ಹಳೇಬೀಡು(ಅ.23) : ಹೋಬಳಿಯ ರಾಜನಶಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸೀಪುರ ಗ್ರಾಮದ ಭೋವಿ ಕಾಲೋನಿಯ ಜೆಡಿಎಸ್‌ ಮತ್ತು ಕಾಂಗ್ರೆಸ್‌ ತೊರೆದು 150ಕ್ಕೂ ಹೆಚ್ಚು ಮುಖಂಡರು ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿ ಸುರೇಶ್‌ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಎಚ್‌.ಕೆ.ಸುರೇಶ್‌ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾರ‍್ಯವೈಖರಿ ನೋಡಿ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದರು.

ಬೇಲೂರು ಮಂಡಲದ ಅಧ್ಯಕ್ಷ ಅಡಗೂರು ಆನಂದ್‌ ಮಾತನಾಡಿ, ಗ್ರಾಪಂ, ತಾಪಂ, ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಈ ಮಹಾ ಶಕ್ತಿ ಕೇಂದ್ರದಿಂದ ಆಯ್ಕೆಯಾದ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಗಮನಿಸಿ ಆ ವ್ಯಕ್ತಿಗಳಿಗೆ ಒಳ್ಳೆಯ ಸ್ಥಾನಮಾನ ನೀಡಲಾಗುವುದು ಎಂದು ತಿಳಿಸಿದರು.

'RCB ಫ್ಯಾನ್ಸ್ ಓಟು ಹಾಕಿದ್ರೆ ಶಿರಾದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ'

ತಾಪಂ ಮಾಜಿ ಸದಸ್ಯ ಬಿ.ಎಸ್‌.ಸೋಮಶೇಖರ್‌ ಮಾತನಾಡಿ, ಯಥಾ ರಾಜ ತಥಾ ಪ್ರಜೆ ಎಂಬ ಗಾದೆ ಮಾತಿನ ಅರ್ಥ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತದಿಂದ ರಾಜ್ಯದ ಜನತೆಗೆ ಮಳೆ ಬೆಳೆಯಿಂದ ಸಂವೃದ್ಧಿಯಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೆಬ್ಬಾಳು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌, ಸುರೇಶ್‌ ಜೋಸ್ವ, ಮೋಹನ್‌, ದಿಲೀಪ್‌, ಚೇತನ್‌, ಪ್ರಸನ್ನ, ಶಶಿಧರ್‌, ಅಣ್ಣಪ್ಪ, ಮಂಜು, ಗುರು ದತ್ತ ಹಾಜರಿದ್ದರು.