Asianet Suvarna News Asianet Suvarna News

ಬೆಂಗಳೂರು: ಬೈಕಲ್ಲಿ ಟ್ರಿಪಲ್‌ ರೈಡಿಂಗ್‌, ಆಟೋಗೆ ಬೈಕ್‌ ಡಿಕ್ಕಿಯಾಗಿ ಒಬ್ಬ ಬೈಕ್‌ ಸವಾರ ಸಾವು

ಘಟನೆ ವೇಳೆ ಮೂವರು ಸವಾರರು ಹೆಲ್ಲೆಟ್ ಧರಿಸಿರಲಿಲ್ಲ. ಸಿ.ಟಿ. ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಾರರು ಬೈಕ್ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಧ್ಯೆ ಕುಳಿತ್ತಿದ್ದ ಮೊಹಮ್ಮದ್ ನೌಹಿದುರ್ ರೆಹಮಾನ್‌ಗೆ ಗಂಭೀರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಬಳಿಕ ಸ್ಥಳೀಯರು ಸವಾರರನ್ನು ಸಮೀಪದ ಆಸ್ಪತ್ರೆಗೆ ಕರೆ ದೊಯ್ದಿದ್ದಾರೆ. ವೈದ್ಯರು ನೌಹಿದುರ್ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ

19 Years Old Young man Bike Accident in Bengaluru grg
Author
First Published Sep 3, 2024, 4:46 PM IST | Last Updated Sep 3, 2024, 4:46 PM IST

ಬೆಂಗಳೂರು(ಸೆ.03): ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಹೋಗುವಾಗ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಮಧ್ಯ ಕುಳಿತ್ತಿದ್ದ ಸವಾರ ಮೃತಪಟ್ಟು ಇಬ್ಬರು ಸವಾರರು ಗಾಯಗೊಂಡ ಘಟನೆ ಶನಿವಾರ ರಾತ್ರಿ 8.30ಕ್ಕೆ ಬಿಜಿಎಸ್ ಮೇಲ್ಸೇತುವೆಯ ಜಾಮೀಯ ಮಸೀದಿ ಎದುರು ನಡೆದಿದೆ.

ಜೆ.ಜೆ.ನಗರದ ರಾಯಪುರ ನಿವಾಸಿ ಮೊಹಮ್ಮದ್ ನೌಹಿದು‌ರ್ ರೆಹಮಾನ್(19) ಮೃತ ಸವಾರ. ಸವಾರ ಮೊಹಮ್ಮದ್ ಶೋಯೆಬ್ ಉಲ್ಲಾಖಾನ್ ಮತ್ತು ಹಿಂಬದಿ ಸವಾರ ಅಮೀರ್ ಫಸಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಯುವಕರು ಜೆ.ಜೆ.ನಗರದ ರಾಯಪುರ ನಿವಾಸಿಗಳಾಗಿದ್ದಾರೆ. ಆ.31 ರಾತ್ರಿ ಸಿ.ಟಿ.ಮಾರ್ಕೆಟ್ ಕಡೆಯಿಂದ ಜೆ. ಜೆ.ನಗರದ ಕಡೆಗೆ ಬೈಕ್‌ನಲ್ಲಿ ತ್ರಿಪಲ್ ರೈಡಿಂಗ್ ಹೊರಟ್ಟಿದ್ದರು. ಮಾರ್ಗದ ಬಿಜಿಎಸ್ ಮೇಲೇತುವೆಯಲ್ಲಿ ಬರುವಾಗ, ಬೈಕ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿಯಾದ ಪರಿಣಾಮ ಮೂವರು ಅತಿವೇಗದ ಚಾಲನೆ ತ್ರಿಪಲ್ ರೈಡಿಂಗ್ ವೇಳೆ ಮೊಹಮ್ಮದ್ ಶೋಯೆಬ್ ಉಲ್ಲಾಖಾನ್ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. 

ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್​ಗೆ ಗುದ್ದಿ ಫ್ಲೈಓವರ್​ನಿಂದ ಕೆಳಗೆ ಬಿದ್ದ ಕಾರು!

ಘಟನೆ ವೇಳೆ ಮೂವರು ಸವಾರರು ಹೆಲ್ಲೆಟ್ ಧರಿಸಿರಲಿಲ್ಲ. ಸಿ.ಟಿ. ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಾರರು ಬೈಕ್ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಧ್ಯೆ ಕುಳಿತ್ತಿದ್ದ ಮೊಹಮ್ಮದ್ ನೌಹಿದುರ್ ರೆಹಮಾನ್‌ಗೆ ಗಂಭೀರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಬಳಿಕ ಸ್ಥಳೀಯರು ಸವಾರರನ್ನು ಸಮೀಪದ ಆಸ್ಪತ್ರೆಗೆ ಕರೆ ದೊಯ್ದಿದ್ದಾರೆ. ವೈದ್ಯರು ನೌಹಿದುರ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Latest Videos
Follow Us:
Download App:
  • android
  • ios