Asianet Suvarna News Asianet Suvarna News

ಕಾಂಗ್ರೆಸ್‌ ಸೇರಿದ ಇಬ್ಬರು ಮುಖಂಡರು

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇದೇ ವೇಳೆ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ. 

2 Independent leaders Join Congress At  Maluru snr
Author
Bengaluru, First Published Oct 17, 2020, 11:20 AM IST
  • Facebook
  • Twitter
  • Whatsapp

ಮಾಲೂರು (ಅ.17):  ಪಕ್ಷೇತರ ಸದಸ್ಯರ ಬೆಂಬಲದಿಂದ ಇಲ್ಲಿನ ಪುರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್‌ ಪಕ್ಷ ಹಿಡಿಯುವುದು ಶತಸಿದ್ಧ ಎಂದು ಶಾಸಕ ನಂಜೇಗೌಡ ಹೇಳಿದರು.

ಅವರು ಪಟ್ಟಣದ ಕೋಚಿಮುಲ್‌ ಕಚೇರಿಯಲ್ಲಿ ಪಕ್ಷೇತರ ಸದಸ್ಯರಿಬ್ಬರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ 27 ಸ್ಥಾನದಲ್ಲಿ ಹನ್ನೊಂದು ಗೆದಿದ್ದರೂ ಜೆಡಿಎಸ್‌ನ ಏಕೈಕ ಸದಸ್ಯ ಹಾಗೂ ಬಂಡಾಯ ಕಾಂಗ್ರೆಸ್‌ ಸದಸ್ಯರ ಬೆಂಬಲದಿಂದ 13ಕ್ಕೆ ಹೆಚ್ಚಿದ್ದ ನಮ್ಮ ಶಕ್ತಿಗೆ ಇಂದು ಇಬ್ಬರು ಪಕ್ಷೇತರ ಸದಸ್ಯರು ಬೇಷರತ್‌ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ನಮ್ಮ ಶಕ್ತಿ ಹದಿನೈದಕ್ಕೆ ಏರಿದು, ಈ ಬಾರಿ ಪುರಸಭೆ ಆಡಳಿತ ಕಾಂಗ್ರೆಸ್‌ ಹಿಡಿಯಲಿದೆ ಎಂದರು.

200 ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ : ಇದೇ ನನ್ನ ರಾಜಕೀಯ ಎಂದ ಡಿಕೆಶಿ

ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದಿದ್ದ 1,200 ಬಡವರ ನಿವೇಶನ ಹಂಚಿಕೆಗೆ ಚಾಲನೆ ನೀಡಲಾಗಿದ್ದು, ಈ ಸಂಬಂಧ ಪ್ರತಿ ಫಲಾನುಭವಿಗಳು ನೀಡಿದ್ದ 40 ಸಾವಿರ ರು.ಗಳನ್ನು ಬಡ್ಡಿ ಸಮೇತ ಹಿಂದುರುಗಿಸಿ ಉಚಿತವಾಗಿ ನಿವೇಶನ ನೀಡಲು ಎಲ್ಲ ತಯಾರಿ ನಡೆದಿದ್ದು, ಶೀಘ್ರವಾಗಿ ವಿತರಣೆ ಕಾರ‍್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ನನ್ನ ಪಕ್ಷಾತೀತ ಆಡಳಿತವನ್ನು ಗಮನಿಸಿರುವ ಹಾಲಿ ಸದಸ್ಯರಾಗಿರುವ ಮಾಜಿ ಪುರಸಭೆ ಉಪಾಧ್ಯಕ್ಷ ಎ.ರಾಜಪ್ಪ ಹಾಗೂ ಶ್ರೀನಿವಾಸ್‌ ಅವರು ನಮ್ಮಗೆ ಬೇಷರತ್‌ ಬೆಂಬಲ ಸೂಚಿಸಿದ್ದು, ಅವರಿಗೆ ಕೃತಜ್ಞತನಾಗಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂಬಲ ಸೂಚಿಸಿದ್ದ ರಾಜಪ್ಪ ಹಾಗೂ ಶ್ರೀನಿವಾಸ್‌ ಮಾತನಾಡಿ, ಶಾಸಕರ ಅಭಿವೃದ್ಧಿ ಕಾರ‍್ಯಕ್ಕೆ ಮನಸೋತಿದ್ದು, ವಾರ್ಡ್‌ ಸದಸ್ಯರ ಅಭಿಪ್ರಾಯದಂತೆ ವಾರ್ಡ್‌ ಅಭಿವೃದ್ಧಿಗಾಗಿ ಶಾಸಕರ ತೀರ್ಮಾನಕ್ಕೆ ಬೆಂಬಲ ಸೂಚಿಸುತ್ತಿರುವುದಾಗಿ ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ. ಮುನಿಯಪ್ಪ ಮಾತನಾಡಿದರು. ಪುರಸಭೆ ಸದಸ್ಯರಾದ ವಿಜಯಲಕ್ಷ್ಮೇ ಲಕ್ಷ್ಮೇನಾರಾಯಣ್‌, ಭಾರತಿ ಶಂಕರಪ್ಪ, ಪದ್ಮಾವತಿ ವೆಂಕಟಸ್ವಾಮಿ, ಭವ್ಯ ಶಂಕರ್‌, ಹೇಮಾ ಮುನಿರಾಜು, ಕೋಮಲ ನಾರಾಯಣ್‌, ಮುರಳಿಧರ್‌, ವೆಂಕಟೇಶ್‌, ಮಂಜುನಾಥ್‌, ಇಂತಿಯಾಜ್‌, ಜಾಕೀರ್‌ ಖಾನ್‌, ಮಾಜಿ ಜಿ.ಪಂ.ಸದಸ್ಯ ಜಿ.ಇ.ರಾಮೇಗೌಡ, ಲಕ್ಷ್ಮೇ ನಾರಾಯಣ್‌, ಅಂಜನಿ ಸ​ಮಣ್ಣ, ವಿಜಯಾ ನರಸಿಂಹ, ಮಧುಸೂಧನ್‌, ಅಶ್ವಥ ರೆಡ್ಡಿ, ಪ್ರದೀಪ್‌ ರೆಡ್ಡಿ, ಗೋವರ್ಧನ್‌ ರೆಡ್ಡಿ, ಹನುಮಂತರೆಡ್ಡಿ, ನವೀನ್‌, ಮೈ. ನಾರಾಯಣಸ್ವಾಮಿ, ಶಬ್ಬೀರ್‌ ವುಲ್ಲಾ, ಶಂಕರ್‌, ವೆಂಕಟಸ್ವಾಮಿ, ಕೋಳಿ ನಾರಾಯಣ್‌, ಶಂಕರಪ್ಪ, ಹರೀಶ್‌ ಗೌಡ, ಪಾಂಡು ಇದ್ದರು.

Follow Us:
Download App:
  • android
  • ios