ಬೆಂಗಳೂರು(ಜು.11): ನಗರದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯ​ರ್‍ಸ್ಗೆ ಸೋಂಕು ಹಬ್ಬುತ್ತಿದೆ.

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 15ಕ್ಕೂ ಹೆಚ್ಚು ನರ್ಸ್‌ಗಳಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯ ಇತರೆ ಸಿಬ್ಬಂದಿ, ಚಿಕಿತ್ಸೆ ಪಡೆಯುತ್ತಿರು ರೋಗಿಗಳು ಹಾಗೂ ಅವರ ಸಂಬಂಧಿಕರಲ್ಲಿ ಆತಂಕ ಹೆಚ್ಚಾಗಿದೆ.

ಕೊರೋನಾ ಮಣಿಸಿದ ಬೆಂಗಳೂರಿನ 93ರ ವೃದ್ಧ: ಮಧುಮೇಹ ಇದ್ದರೂ ಗುಣಮುಖ!

ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಕೊರೋನಾ ಸೋಂಕಿತ ತಾಯಿ ಹಾಗೂ ಮಗು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ ಪ್ರಕರಣ ವರದಿಯಾಗಿತ್ತು. ಆಸ್ಪತ್ರೆ ಸಿಬ್ಬಂದಿಗೇ ಕೊರೋನಾ ಬಾಧಿಸುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ.