ದಾವಣಗೆರೆ (ಏ.22):  ದಾವಣಗೆರೆಯಲ್ಲಿ ರೆಮ್ ಡಿಸಿವರ್ ಲಸಿಕೆ ಅಕ್ರಮ ಮಾರಾಟ ಜಾಲ ಪತ್ತೆಯಾಗಿದೆ.  ಜಿಲ್ಲಾಸ್ಪತ್ರೆ ಹಿಂಭಾಗದಲ್ಲೇ ಆಟೋದಲ್ಲಿ ಇಟ್ಟು ರೆಮ್ಡಿಸಿವರ್ ಲಸಿಕೆ ಮಾರಾಟ ಮಾಡುತ್ತಿದ್ದ ವೇಳೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. 

 ದಾವಣಗೆರೆ ಪೊಲೀಸರ ನೇತೃತ್ವದಲ್ಲಿಂದು ದಾಳಿ ನಡೆಸಿದ್ದು ಜಿಲ್ಲಾಸ್ಪತ್ರೆಯ ಫಾರ್ಮಾಸಿಸ್ಟ್ ಹಾಗೂ ಆಟೋ ಚಾಲಕನನ್ನು ಬಂಧಿಸಲಾಗಿದೆ.  9 ರೆಮ್ಡಿಸಿವರ್ ಲಸಿಕೆ ಬಾಟಲ್ ಹಾಗೂ 10 ಸಾವಿರ ರೂ. ಆಟೋ ವಶಕ್ಕೆ ಪಡೆಯಲಾಗಿದೆ. ಪಾರ್ಮಾಸಿಸ್ಟ್ ಮಂಜುನಾಥ, ಆಟೋ ಚಾಲಕ ಗಣೇಶಪ್ಪ ಎಂಬುವರನ್ನು ಬಂಧಿಸಲಾಗಿದೆ. 

ದುಡ್ಡಿನ ಆಸೆಗೆ ಮಂಜುನಾಥ, ಗಣೇಶಪ್ಪಗೆ ಲಸಿಕೆ ನೀಡಿ ಮಾರಾಟ ಮಾಡಲು ಹೇಳಿದ್ದು,  ಬಂದ ಹಣದಲ್ಕಿ ಇಬ್ಬರು ಹಂಚಿಕೊಳ್ಳುವ ಪ್ಲಾನ್ ಮಾಡಿದ್ದರು.  ಹೀಗಾಗಿ, ಜಿಲ್ಲಾಸ್ಪತ್ರೆಗೆ ಬಂದಿದ್ದ 9 ಬಾಟಲ್ ಲಸಿಕೆಯನ್ನ ಗಣೇಶಪ್ಪಗೆ ನೀಡಲಾಗಿತ್ತು. 

ಕೊರೋನಾ 2ನೇ ಅಲೆ: ಕೇಂದ್ರದ ಅಂಕಿ ಅಂಶದಲ್ಲಿ ಬಯಲಾಯ್ತು ಮಹತ್ವದ ವಿಚಾರ! .

  ಜಿಲ್ಲಾಸ್ಪತ್ರೆ ಹಿಂಭಾಗದಲ್ಲೆ ರಾಜಾರೋಷವಾಗಿ ಲಸಿಕೆ ಮಾರಾಟ ಮಾಡುತ್ತಿದ್ದರು.  ಈ ಬಗ್ಗೆ ಔಷಧ ಪರಿವೀಕ್ಷಕಿ ಗೀತಾಗೆ ಮಾಹಿತಿ ಲಭಿಸಿದ್ದು,  ಮಾಹಿತಿ ಹಿನ್ನಲೆ ಬಡಾವಣೆ ಠಾಣೆ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.  9 ಬಾಟಲ್ ಲಸಿಕೆ, 10 ಸಾವಿರ ರೂ. ನಗದು ಸಮೇತ ಗಣೇಶಪ್ಪ ಸಿಕ್ಕಿಬಿದ್ದಿದ್ದಾರೆ.  

ಬಡಾವಣೆ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.