ಬೆಳಗಾವಿ, [ಜ.10]: ಸರ್ಕಾರಿ ಬಸ್ ಹರಿದು ಇಬ್ಬರು ಯಲ್ಲಮ್ಮ ಭಕ್ತರ ಸಾವನ್ನಪ್ಪಿರುವ ಘಟನೆ ಇಂದು [ಶುಕ್ರವಾರ] ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ನಡೆದಿದೆ.

ಬೆಳಗಾವಿಯ ಶಹಾಪುರ ನಿವಾಸಿ ನಿಕಿತಾ ರಮೇಶ್ ಹದಗಲ್(25) ಮತ್ತು ಚಿಂಚಕಂಡಿ ನಿವಾಸಿ ಬಸಪ್ಪ ವೆಂಕಪ್ಪ ಹಳೇಮನಿ(34) ಮೃತ ದುರ್ದೈವಿಗಳು.

ಬೆಳಗಾವಿ ಯೋಧ ಒಡಿಶಾ ಲಾಡ್ಜ್‌ನಲ್ಲಿ ನೇಣಿಗೆ ಶರಣು 

 ನಿಕಿತಾ ಮತ್ತು ಬಸಪ್ಪ ಸವದತ್ತಿ ಯಲ್ಲಮ್ಮ ದೇವಿಯ ಜಾತ್ರೆಗೆ ಬಂದಿದ್ದರು. ದುರದೃಷ್ಟ ಅಂದ್ರೆ ಇವರಿಬ್ಬರು ಯಲ್ಲಮ್ಮ ಗುಡ್ಡದ ಜೋಗೂಳಬಾವಿ ರಸ್ತೆ ಇಳಿಜಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನು ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆ ದೂರು ದಾಖಲಾಗಿದೆ. ಅಪಘಾತ ಹೇಗೆ ನಡೆಯಿತು ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.