ಅಪಘಾತಕ್ಕೆ ಪರಿಹಾರದ ನೀಡದ ಕೆಎಸ್‌ಆರ್‌ಟಿಸಿ ಬಸ್‌ಗಳ ಜಪ್ತಿ

ಅಪಘಾತಕ್ಕೆ ಪರಿಹಾರ ನೀಡದ ಕೆ ಎಸ್ ಆರ್ ಟಿ ಸಿ ಬಸ್ಸುಗಳನ್ನೇ ಸೀಜ್ ಮಾಡಲು ನ್ಯಾಯಾಲಯ ಆದೇಶ ನೀಡಿದೆ. 

2 KSRTC Bus Seized In Davanagere

ಹರಿಹರ [ಫೆ.07]:  ಕೆಎಸ್‌ಆರ್‌ಟಿಸಿ ಬಸ್‌ನಿಂದ ಆದ ಅಪಘಾತದಲ್ಲಿ ಮೃತಪಟ್ಟವ್ಯಕ್ತಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನಲೆಯಲ್ಲಿ ಹರಿಹರದ ಹಿರಿಯ ಸಿವಿಲ್‌ ನ್ಯಾಯಲಯವು ಹೊಸಪೇಟೆ ವಿಭಾಗದ ಎರಡು ಬಸ್‌ಗಳನ್ನು ಜಪ್ತಿ ಮಾಡುವಂತೆ ಅದೇಶ ಮಾಡಿದ ಹಿನ್ನಲೆಯಲ್ಲಿ ಗುರುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕೆ.ಎ 35 ಎಫ್‌ 415 ಮತ್ತ ಕೆಎ 35 ಎಫ್‌ 340 ನ್ಯಾಯಲಯದ ಸಿಬ್ಬಂದಿ ಹಾಗೂ ವಕೀಲರು ಜಪ್ತಿ ಮಾಡಲಾಯಿತು.

ಘಟನೆಯ ವಿವರ: 18-5-2018 ರಂದು ಹರಿಹರ ನಗರದ ಪಿ.ಬಿ ರಸ್ತೆಯಲ್ಲಿರುವ ಕೀರ್ತಿ ಹೋಟೆಲ್‌ ಎದುರು ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ದಾವಣಗೆರೆ ಕೆಟಿಜಿ ನಗರ ನಿವಾಸಿ ಎನ್‌.ಎಸ್‌. ಶ್ರೀಪತಿ(31)ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮೃತರ ವಾರಸುದಾರರು ನ್ಯಾಯಾಲಯ ಮೊರೆ ಹೋಗಿದ್ದರು.

ದಾವಣಗೆರೆ: ಮಾಜಿ ಶಾಸಕ, ಪತ್ನಿ ವಿರುದ್ಧ ಕ್ರಿಮಿನಲ್‌ ಕೇಸ್.....

ವಿಚಾರಣೆ ನಡೆಸಿದ ನ್ಯಾಯಾಲಯ ಮೃತರ ಕುಟುಂಬಕ್ಕೆ 27.58.346 ರು. ಪರಿಹಾರ ನೀಡುವಂತೆ ದಿ. 24-4-2019 ರಂದು ನ್ಯಾ.ವೈ.ಕೆ. ಬೇನಾಳ್‌ ಆದೇಶಿಸಿದ್ದರು. ಆದರೆ ಮೃತ ಕುಟುಂಬಕ್ಕೆ ಸಾರಿಗೆ ಇಲಾಖೆಯವರು ಪರಿಹಾರ ನೀಡಲು ವಿಳಂಬ ಮಾಡಿದ ಪರಿಣಾಮ ಪುನ: ನ್ಯಾಯಲಯದ ಮೊರೆ ಹೊದಾಗ 25-11-2019ರಂದು ಪರಿಹಾರ ನೀಡದಿರುವ ಕಾರಣ ನ್ಯಾಯಾಲಯ ಪರಿಹಾರಕ್ಕಾಗಿ ಎರಡು ಬಸ್‌ಗಳನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು.

ಕೆಲಸ ಕೇಳಿದ ಮಹಿಳೆ ವಿರುದ್ಧ ಕೇಸ್‌ ಹಾಕಲು ದಾವಣಗೆರೆ ಡೀಸಿ ಆದೇಶ!..

ಆದೇಶದಂತೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ನ್ಯಾಯಾಲಯದ ಅಮೀನ್‌ದಾರ್‌ ಸಿದ್ದಬಸಯ್ಯ, ಬಿ.ಎಸ್‌ ಬಸಪ್ಪ, ಶಿವಬಸವ ಆರ್‌ ಬಾಗೇವಾಡಿ, ಶಿವಕುಮಾರ ಅವರು ಕೆ.ಎ 35 ಎಫ್‌ 415 ಮತ್ತ ಕೆಎ 35 ಎಫ್‌ 340 ಈ ಬಸ್ಸುಗಳನ್ನು ಜಪ್ತಿ ಮಾಡಿ ನ್ಯಾಯಾಲಕ್ಕೆ ತೆಗೆದುಕೊಂಡು ಹೋಗಲಾಯಿತು.

ಈ ವೇಳೆ ವಕೀಲರಾದ ಬಸವರಾಜ್‌ ಓಂಕಾರಿ ಹಾಗೂ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios