Asianet Suvarna News Asianet Suvarna News

ಆನೆಯ ಹಣೆ ಮೇಲೆ 2 ಇಂಚಿನಷ್ಟು ಅಗಲದ ಗುಂಡಿನ ಗುರುತು ಪತ್ತೆ?: ದಂತಗಳು ನಾಪತ್ತೆ

ಭದ್ರಾ ಅಭಯಾರಣ್ಯದ ಹುಲಿ ಸಂರಕ್ಷಿತಾ ಅರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದ ಅಲ್ದಾರ ಸಮೀಪದ ಬೈರಾಪುರ ಹಿನ್ನೀರಿನ ದಟ್ಟಅರಣ್ಯ ಪ್ರದೇಶದಲ್ಲಿ ಆನೆಯ ಕಳೆಬರಹ ಪತ್ತೆಯಾಗಿದೆ. 

2 inch wide bullet mark was found on the elephants forehead at chikkamagaluru gvd
Author
First Published Sep 26, 2024, 6:06 PM IST | Last Updated Sep 26, 2024, 6:06 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.26): ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಭದ್ರಾ ಅಭಯಾರಣ್ಯದ ಹುಲಿ ಸಂರಕ್ಷಿತಾ ಅರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದ ಅಲ್ದಾರ ಸಮೀಪದ ಬೈರಾಪುರ ಹಿನ್ನೀರಿನ ದಟ್ಟಅರಣ್ಯ ಪ್ರದೇಶದಲ್ಲಿ ಆನೆಯ ಕಳೆಬರಹ ಪತ್ತೆಯಾಗಿದೆ. 

ಆನೆ ಸತ್ತ ಜಾಗದಲ್ಲಿ ದಂತಗಳು ನಾಪತ್ತೆ: ಆನೆ ಮೃತಪಟ್ಟು ಸುಮಾರು ಒಂದು ತಿಂಗಳು ಕಳೆದಿದೆ. ಆನೆಯ ಆಸ್ತಿ ಪಂಚರ ಸ್ಥಳೀಯ ಮೀನುಗಾರಿಗೆ ಕಂಡು ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆನೆ ತಲೆಯ ಹಣೆ ಭಾಗಕ್ಕೆ ಗುಂಡು ಹೊಡೆದಿರುವ ಗುರುತು ಪತ್ತೆಯಾಗಿದೆ. ಆನೆ ಹಣೆಯ ಮಧ್ಯ ಭಾಗದಲ್ಲಿ ಸುಮಾರು ಎರಡು ಇಂಚು ಅಗಲದ ಗುಂಡಿನ ರಂಧ್ರ ಎದ್ದು ಕಾಣುತ್ತಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆನೆ ದಂತಕ್ಕಾಗಿ ದಂತಚೋರರ ತಂಡ ಭದ್ರಾ ಅಭಯಾರಣ್ಯ ಭಾಗದಲ್ಲಿ ಸಕ್ರಿಯಾವಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ. 

ಅರಣ್ಯ ಇಲಾಖೆಯ ವಿರುದ್ದ ಪರಿಸರವಾದಿಗಳು ಕಿಡಿ: ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯ ಕಳೆಬರಹವನ್ನ ಸರಿಯಾಗಿ ತಪಾಸಣಾ ಮಾಡಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಆನೆಯನ್ನು ದಂತಕ್ಕಾಗಿ ಹತ್ಯೆ ಮಾಡಿರುವ ಅನುಮಾನ ಸ್ಥಳೀಯರನ್ನ ಕಾಡುತ್ತಿದೆ. ಆದರೆ, ಆನೆ ಸತ್ತ ಜಾಗದಲ್ಲಿ ಆನೆಯ ಯಾವುದೇ ದಂತಗಳು ಕಂಡು ಬಂದಿಲ್ಲ. ಆನೆ ದಂತಗಳು ದಂತಚೋರರ ಪಾಲಾಗಿವೆ ಎನ್ನುವ ದಟ್ಟ ಅನುಮಾನ ಎಲ್ಲರನ್ನ ಕಾಡತೊಡಗಿದೆ. 

ಸ್ಟಾರ್ಸ್‌ಗಳಾದ ಚಿರಂಜೀವಿ, ನಾಗಾರ್ಜುನ, ವಿಕ್ಟರಿ ವೆಂಕಟೇಶ್ ಈ ದಿನವನ್ನು ಮರೆಯೋದೆ ಇಲ್ಲ: ಏನಾಯ್ತು ಅಂದ್ರೆ..

ಅಧಿಕಾರಿಗಳ  ನಿರ್ಲಕ್ಷ್ಯದಿಂದ ದಂತಕ್ಕಾಗಿ ಆನೆಯನ್ನು ಹತ್ಯೆ ಮಾಡಿರುವ  ಸಂಭಂದ  ಹಿರಿಯ ಅರಣ್ಯಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕಿದೆ. ಆದರೆ, ಯಾವುದೇ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಅರಣ್ಯ ಸಚಿವರು ಖುದ್ದು ಪರಿಶೀಲಿಸಿ ದಂತ ಚೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಹಾಗೂ ಸ್ಥಳಿಯರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios