Asianet Suvarna News Asianet Suvarna News

ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ: 2 ಕೋಟಿ ದಂಡ

ಬೆಂಗಳೂರಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ| ವಾಣಿಜ್ಯ ಉದ್ದಿಮೆಗಳಿಗೆ 2 ಕೋಟಿ ರು. ದಂಡ|

2 Crore rs Fine for Use of Prohibited Plastics, Unscientific Waste Disposal in Bengaluru
Author
Bengaluru, First Published Jan 27, 2020, 10:44 AM IST

ಬೆಂಗಳೂರು(ಜ.27): ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ವಾಣಿಜ್ಯ ಉದ್ದಿಮೆಗಳಿಂದ ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ 2.13 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಪ್ರಿಲ್‌ 1ರಿಂದ ಡಿಸೆಂಬರ್‌ 31ರ ಅವಧಿಯಲ್ಲಿ ನಗರದ 55,371 ಹೋಟೆಲ್‌, ರೆಸ್ಟೋರೆಂಟ್‌, ಬಾರ್‌, ಬೇಕರಿ ಸೇರಿದಂತೆ ವಿವಿಧ ವಾಣಿಜ್ಯ ಉದ್ದಿಮೆಯ ಮಳಿಗೆಗಳಿಗೆ ಭೇಟಿ ನೀಡಿದ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿ ಅವೈಜ್ಞಾನಿಕ ಕಸ ವಿಲೇವಾರಿ, ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಗಮನಿಸಿ ದಂಡ ವಿಧಿಸಿದ್ದಾರೆ. ಈ ಪೈಕಿ ಕಸ ವಿಂಗಡಣೆ ಮಾಡುವುದರಲ್ಲಿ ಲೋಪವೆಸಗಿದ ಹಾಗೂ ಸಮರ್ಪಕವಾಗಿ ಕಸ ನೀಡದ ನಗರದ ವಾಣಿಜ್ಯ ಉದ್ಯಮಗಳಿಗೆ 28.95 ಲಕ್ಷ ದಂಡ ವಿಧಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡಿದಕ್ಕೆ .1.84 ಕೋಟಿ ದಂಡ ವಸೂಲಿ ಮಾಡಲಾಗಿದೆ. ಜತೆಗೆ 47.8 ಸಾವಿರ ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಲಯ ಕಸ ವಿಂಗಡಣೆ ದಂಡ ಸಂಗ್ರಹ (ಲಕ್ಷಗಳಲ್ಲಿ) ನಿಷೇಧಿತ ಪ್ಲಾಸ್ಟಿಕ್‌ ಬಳಕೆ (ಲಕ್ಷಗಳಲ್ಲಿ)

ಪಶ್ಚಿಮ 3.66 45.95
ಪೂರ್ವ 18.2 13.83
ದಕ್ಷಿಣ 4.69 16.80
ಬೊಮ್ಮನಹಳ್ಳಿ 2.32 64.84
ದಾಸರಹಳ್ಳಿ 0 63.7
ರಾಜರಾಜೇಶ್ವರಿ ನಗರ 1.05 6.68
ಯಲಹಂಕ 1.20 8.58
ಮಹದೇವಪುರ 14.20 21.27

Follow Us:
Download App:
  • android
  • ios