ ತಾಲೂಕು ಆಡಳಿತಕ್ಕೆ ಅಚ್ಚರಿ ಉಂಟಾಯಿತು.

ರಾಜನಹಳ್ಳಿಯ ಸೋಂಕಿತ ಮಹಿಳೆಯ ಪ್ರಥಮ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಿದಾಗ 9 ಜನರಲ್ಲಿ ಪಾಸಿಟಿವ್‌ ದೃಢ ಪಟ್ಟಿತು. ಇದರ ಹಿನ್ನಲೆಯಲ್ಲಿಯೇ ನಗರದ ಅಗಸರ ಓಣಿಯನ್ನು ಕಂಟೋನ್ಮೆಂಟ್‌ ಜೋನ್‌ನಾಗಿ ಘೋಷಿಸಿ, ಸೊಂಕಿತ ಮಹಿಳೆಯ ಮನೆಯ ಸುತ್ತಾ ಕ್ರೀಮಿನಾಶಕ ಸಿಂಪಡಿಸಿ, ಇಲ್ಲಿನ ನಿವಾಸಿಗಳ ಆರೋಗ್ಯದ ಬಗ್ಗೆ ಸರ್ವೆ ಮಾಡುವ ಕಾರ್ಯ ನಡೆಯಿತು. ಇಂತಹ ಸಂದರ್ಭದಲ್ಲಿ ನಗರದ ಪರಿಶಿಷ್ಠ ಕಾಲೊನಿಯಲ್ಲಿ ಮತ್ತೆ ಎರಡು ಪಾಸಿಟಿವ್‌ ಪ್ರಕರಣ ದಾಖಲಾಗಿರುವುದು ತಾಲೂಕು ಆಡಳಿತದ ನಿದ್ದೆಗೆಡಿಸಿದೆ.

ದಾವಣಗೆರೆಗೂ ತಟ್ಟಿದ ಜಿಂದಾಲ್‌ ಸೋಂಕು, 8 ಹೊಸ ಕೇಸ್‌

ಕಂಟೋನ್ಮೇಂಟ್‌ ಪ್ರದೇಶಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಘವೇಂದ್ರ ಸ್ವಾಮಿ, ಜಿಲ್ಲಾ ಮಲೇರಿಯ ಅಧಿಕಾರಿ ಡಾ. ನಟರಾಜ್‌, ಡಾ. ರೇಣುಕಾರಾದ್ಯ, ತಹಸೀಲ್ದಾರ್‌ ಕೆ.ಬಿ ರಾಮಚಂದ್ರಪ್ಪ, ತಾಲೂಕು ಆರೋಗಾಧಿಕಾರಿ ಡಾ. ಚಂದ್ರಮೋಹನ್‌, ಸಿಪಿಐ ಶಿವಪ್ರಸಾದ್‌ ಭೇಟಿ ನೀಡಿದ್ದರು.
 

Latest Videos
Follow Us:
Download App:
  • android
  • ios